ಹಾವೇರಿ: ಲಾಕ್ಡೌನ್ ಸಮಯದಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ನೆರವಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ.
ಜಿಲ್ಲೆಯ ಹಿರೇಕೆರೂರಿನ ಪೌರಕಾರ್ಮಿಕರಿಗೆ ಸೃಷ್ಟಿ ಪಾಟೀಲ್ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಅಂತರ ಕಾಯ್ದುಕೊಳ್ಳಲು ತಿಳಿ ಹೇಳಿದ್ದಾರೆ. ಅಲ್ಲದೇ ಬಡ ಪೌರಕಾರ್ಮಿಕರಿಗೆ ದಿನೋಪಯೋಗಿ ವಸ್ತುಗಳ ಕಿಟ್‌ಗಳನ್ನು ವಿತರಿಸಿದರು. ಜನಸಾಮಾನ್ಯರು ಆರೋಗ್ಯದಿಂದ ಇರಲು ಪೌರಕಾರ್ಮಿಕರ ಪಾತ್ರ ಅಮೂಲ್ಯವಾದುದು ಎಂದು ಸೃಷ್ಟಿ ಪಾಟೀಲ್ ಪೌರಕಾರ್ಮಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಪೌರ ಕಾರ್ಮಿಕರಿಗೆ ಕೃಷಿ ಸಚಿವರ ಪುತ್ರಿಯಿಂದ ಭೋಜನ ವ್ಯವಸ್ಥೆ - ಕೃಷಿ ಸಚಿವ
ಜಿಲ್ಲೆಯ ಹಿರೇಕೆರೂರಿನ ಪೌರಕಾರ್ಮಿಕರಿಗೆ ಸೃಷ್ಟಿ ಪಾಟೀಲ್ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಅಂತರ ಕಾಯ್ದುಕೊಳ್ಳಲು ತಿಳಿ ಹೇಳಿದ್ದಾರೆ. ಅಲ್ಲದೇ ಬಡ ಪೌರಕಾರ್ಮಿಕರಿಗೆ ದಿನೋಪಯೋಗಿ ವಸ್ತುಗಳ ಕಿಟ್‌ಗಳನ್ನು ವಿತರಿಸಿದರು. ಜನಸಾಮಾನ್ಯರು ಆರೋಗ್ಯದಿಂದ ಇರಲು ಪೌರಕಾರ್ಮಿಕರ ಪಾತ್ರ ಅಮೂಲ್ಯವಾದುದು ಎಂದು ಸೃಷ್ಟಿ ಪಾಟೀಲ್ ಪೌರಕಾರ್ಮಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.