ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಎರಡನೇಯ ಅಲೆ ಆರಂಭವಾದ ಮೇಲೆ 22 ಸಿಬ್ಬಂದಿಗೆ ಕೊರೊನಾ ತಗುಲಿದೆ ಎಂದು ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ತಿಳಿಸಿದ್ದಾರೆ.
ಇವರ ಪೈಕಿ ಆರು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ ಮೂವರು ಆಸ್ಪತ್ರೆಯಲ್ಲಿದ್ದು 12 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಹಲವು ಖಾಯಲೆಗಳಿಂದ ಬಳಲುತ್ತಿದ್ದ ಓರ್ವ ಎಎಸ್ಐ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಶೇ.98 ರಷ್ಟು ಪೊಲೀಸರಿಗೆ ಮೊದಲ ಡೋಸ್ ಕೊರೊನಾ ಲಸಿಕೆ ಹಾಕಲಾಗಿದೆ. ಎರಡನೇಯ ಡೋಸ್ ಹಾಕಿಸಲು ಸಹ ಆದ್ಯತೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ನಾಳೆಯಿಂದ ಮಂಗಳವಾರದವರೆಗೆ ಕಠಿಣ ಲಾಕ್ಡೌನ್
ವೈದ್ಯರ ಅಣತಿ ಮೇರೆಗೆ 21 ಜನರಿಗೆ ಕೊರೊನಾ ಲಸಿಕೆ ಹಾಕಲಾಗಿಲ್ಲ. ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿರುವ ಕಾರಣ ವೈದ್ಯರೇ ಇವರಿಗೆ ಲಸಿಕೆ ಹಾಕದಂತೆ ತಿಳಿಸಿದ್ದಾರೆ. ಉಳಿದಂತೆ ನಮ್ಮ ಸಿಬ್ಬಂದಿ ಆರೋಗ್ಯವಂತರಾಗಿದ್ದು ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.