ETV Bharat / state

24 ಗಂಟೆಯೊಳಗೆ ಎರಡು ಕೊಲೆ: ಬೆಚ್ಚಿಬಿದ್ದ ಚನ್ನರಾಯಪಟ್ಟಣದ ಜನತೆ! - Young man killed in Channarayapatnam of Hassan

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಯುವಕನೊಬ್ಬನ ಕೊಲೆ ನಡೆದು 24 ಗಂಟೆಯೊಳಗೆ ಮತ್ತೊಬ್ಬ ಯುವಕನ ಕೊಲೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

Murder of a young man for trivial matter
ಹಾಸನದ ಚನ್ನರಾಯಪಟ್ಟಣದಲ್ಲಿ ಯುವಕನ ಕೊಲೆ
author img

By

Published : Jul 31, 2020, 11:05 AM IST

ಹಾಸನ: ಯುವಕನ ಎದೆಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದ ಗದ್ದೆಹಳ್ಳದ ಬಳಿ ನಡೆದಿದೆ.

ಸಂಪತ್ ಮೃತ (30) ಮೃತ ದುರ್ದೈವಿ. ಬೆಂಗಳೂರು ಹಾಸನ ಹೆದ್ದಾರಿ ಪಕ್ಕದಲ್ಲೇ ಈ ಕೊಲೆ ನಡೆದಿದೆ. ಮೃತ ಸಂಪತ್ ಮತ್ತು ಹರೀಶ್​ ಎಂಬಾತನ ನಡುವೆ ಕ್ಷುಲ್ಲಕ ಕಾರಣಕ್ಕ ಜಗಳ ನಡೆದು, ಹರೀಶ್ ಸಂಪತ್‌ನ ಎದೆಗೆ ಚಾಕು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಚನ್ನರಾಯಪಟ್ಟಣದಲ್ಲಿ ಪಾರಿವಾಳ ವಿಚಾರಕ್ಕೆ ನಡೆದ ಇಬ್ಬರ ನಡುವಿನ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ!

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಿನ್ನೆಯಷ್ಟೇ ಹಣದ ವಿಷಯದಲ್ಲಿ ಜಗಳ ನಡೆದು 25 ವರ್ಷದ ಯುವಕನ ಕೊಲೆ ನಡೆದಿತ್ತು. ಇಂದು ಮತ್ತೊಂದು ಕೊಲೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರು ಶೀಘ್ರವೇ ಕೊಲೆ ಆರೋಪಿಗಳನ್ನು ಬಂಧಿಸಿ, ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.