ಹಾಸನ : ಲಸಿಕೆ ಬಗ್ಗೆ ಗ್ಯಾರೆಂಟಿ ಕೊಟ್ರೆ ಹಾಕಿಸಿಕೊಳ್ಳುವುದಾಗಿ ಯುವಕನೋರ್ವ ವ್ಯಾಕ್ಸಿನ್ ಪಡೆಯಲು ನಿರಾಕರಿಸಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿರಾಜನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಹಾಸನದಲ್ಲಿ ಸುಮಾರು 80 ಸಾವಿರ ಲಸಿಕೆ ಹಾಕುವ ಸಲುವಾಗಿ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ, ಅಧಿಕಾರಿಗಳು ಮನೆ-ಮನೆಗೆ ತೆರಳಿ ಜನರಿಗೆ ಲಸಿಕೆ ಪಡೆಯುವಂತೆ ಮನವಿ ಮಾಡುತ್ತಿದ್ದರು. ಈ ವೇಳೆ ಪ್ರವೀಣ್ ಎಂಬ ಯುವಕ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನಿರಾಕರಿಸಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾನೆ.
ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರೆಂಟಿ ಕೇಳುತ್ತೇವೆ, ಅಂತಹದ್ರಲ್ಲಿ ದೇಹಕ್ಕೆ ಪಡೆಯುವ ಲಸಿಕೆಗೆ ಖಾತ್ರಿ ಬೇಡ್ವಾ, ನೀವು ಲಸಿಕೆ ಬಗ್ಗೆ ರೈಟಿಂಗ್ನಲ್ಲಿ ಖಾತ್ರಿ ಮಾಡಿ ಬರೆದುಕೊಟ್ಟರೆ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತೇನೆ ಎಂದು ವಾದ ಮಾಡಿದನು.
ಈ ವೇಳೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಯುವಕ ಲಸಿಕೆ ಹಾಕಿಸಿಕೊಂಡಿಲ್ಲ. ಯುವಕನ ಜೊತೆ ಗ್ರಾಮದ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.