ETV Bharat / state

ಬಸ್‍ಗೆ ದಾರಿ ಬಿಡದೇ ಬೈಕ್​ ಸವಾರನ ಪುಂಡಾಟ: ಯುವಕನ ಹಿಡಿದು ಥಳಿಸಿದ ಜನ - ವೈಎನ್​ಪುರ ಬಸ್‍ಗೆ ದಾರಿ ಬಿಡದೇ ಬೈಕ್​ ಸವಾರ ವಿಡಿಯೋ

ಯುವಕನೋರ್ವ ಅಡ್ಡಾದಿಡ್ಡಿ ಬೈಕ್​ ಚಲಾಯಿಸಿ ಸಾರಿಗೆ ಇಲಾಖೆಯ ಬಸ್​ಗೆ ದಾರಿ ಬಿಡದೇ ಸತಾಯಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಬೈಕ್​ ಸವಾರನ ಪುಂಡಾಟ ಕಂಡ ಸ್ಥಳಿಯರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

yn pura bike rider problem to bus
ಬೈಕ್​ ಸವಾರನ ಪುಂಡಾಟ
author img

By

Published : Aug 30, 2021, 6:10 PM IST

ಹಾಸನ: ಸಾರಿಗೆ ಬಸ್‍ಗೆ ದಾರಿ ಬಿಡದೇ ಪುಂಡಾಟ ಮೆರೆದ ಯುವಕನಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್.ಪುರ ಬಳಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಬಸ್‍ಗೆ ದಾರಿ ಬಿಡದೇ ಬೈಕ್​ ಸವಾರನ ಪುಂಡಾಟ

ಯುವಕನೋರ್ವ ಬೈಕ್​​ನ್ನು ಅಡ್ಡಾದಿಡ್ಡಿ ಚಲಾಯಿಸುತ್ತ ಹಿಂದೆ ಬರುತ್ತಿದ್ದ ಬಸ್‍ಗೆ ಅಡ್ಡ ಬರುತ್ತಿದ್ದ. ಡ್ರೈವರ್ ಹಾರ್ನ್ ಮಾಡಿದರೂ ಕೂಡ ರಸ್ತೆ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗ್‍ಜಾಗ್ ಮಾದರಿಯಲ್ಲಿ ಬೈಕ್ ಚಲಾಯಿಸಿದ್ದಾನೆ. ಇದರಿಂದ ಬಸ್ ಚಾಲಕನಿಗೆ ಮುಂದೆ ಹೋಗಲು ಸಾಧ್ಯವಾಗಿಲ್ಲ. ಜೊತೆಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಇತರೆ ವಾಹನ ಸವಾರರಿಗೂ ಸಹ ಯುವಕನ ಹುಚ್ಚಾಟದಿಂದ ಸಾಕಷ್ಟು ತೊಂದರೆ ಆಗಿದೆ.

ಯುವಕನ ಪುಂಡಾಟದ ದೃಶ್ಯವನ್ನು ಬಸ್‍ನಲ್ಲಿದ್ದ ಪ್ರಯಾಣಿಕರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾರೆ. ನಂತರ ಮತ್ತೊಂದು ಬೈಕ್‍ನಲ್ಲಿ ಬಂದ ಕೆಲವರು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಮದ್ಯದ ನಶೆಯಲ್ಲಿದ್ದ ಯುವಕ ಈ ರೀತಿ ಬೈಕ್ ಚಲಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.