ETV Bharat / state

ಚಾರಿತ್ರ್ಯವಧೆಗೆ ಮನನೊಂದ ಮಹಿಳೆ; ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆಗೆ ಯತ್ನ - Woman trying to commit suicide in aluru of chikkamagalore

ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಮರುಪಾವತಿಸದೆ ಸಲ್ಲದ ಆಪಾದನೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

woman-trying-to-commit-suicide-in-hassan
ಚಾರಿತ್ರ್ಯವಧೆಗೆ ಮನನೊಂದ ಮಹಿಳೆ.
author img

By

Published : Mar 2, 2021, 10:12 PM IST

ಹಾಸನ/ಆಲೂರು: ಕೊಟ್ಟ ಹಣ ಹಿಂದಿರುಗಿಸದೆ, ಇಲ್ಲ ಸಲ್ಲದ ಆಪಾದನೆ ಮಾಡಿ ಮಾನಸಿಕ ಕಿರುಕುಳ ನೀಡಿದ ಕಾರಣ ಮಹಿಳೆಯೊಬ್ಬರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಲೂರು ಪಟ್ಟಣದ ಹೌಸಿಂಗ್ ಬೋರ್ಡ್​ನಲ್ಲಿ​ ನಡೆದಿದೆ.

ಮೂರು ವರ್ಷಗಳ ಹಿಂದೆ ಮಹಿಳೆಗೆ ಪ್ರವೀಣ್ ಎಂಬಾತನ ಪರಿಚಯವಾಗಿತ್ತು. ನಂತರ ಇವರಿಂದ ಸಾಲವಾಗಿ ಸುಮಾರು 80 ಸಾವಿರ ರೂ. ಹಣವನ್ನು ಆತ ಪಡೆದಿದ್ದ. ಒಂದೆರಡು ತಿಂಗಳ ಹಿಂದೆ 30 ಸಾವಿರ ಹಣವನ್ನ ಹಿಂದಿರುಗಿಸಿದ್ದ. ಉಳಿದ 50 ಸಾವಿರ ರೂಪಾಯಿಗಳನ್ನು ಒಂದೆರಡು ತಿಂಗಳಲ್ಲಿ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದನಂತೆ.

ಈಗ ಹಣ ವಾಪಸ್ ಕೇಳಲು ಹೋದಾಗ ನನಗೂ ನಿನಗೂ ಯಾವುದೇ ಸಂಬಂಧವಿಲ್ಲ ಎಂದು ಬೇಜವಾಬ್ದಾರಿಯಿಂದ ಮಾತನಾಡಿ, ನಮ್ಮ ವಿರುದ್ಧವೇ ಆತನ ತಾಯಿ ಕಡೆಯಿಂದ ಪೊಲೀಸ್ ಠಾಣೆಗೆ ದೂರು ಕೊಡಿಸಿ,ನಮ್ಮ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪ್ರವೀಣ್​ ಹಾಗೂ ಅವರ ತಾಯಿ ನೀಡಿದ ಮಾನಸಿಕ ಕಿರುಕುಳಕ್ಕೆ ಮನೆ ಮಾಲೀಕರು ನಮ್ಮನ್ನು ಜಾಗ ಖಾಲಿ ಮಾಡಿ ಎಂದು ಪೀಡಿಸಿ, ಆರು ತಿಂಗಳುಗಳ ಕಾಲ ಸಮಯ ನೀಡಿದ್ದರು. ಅವರ ನೀಡಿದ ಗಡುವಿನ ಪ್ರಕಾರ, ಇದೇ ತಿಂಗಳ 5 ರಂದು ನಾವು ಮನೆ ಖಾಲಿ ಮಾಡಬೇಕಿತ್ತು‌.‌ ಆದ್ರೀಗ, ನಮ್ಮ ಮೇಲಿನ ಅಪವಾದದಿಂದ ಯಾರೊಬ್ಬರೂ ಮನೆ ಕೊಡುತ್ತಿಲ್ಲ. ಒಂದು ಕಡೆ ಅಪವಾದ ಮತ್ತೊಂದು ಕಡೆ ಮನೆ ಮಾಲೀಕರು ಖಾಲಿಮಾಡಿ ಎಂದು ಹಿಂಸೆ ಕೊಡುತ್ತಿದ್ದಾರೆ. ಇದ್ರಿಂದ ನೊಂದ ನಮ್ಮ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ತಿಳಿಸಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಸಚಿವ ಸುಧಾಕರ್​ ಪ್ರತಿಕ್ರಿಯೆ... ಏನ್​ ಹೇಳಿದ್ರು!?

ಈ ಘಟನೆಯಿಂದ ಸಮಾಜದಲ್ಲಿ ತಲೆ ಎತ್ತಿ ಬದುಕು ನಡೆಸಲಾಗದ ಸ್ಥಿತಿಗೆ ಬಂದು ತಲುಪಿದ್ದೇವೆ. ಇವರುಗಳು ಮಾಡಿದ ಅಪಪ್ರಚಾರಕ್ಕೆ ಯಾರೂ ಕೂಡ ಮನೆಯನ್ನು ಬಾಡಿಗೆ ನೀಡಲು ಮುಂದಾಗುತ್ತಿಲ್ಲ. ಪ್ರವೀಣ್ ಹಾಗೂ ಅವರ ತಾಯಿ ಸುಶೀಲ ನಮ್ಮ ಸ್ಥಿತಿಗೆ ಕಾರಣವಾಗಿದ್ದು, ಇಂದು ನಾವು ಬೀದಿಗೆ ಬಂದಿದ್ದೇವೆ. ಮಾನಸಿಕವಾಗಿ ನೀಡಿದ ಹಿಂಸೆಯೇ ನನ್ನ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ನಮ್ಮಮ್ಮ. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.