ETV Bharat / state

ಅಬ್ಬಬ್ಬಾ ಏನ್‌ ರೇಟ್‌ರೀ.. ದಾಖಲೆಯ ಮೊತ್ತಕ್ಕೆ ಬಿಕರಿಯಾದ ಬ್ಯಾಡಗಿ ಡಬ್ಬ ಮೆಣಸಿನಕಾಯಿ..

ರೈತ ಹನುಮರೆಡ್ಡಿ ಸುಮಾರು 28 ಚೀಲ ಮೆಣಸಿನಕಾಯಿ ತಂದಿದ್ದು, 9 ಕ್ವಿಂಟಾಲ್ ತೂಕವಿದೆ. ಮಾರುಕಟ್ಟೆಯ ವಿ ಎ ಬಾಗೋಜಿ ದಲಾಲಿ ಅಂಗಡಿಯಲ್ಲಿ ಕಿಶೋರ್ & ಕಂಪನಿ ಕ್ವಿಂಟಾಲ್​​ಗೆ 36,999 ರೂ. ನೀಡಿ ಮೆಣಸಿನಕಾಯಿ ಖರೀದಿಸಿದೆ.

36,999 thousand per 1 quintal chilli
ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ
author img

By

Published : Dec 18, 2020, 11:34 AM IST

Updated : Dec 18, 2020, 3:31 PM IST

ಹಾವೇರಿ : ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಈಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.

ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ

ಕ್ವಿಂಟಾಲ್​​ಗೆ 36,999 ರೂಪಾಯಿ!

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಆವಲಗಟ್ಟಾ ಗ್ರಾಮದ ಹನುಮರೆಡ್ಡಿ ಬೆಳೆದ ಮೆಣಸಿನಕಾಯಿ ಕ್ವಿಂಟಾಲ್​​ಗೆ ಬರೋಬ್ಬರಿ 36,999 ರೂಪಾಯಿ ದಾಖಲೆಯ ದರಕ್ಕೆ ಮಾರಾಟವಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಎಂಬ ದಾಖಲೆ ಬರೆದಿದೆ.

ರೈತ ಹನುಮರೆಡ್ಡಿ ಸುಮಾರು 28 ಚೀಲ ಮೆಣಸಿನಕಾಯಿ ತಂದಿದ್ದು, 9 ಕ್ವಿಂಟಲ್ ತೂಕವಿದೆ. ಮಾರುಕಟ್ಟೆಯ ವಿ ಎ ಬಾಗೋಜಿ ದಲಾಲಿ ಅಂಗಡಿಯಲ್ಲಿ ಕಿಶೋರ್ ಅಂಡ್ ಕಂಪನಿ ಕ್ವಿಂಟಲ್​​ಗೆ 36,999 ರೂ. ನೀಡಿ ಮೆಣಸಿನಕಾಯಿ ಖರೀದಿಸಿದೆ.

ಓದಿ:ಮೇಲ್ಮನೆ ಮಲ್ಲಯುದ್ಧ.. ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಸಭಾಪತಿ

ಬ್ಯಾಡಗಿ ಡಬ್ಬ ಮೆಣಸಿನಕಾಯಿ ತಳಿ ಇದಾಗಿದ್ದು, ಸ್ವಚ್ಛತೆ, ಬಣ್ಣ, ಸ್ವಾದಿಷ್ಟ ರುಚಿಯ ಮೇಲೆ ಬೆಲೆ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಮಾರುಕಟ್ಟೆಗೆ ಅತಿ ಹೆಚ್ಚು ಬೆಲೆಯ ಮೆಣಸಿನಕಾಯಿ ತಂದಿದ್ದಕ್ಕೆ ರೈತ ಹನುಮರೆಡ್ಡಿಯನ್ನು ಮಾರುಕಟ್ಟೆ ಸಮಿತಿಯಿಂದ ಸನ್ಮಾನಿಸಲಾಯಿತು.

Last Updated : Dec 18, 2020, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.