ETV Bharat / state

ನಾಳೆಯಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಂತಿಮ ಹಂತದ ಸಿದ್ಧತೆ

ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಸಿದ್ಧತೆ ಅಂತಿಮ ಹಂತದಲ್ಲಿದೆ. ಮೂರು ದಿನಗಳ ಕಾಲ ನಡೆಯುವ ನುಡಿಹಬ್ಬಕ್ಕೆ ಸಾವಿರಾರು ಕನ್ನಡಿಗರು ಸಾಕ್ಷಿಯಾಗಲಿದ್ದಾರೆ.

kannada sahithya sammelana
ಕನ್ನಡ ಸಾಹಿತ್ಯ ಸಮ್ಮೇಳನ
author img

By

Published : Jan 5, 2023, 9:41 AM IST

Updated : Jan 5, 2023, 1:27 PM IST

86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಹಾವೇರಿ: ನಗರದ ಹೊರವಲಯದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಲ್ಲಿ ಸಿದ್ಧತೆಗಳು ಸಾಗುತ್ತಿದ್ದು, ಮುಕ್ತಾಯ ಹಂತದಲ್ಲಿವೆ. ಏಲಕ್ಕಿ ನಗರಿಯ ಕನ್ನಡ ನುಡಿಹಬ್ಬ ಹಲವು ಪ್ರಥಮಗಳಿಗೂ ಸಾಕ್ಷಿಯಾಗಲಿದೆ. 'ಕಾರ್ಯಕ್ರಮಕ್ಕೆ ಸುಮಾರು 128 ಎಕರೆ ವಿಸ್ತೀರ್ಣದಲ್ಲಿ ವಿವಿಧ ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕುಳಿತುಕೊಳ್ಳಬಹುದು. ಸಮಾನಾಂತರ ವೇದಿಕೆಯಲ್ಲಿಯೂ ಸಾವಿರಾರು ಜನರಿಗೆ ಆಸನ ವ್ಯವಸ್ಥೆಯಾಗಿದೆ. ಈ ಮೂರು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ' ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದರು.

'ಮಾಧ್ಯಮದವರಿಗಾಗಿ ವಿಶೇಷ ಮೀಡಿಯಾ ಸೆಂಟರ್ ಸಿದ್ದವಾಗಿದೆ. ರಾಜ್ಯದ ವಿವಿಧೆಡೆಯಿಂದ ಬರುವ ವರದಿಗಾರರು ಮಾಧ್ಯಮ ಕೇಂದ್ರದಿಂದ ವರದಿ ಕಳುಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪುಸ್ತಕ ಮತ್ತು ವಾಣಿಜ್ಯ ಬಳಕೆಗೆ ಸುಮಾರು 600 ಮಳಿಗೆಗಳಿವೆ. ಪ್ರಮುಖವಾಗಿ ಮೂರು ಬೃಹತ್ ಮಳಿಗೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಒಂದರಲ್ಲಿ ತೋಟಗಾರಿಕೆ ಇಲಾಖೆ ಫಲ ಪುಷ್ಪಪ್ರದರ್ಶನ, ಎರಡನೆಯದರಲ್ಲಿ ವಾರ್ತಾ ಇಲಾಖೆ ಪ್ರದರ್ಶನ ಮತ್ತು ಮೂರನೆಯದರಲ್ಲಿ ಕಸಾಪ ಪ್ರದರ್ಶನ ನಡೆಯಲಿದೆ' ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಥಮ ಬಾರಿಗೆ ವಿಶೇಷ ರಥದ ಸಿದ್ಧತೆ

'ಇದುವರೆಗೆ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ಹೋಲಿಸಿದರೆ ಈ ಬಾರಿ ಹಾವೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಬದಲಾವಣೆ ಇರಲಿದೆ' ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಈಗಾಗಲೇ ಹೇಳಿದ್ದಾರೆ. '86ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ನಿಗದಿತ ವೇಳೆಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಸಮ್ಮೇಳನ ನಡೆಯುವ 6,7 ಮತ್ತು 8 ರಂದು ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ' ಎಂದಿದ್ದಾರೆ.

'ಕಾರ್ಯಕ್ರಮದಲ್ಲಿ ದಿ.ಡಾ.ಪುನೀತ್​ ರಾಜ್‌ಕುಮಾರ್ ಸ್ಮರಣೆಗೆ ಒಂದು ವಿಶೇಷ ಗೀತೆ ಮೀಸಲಿಡಲಾಗಿದೆ. ಒಂದು ದಿನ ಮೂಡಬಿದಿರೆ ಆಳ್ವಾಸ್​ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ರಿಂದ ನಗೆಹನಿ ಕಾರ್ಯಕ್ರಮವಿದೆ. ಹಾವೇರಿ ಜಿಲ್ಲೆಯಿಂದ ವಿವಿಧ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಹನುಮಂತ ಲಮಾಣಿ, ರುಬೀನಾ ಮತ್ತು ಖಾಸಿಂ ಅವರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕನ್ನಡ ರಥದ ಮೆರವಣಿಗೆ: ಸಾಹಿತ್ಯ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರಿಗೆ ಆಹ್ವಾನ

ವಿಶೇಷ ರಥ ನಿರ್ಮಾಣ: ಸಮ್ಮೇಳನಕ್ಕೆ ವಿಶೇಷ ರಥ ಸಿದ್ದಗೊಳ್ಳುತ್ತಿದೆ. ಈ ರಥದಲ್ಲಿ ಸಮ್ಮೇಳನಾಧ್ಯಕ್ಷರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆ ಸಾಗುವಾಗ ಸಮ್ಮೇಳನ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡರಿಗೆ ಮಾತ್ರ ರಥದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಲಾವಿದ ಷಹಜಹಾನ್ ಮುದಕವಿ ಪರಿಕಲ್ಪನೆಯಲ್ಲಿ ರಥ ಸಿದ್ಧವಾಗಿದೆ. ಪ್ರಾಚೀನ ಕಾಲದಲ್ಲಿ ರಾಜರ ರಥಗಳ ಮಾದರಿಯಲ್ಲಿ ಈ ರಥವನ್ನು ತಯಾರಿಸಲಾಗಿದೆ. ಸುಮಾರು 15 ಕಲಾವಿದರ ತಂಡ ಕಳೆದ 10 ದಿನಗಳಿಂದ ಈ ರಥ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಕನ್ನಡ ಅಸ್ಮಿತೆ ಸಾರುವ ರಥವನ್ನು ಇದೇ ಮೊದಲ ಬಾರಿಗೆ ವಿಶೇಷ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Last Updated : Jan 5, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.