ETV Bharat / state

ರಾಣೆಬೆನ್ನೂರಲ್ಲಿ 5 ಲಕ್ಷ ಬೆಲೆಯ 23 ಟಗರುಗಳು ಕಳ್ಳತನ: ಮಾಲೀಕ ಕಂಗಾಲು - ranebennuru news

ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ 5 ಲಕ್ಷ ಮೌಲ್ಯದ ಸುಮಾರು 23 ಟಗರುಗಳನ್ನು ಖದೀಮರು ಹೊತ್ತೊಯ್ದಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾರೆ.

23   sheep theft in ranebennur
23 ಟಗರುಗಳು ಕಳ್ಳತನ
author img

By

Published : Jul 10, 2021, 9:15 AM IST

ರಾಣೆಬೆನ್ನೂರು(ಹಾವೇರಿ): ಸುಮಾರು ಐದು ಲಕ್ಷ ಬೆಲೆಯ 23 ಟಗರುಗಳನ್ನು ಕಳ್ಳತನ ಮಾಡಿದ ಘಟನೆ ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿ ನಡೆದಿದೆ. ಟಗರುಗಳನ್ನು ಕದ್ದೊಯ್ದಿರುವುದಕ್ಕೆ ಮಾಲೀಕ ದಿಕ್ಕು ತೋಚದಂತಾಗಿದ್ದಾರೆ.

23 ಟಗರುಗಳು ಕಳ್ಳತನ

ಅಡವಿ ಆಂಜನೇಯ ಬಡಾವಣೆಯ ದಾದಾಪೀರ್​ ದೊಡ್ಡಮನಿ ಎಂಬುವರ ಫಾರ್ಮ್​ನಲ್ಲಿ ಗುರುವಾರ ಮಧ್ಯರಾತ್ರಿ ಟಗರುಗಳು ಕಳ್ಳತನವಾಗಿವೆ. ದಾದಾಪೀರ್ ಕಳೆದ ಒಂದೂವರೆ ವರ್ಷದಿಂದ ಅಡವಿ ಆಂಜನೇಯ ಬಡಾವಣೆಯಲ್ಲಿ ಟಗರಿನ ಫಾರ್ಮ್ ಮಾಡಿ ಟಗರು ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಸಹ 24 ಟಗರುಗಳನ್ನು ತಂದು ಸಾಕಿದ್ದರು.

ಈಗಾಗಲೇ ಟಗರುಗಳು ಮಾರಾಟ ಹಂತಕ್ಕೆ ಬೆಳೆದಿದ್ದವು. ಆದರೆ ಕಳ್ಳರು ಸಿಸಿಟಿವಿ ಮರೆಮಾಚಿ 23 ಟಗರುಗಳನ್ನು ಹೊತ್ತೊಯ್ದಿದ್ದಾರೆ. ಇದರಿಂದ ಸುಮಾರು ಐದು ಲಕ್ಷ ಕಳೆದುಕೊಂಡಂತಾಗಿದ್ದು, ಟಗರುಗಳನ್ನು ಕಳೆದುಕೊಂಡ ಮಾಲೀಕ ದಾದಾಪೀರ್​ ಕಂಗಾಲಾಗಿದ್ದಾರೆ. ಕಳ್ಳತನ ಮಾಡಿದವರನ್ನು ಬಂಧಿಸಿ ನ್ಯಾಯ ಕೂಡಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.