ETV Bharat / state

ಹಾವೇರಿಯಲ್ಲಿ ಕೊರೊನಾ 2ನೇ ಅಲೆಗೆ 11 ಶಿಕ್ಷಕರು ಬಲಿ - ಹಾವೇರಿಯಲ್ಲಿ ಕೊರೊನಾಗೆ ಬಲಿ

ಕೊರೊನಾ ಮಹಾಮಾರಿ ರಾಜ್ಯದಲ್ಲಿ ಅಪಾರ ಪ್ರಾಣ ಹಾನಿಗೆ ಕಾರಣವಾಗಿದೆ. ಈ ನಡುವೆ ಹಾವೇರಿಯಲ್ಲಿ ಸೋಂಕಿಗೆ 11 ಮಂದಿ ಶಿಕ್ಷಕರು ಬಲಿಯಾಗಿದ್ದಾರೆ.

Haveri
ಹಾವೇರಿ
author img

By

Published : Jun 6, 2021, 10:46 AM IST

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಎರಡನೇಯ ಅಲೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 11 ಶಿಕ್ಷಕರು ಕೊರೊನಾಕ್ಕೆ ಬಲಿಯಾಗಿದ್ದಾರೆ ಎಂದು ಹಾವೇರಿ ಡಿಡಿಪಿಐ ಅಂದಾನೆಪ್ಪ ವಡಗೇರಿ ತಿಳಿಸಿದ್ದಾರೆ.

ಶಿಕ್ಷಕರು ಕೊರೊನಾಕ್ಕೆ ಬಲಿಯಾದ ಬಗ್ಗೆ ಡಿಡಿಪಿಐ ಮಾಹಿತಿ

ಹಾವೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿಕ್ಷಕರಿಗೆ ಕೊರೊನಾ ಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಮೂರುವರೆ ಸಾವಿರ ಶಿಕ್ಷಕರಿಗೆ ಲಸಿಕಾಕರಣ ಮಾಡಲಾಗಿದೆ. ಜೊತೆಗೆ ಶಿಕ್ಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಅಲ್ಲದೆ ಕೊರೊನಾಪೀಡಿತ ಶಿಕ್ಷಕರಿಗೆ ಹಾಸಿಗೆ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದರು.

ಜಿಲ್ಲೆಯಲ್ಲಿ ಕೊರೊನಾಪೀಡಿತ ಶಿಕ್ಷಕರಿಗಾಗಿ ಭರವಸೆಯ ಬೆಳದಿಂಗಳು ಸೇರಿದಂತೆ ವಿವಿಧ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮನೋವೈದ್ಯರು ಸೇರಿದಂತೆ ನುರಿತ ತಜ್ಞರಿಂದ ಸಮಾಲೋಚನೆ ಸೇರಿದಂತೆ ಶಿಕ್ಷಕರನ್ನು ಕೊರೊನಾದಿಂದ ಮುಕ್ತಗೊಳಿಸಲು ಸಾಕಷ್ಟು ಕಾರ್ಯಕ್ರಮ ಆಯೋಜಸಿದ್ದೇವೆ. ಶಿಕ್ಷಕರು ಕೊರೊನಾ ಬರುತ್ತಿದ್ದಂತೆ ಧೈರ್ಯಗುಂದದೆ ಕೊರೊನಾ ಎದುರಿಸುವಂತೆ ವಡಗೇರಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: COVIDನಿಂದ ಜಾಗೃತರಾಗಿರುವಂತೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ಪತ್ರ ಬರೆದು ಹೃದಯಗೆದ್ದ ಟೀಚರ್'​ಅಮ್ಮ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.