ETV Bharat / state

ನಿಯತ್ತಿನ ಶ್ವಾನಕ್ಕೆ ಗುಡಿ ಕಟ್ಟಿ ನಿತ್ಯ ಪೂಜೆ.. ರಾಣೇಬೆನ್ನೂರಿನಲ್ಲೊಬ್ಬ ವಿಶೇಷ ಪ್ರಾಣಿಭಕ್ತ!!

ತಂದೆ-ತಾಯಿ, ಇಲ್ಲವೇ ತಮ್ಮ ಪ್ರೀತಿ ಪಾತ್ರರ ನೆನೆಪಿಗಾಗಿ ದೇವಸ್ಥಾನ ಕಟ್ಟಿಸಿ ಪೂಜೆ ಮಾಡುವುದನ್ನು ನೋಡಿದ್ದೇವೆ. ಜನಸೇವೆ ಮಾಡಿ ಹೆಸರುವಾಸಿಯಾಗಿ ಅಮರವಾದ ರಾಜಕಾರಣಿಗಳ ಗುಡಿ ಕಟ್ಟಿಸಿದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬರು ನಿಯತ್ತಿನ ನಾಯಿಗೆ ದೇಗುಲ ಕಟ್ಟಿಸಿ ನಿತ್ಯ ಪೂಜೆ ಮಾಡ್ತಿದ್ದಾರೆ..

a-man-built-temple-for-his-lovely-dog-and-he-doing-daily-pooja-in-ranebennur-haveri-district
ನಿಯತ್ತಿನ ಶ್ವಾನಕ್ಕೆ ಗುಡಿ ಕಟ್ಟಿ ನಿತ್ಯ ಪೂಜೆ; ರಾಣೆಬೆನ್ನೂರಿನಲ್ಲೊಬ್ಬ ವಿಶೇಷ ಆರಾಧಕ
author img

By

Published : Jun 19, 2020, 4:30 PM IST

ರಾಣೇಬೆನ್ನೂರು(ಹಾವೇರಿ) : ನಗರದ ನೇಕಾರ ಕಾಲೋನಿಯ ಚಂದ್ರಶೇಖರಸ್ವಾಮಿ ಎಂಬುವರು ನಿಯತ್ತಿನ ನಾಯಿಗೆ ಒಂದು ದೇವಸ್ಥಾನ ಕಟ್ಟಿ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ದೇವರ ಭಕ್ತಿಗಿಂತ ಹೆಚ್ಚಾಗಿ ರಾಜಾ ನಾರಾಯಣನನ್ನೇ ನಂಬಿರುವ ಇವರು, ತಮ್ಮ ಪಾಲಿನ‌ ಈಶ್ವರ ಇದು ಎಂದು ದಿನ ನಿತ್ಯ ಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

13 ವರ್ಷಗಳ ಹಿಂದೆ ತಮ್ಮಲ್ಲಿ ಒಂದು ಪ್ರೀತಿಯ ರಾಜಾ ಎಂಬ ನಾಯಿಯನ್ನು ಸಾಕಿದ್ದರು. ಅದರಲ್ಲಿ ದೈವ ಸ್ವರೂಪ, ಮನುಷ್ಯನ ಎಲ್ಲಾ ಗುಣಗಳು ಮತ್ತು ಲಕ್ಷಣಗಳನ್ನು ನಾಯಿಯಲ್ಲಿ ಕಂಡಿದ್ದರು. ಅದಕ್ಕೆ ಸಾಲೂರ ಸ್ವಾಮಿಗಳ ಮೂಲಕ ಲಿಂಗ ಧೀಕ್ಷೆ ಮಾಡಿಸಿದ್ದರು. ನಿತ್ಯ ಸ್ವಾಮೀಜಿ ಪೂಜೆ ಮಾಡುವಾಗ ಇಷ್ಟಲಿಂಗದ ಪಕ್ಕ ಬಂದು ಕೂತು ನಾಯಿಯು ಪೂಜೆ ಮಾಡುತಿತ್ತು. ಆದರೆ, ಕಳೆದ 3 ವರ್ಷಗಳ ಹಿಂದೆ ನಾಯಿ ಮರಣವಾಗಿದೆ. ಇಂತಹ ದೈವ ಸ್ವರೂಪಿ ನಾಯಿಯನ್ನು ಸಮಾಧಿ ಮಾಡಿ, ಇದಕ್ಕೊಂದ ಗುಡಿ ಕಟ್ಟಿ ನಿತ್ಯ ಪೂಜೆ ಸಲ್ಲಿಸುತ್ತಿದ್ದೇನೆ ಎನ್ನುತ್ತಾರೆ ಚಂದ್ರಶೇಖರಸ್ವಾಮಿ.

ನಿಯತ್ತಿನ ಶ್ವಾನಕ್ಕೆ ಗುಡಿ ಕಟ್ಟಿ ನಿತ್ಯ ಪೂಜೆ..

ರಾಜನಾರಾಯಣ ದೇವಸ್ಥಾನ ಜತೆಗೆ ಸುಮಾರು 10 ನಾಯಿಗಳನ್ನು ಸಾಕಿ ಅವುಗಳ ಪಾಲನೆ ಮತ್ತು ಪೋಷಣೆ ಮಾಡುತ್ತಿದ್ದಾರೆ. ಅವುಳಿಗೆ ಮಹಾಭಾರತದಲ್ಲಿ ಬರುವ ಅರ್ಜುನ, ನಕುಲ, ಸಹದೇವ, ಭೀಮ, ನಾರದ ಎಂಬ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಎಲ್ಲಾ ನಾಯಿಗಳು ನಿತ್ಯ ನಾರಾಯಣ ಸ್ವಾಮಿ ಪೂಜೆ ನಡೆಯುವಾಗ ದೇವಸ್ಥಾನದ ಬಾಗಿಲು ಮುಂದೆ ಬಂದು ಕುಂತು ಪೂಜೆ ವೀಕ್ಷಣೆ ಮಾಡುವುದು ಇಲ್ಲಿ ವಿಶೇಷ.

ಚಂದ್ರಶೇಖರಸ್ವಾಮಿ ದಂಪತಿ ಶ್ವಾನಗಳನ್ನ ಪ್ರೀತಿಯಿಂದ ಸಾಕಿ ಸಲುಹಿ ಮನೆಮಂದಿಯಂತೆ ಶ್ವಾನಕ್ಕೂ ಸ್ಥಾನ ನೀಡಿ ಉಪಚಾರ ಮಾಡುತ್ತಿದ್ದಾರೆ. ತಾವು ವಾಸಿಸುವ ಮನೆಯನ್ನು ನಾಯಿಗಳಿಗೆ ಮೀಸಲಿಟ್ಟು, ದೇವಸ್ಥಾನಕ್ಕಾಗಿ ಕಮಿಟಿ ರಚಿಸಿದ್ದಾರೆ. ಇಲ್ಲಿನ ಅಕ್ಕಪಕ್ಕದ ಜನರು ನಿತ್ಯ ಪೂಜೆ ಸಲ್ಲಿಸುವ ಮೂಲಕ ನಿಯತ್ತಿನ ಪ್ರಾಣಿ ಶ್ವಾನದ ಮೇಲಿನ ಪ್ರೀತಿಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.