ETV Bharat / state

'ರಕ್ತದಲ್ಲಿ ಬರೆದುಕೊಡುತ್ತೇನೆ, ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ' - MLA Pritham Gowda talk about yadyurappa

ಸೂರ್ಯ ಚಂದ್ರರಿರುವಷ್ಟೇ ಸತ್ಯ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತಾರೆ ಎಂದು ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ.

mla-pritham-gowda
ಶಾಸಕ ಪ್ರೀತಂಗೌಡ
author img

By

Published : May 26, 2021, 3:40 PM IST

ಹಾಸನ: ನಾನು ರಕ್ತದಲ್ಲಿ ಬರೆದುಕೊಡ್ತೇನೆ, ಯಡಿಯೂರಪ್ಪ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರ್ತಾರೆ ಎಂದು ನಗರದಲ್ಲಿ ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆದಿರೋ ವಿಚಾರ ಮತ್ತು ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿ, ಮಾಧ್ಯಮ ಮಿತ್ರರಿಗೆ ಯಾರು ಮಾಹಿತಿ ಕೊಡ್ತಾರೋ ಗೊತ್ತಿಲ್ಲ. ಆದರೆ ಸೂರ್ಯ ಚಂದ್ರರಿರುವಷ್ಟೇ ಸತ್ಯ, ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತಾರೆ ಎಂದರು.

ಶಾಸಕ ಪ್ರೀತಂಗೌಡ ಮಾತನಾಡಿದರು

ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತೆ. ನಾಯಕತ್ವ ಬದಲಾವಣೆ ಕಪೋಲಕಲ್ಪಿತ, ಬಾಲಿಶ ಹೇಳಿಕೆ. ಕೊರೊನಾ ಕಾಲದಲ್ಲಿ ನಾಯಕತ್ವ ಬದಲಾವಣೆ ಆದರೆ ಜನಾಕ್ರೋಶ ಆಗುತ್ತೆ. ಜನ ಛೀ ಥೂ ಅಂತಾರೆ. 20 ಜನ ಡೆಲ್ಲಿಗೆ ಹೋಗಿರೋದೆ ಕಪೋಲಕಲ್ಪಿತ. 40 ಜನ ಡೆಲ್ಲಿಗೆ ಹೋದ್ರು ಬದಲಾವಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಮುಂಬರುವ ಚುನಾವಣೆ ಕೂಡ ಅವರ ನಾಯಕತ್ವದಲ್ಲೇ ನಡೆದು ಬಹುಮತ ಬರಲಿದೆ. ದಳ, ಬಿಜೆಪಿ, ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಗ್ಗೆ ಕನಸಲ್ಲೂ ಯೋಚನೆ ಮಾಡಬಾರದು‌. ಮುಂದೊಂದು ದಿನ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಚುನಾವಣೆ ನಡೆದು ಮುಖ್ಯಮಂತ್ರಿ ಆಗ್ತಾರೆ. ಮತ್ತೊಂದು ಸ್ಥಾನಕ್ಕೂ ಹೋಗ್ತಾರೆ. ಆದರೆ ಈ ಅವಧಿಯಲ್ಲಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರ್ತಾರೆ. ನಾವೆಲ್ಲರೂ ಅವರ ಪರವಾಗಿ ಇರುತ್ತೇವೆ. ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ‌. ಹಾಗಿದ್ದರೆ ಶಾಸಕರಾದ ನಮಗೆ ತಿಳಿಯುತ್ತಿತ್ತು. ಇದೆಲ್ಲಾ ವದಂತಿ ಅಷ್ಟೇ ಎಂದು ತಿಳಿಸಿದರು.

ಓದಿ: ವಿಶ್ವಪ್ರಿಯ ಫೈನಾನ್ಸ್ ವಂಚನೆ : ತನಿಖಾ ಸಂಸ್ಥೆಗೆ ವಹಿಸಲು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.