ಹಾವೇರಿ: ಕೊರೊನಾ ಲಾಕ್ ಡೌನ್‌ನಿಂದಾಗಿ ಹೂವು ಮಾರಾಟ ಆಗದಿರೋದಕ್ಕೆ ಬೇಸತ್ತು ರೈತನೋರ್ವ ತಾನೇ ಹೂವಿನ ಬೆಳೆ ನಾಶ ಮಾಡಿದ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಭೋಗಾವಿ ಗ್ರಾಮದ ಮಲ್ಲೇಶಪ್ಪ ತೊಗರ್ಸಿ ಎಂಬ ರೈತ ಇಪ್ಪತ್ತೈದು ಗುಂಟೆ ಜಮೀನಿನಲ್ಲಿ ಸೇವಂತಿ ಹೂವು ಬೆಳೆದಿದ್ದ. ಹೂವು ಬೆಳೆಯಲು ಹದಿನೈದು ಸಾವಿರ ರುಪಾಯಿ ಖರ್ಚು ಮಾಡಿದ್ದ. ಆದ್ರೆ ಲಾಕ್ ಡೌನ್ ನಿಂದಾಗಿ ಹೂವು ಮಾರಾಟ ಆಗದೇ ಹಾಗೆ ಉಳಿದಿತ್ತು.
ಮತ್ತೊಂದೆಡೆ ಹೂವು ಬೆಳೆದು ಹಾನಿಗೊಳಗಾದ ರೈತರಿಗೆ ಪರಿಹಾರ ನೀಡೋದಾಗಿ ಸರಕಾರ ಘೋಷಿಸಿತ್ತು. ಆದ್ರೆ ಪರಿಹಾರಕ್ಕಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಅಲೆದಾಡಿದ್ರೂ ಸೂಕ್ತ ಸ್ಪಂದನೆ ಸಿಗದಿರೋದಕ್ಕೆ ಬೇಸತ್ತು ರೈತ ಮಲ್ಲೇಶಪ್ಪ ಟ್ರ್ಯಾಕ್ಟರ್ ನಿಂದ ಹೂವಿನ ಬೆಳೆ ನಾಶ ಮಾಡಿದ್ದಾನೆ.