ETV Bharat / state

ಹಾಸನ: ಯೋಗ ಕ್ಲಾಸ್​​ನಲ್ಲಿ ಲವ್ವಿ-ಡವ್ವಿ..ಸುಪಾರಿ ಕೊಟ್ಟು ಪತಿಯನ್ನೇ ಮುಗಿಸಿದ ಪತ್ನಿ! - ಹಾಸನ ಕ್ರೈಂ ನ್ಯೂಸ್​

ಯೋಗ ತರಬೇತಿ ಕ್ಲಾಸ್​​ನಲ್ಲಿ ಪರಿಚಯವಾಗಿದ್ದ ನವೀನ ಜೊತೆ ಸುನಿತಾ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಗಂಡನಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಇದಕ್ಕೆ ಆಡ್ಡಿಯಾಗುತ್ತಾನೆಂದು ತಿಳಿದು ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ.

Women Gives supari to kill husband
Women Gives supari to kill husband
author img

By

Published : Feb 9, 2022, 11:58 PM IST

Updated : Feb 10, 2022, 1:13 PM IST

ಹಾಸನ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಆನಂದ್ ಕುಮಾರ್(42) ಪತ್ನಿಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಖತರ್ನಾಕ ಪತ್ನಿ ಸುನಿತಾಳನ್ನ ಪೊಲೀಸರು ಈಗಾಗಲೇ ಬಂಧನ ಮಾಡಿದ್ದಾರೆ.

ಪ್ರಕರಣದ ಸಂಪೂರ್ಣ ವಿವರ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕಾವಲುಹೊಸೂರಿನಲ್ಲಿ ಜನವರಿ 31ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ಹೊರಟಿದ್ದ ವೇಳೆ ರಸ್ತೆ ಮಧ್ಯೆ ಆನಂದ್​​ ಬೈಕ್​​ ಅಡ್ಡಗಟ್ಟಿ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ವೇಳೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ಕೈದು ಆಯಾಮಗಳಿಂದ ಆರೋಪಿ ಪತ್ತೆಹಚ್ಚುವಲ್ಲಿ ಹರಸಾಹಸಪಟ್ಟಿದ್ದರು. ಈ ವೇಳೆ, ಅನುಮಾನಗೊಂಡ ಪೊಲೀಸರು ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನನಗೆ ಏನು ಗೊತ್ತಿಲ್ಲ ಎಂದು ತಪ್ಪಿಸಿಕೊಂಡಿದ್ದಳು. ಆದರೆ, ತಾಂತ್ರಿಕ ತನಿಖೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಳು.

ಇದನ್ನೂ ಓದಿರಿ: ಹಿಜಾಬ್​ ಪ್ರಕರಣ: ಸಿಜೆ ನೇತೃತ್ವದಲ್ಲಿ ವಿಶೇಷ ಪೀಠ ರಚನೆ, ನಾಳೆ ಮಧ್ಯಾಹ್ನವೇ ವಿಚಾರಣೆ

ತನ್ನ ಪ್ರಿಯಕರನಿಗೆ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿಸುವ ಮೂಲಕ ಹಂತಕಿಯಾಗಿದ್ದಾಳೆ. ಪತಿ ಆನಂದ್ ಮತ್ತು ಸುನಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2014ರಲ್ಲಿ ಸುನಿತಾ ಡ್ರೈವಿಂಗ್ ಕಲಿಯಬೇಕು ಎಂದಾಗ ಆನಂದ್ ತರಬೇತಿ ಶಾಲೆಗೆ ಸೇರಿಸಿದ್ದನು. ಈ ವೇಳೆ ಡ್ರೈವಿಂಗ್ ಕಲಿಯುವಾಗ ಬೇರೆ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡು ಆಕೆಯನ್ನು ಕೊಲೆ ಮಾಡಿ ಜೈಲಿಗೆ ಸೇರಿದಳು. ಜೈಲಿನಿಂದ ಹೊರಬಂದು ಗಂಡನೊಂದಿಗೆ ಸಂಸಾರ ಮಾಡುತ್ತಿದ್ದಳು. ಆದರೆ, ಕೋವಿಡ್​-19 ನಂತರದ ದಿನಗಳಲ್ಲಿ ಯೋಗ ತರಬೇತಿಗೆ ಸೇರಿದ ಸುನಿತಾ ಯೋಗ ಕ್ಲಾಸ್​​ನಲ್ಲಿ ನವೀನ್ ಎಂಬಾತನೊಂದಿಗೆ ಪರಿಚಯ ಮಾಡಿಕೊಂಡಿದ್ದಳು.

ಪರಿಚಯವಾಗಿ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಅನೈತಿಕ ಸಂಬಂಧದ ಮೂಲಕ ಲವ್ವಿ ಡವ್ವಿ ಶುರುಮಾಡಿಕೊಂಡಿದ್ದರು. ಈ ವಿಚಾರ ಗಂಡನಿಗೆ ಗೊತ್ತಾಗುತ್ತಿದ್ದಂತೆ ಮನೆಯಲ್ಲಿ ಜಗಳ ಶುರುವಾಗಿತ್ತು. ಅಕ್ರಮ ಸಂಬಂಧದ ವಿಚಾರ ಗಂಡನಿಗೆ ಗೊತ್ತಾದ ಹಿನ್ನಲೆಯಲ್ಲಿ ಪತಿಯನ್ನು ಮುಗಿಸಬೇಕೆಂದು ಯೋಚಿಸಿ ತನ್ನ ಪ್ರಿಯಕರ ನವೀನ್ ಜೊತೆ ಸೇರಿಕೊಂಡು ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಳು. ಐದು ದಿನದ ಬಳಿಕ ಕೊಲೆ ಪ್ರಕರಣ ಬೇಧಿಸುವಲ್ಲಿ ಚನ್ನರಾಯಪಟ್ಟಣ ಹಾಗೂ ನುಗ್ಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

Last Updated : Feb 10, 2022, 1:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.