ETV Bharat / state

ಅನಾವೃಷ್ಟಿ ನಡುವೆಯೂ ಹೇಮಾವತಿಯಿಂದ ತಮಿಳುನಾಡಿಗೆ ನೀರು.. ರೈತಾಪಿ ವರ್ಗದಲ್ಲಿ ಆತಂಕ..

author img

By

Published : Aug 2, 2019, 3:33 PM IST

ಹಾಸನದಲ್ಲಿ ಅನಾವೃಷ್ಟಿಯಿಂದ ಬಿತ್ತಿದ ಬೀಜ ಮೊಳಕೆಯೊಡೆಯದೇ ನೆಲಕಚ್ಚುವ ಸ್ಥಿತಿಗೆ ತಲುಪಿದ್ದು, ಈ ಸಮಯದಲ್ಲೂ ಹೇಮಾವತಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಅನಾವೃಷ್ಟಿ ನಡುವೆಯೂ ಹೇಮಾವತಿಯಿಂದ ತಮಿಳುನಾಡಿಗೆ ನೀರು

ಹಾಸನ: ರಾಜ್ಯದಲ್ಲಿ ಮತ್ತೆ ಮುಂಗಾರು ಕ್ಷೀಣಿಸಿದ್ದು, ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗಲೇ ಜಿಲ್ಲೆಯ ಜೀವನದಿಯಾಗಿರೋ ಹೇಮಾವತಿಯಿಂದ ತಮಿಳುನಾಡಿಗೆ ನೀರು ಹರಿಸಿದ್ದರಿಂದ ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿದ್ರೇ ಹಾಸನದಲ್ಲಿ ಅನಾವೃಷ್ಟಿಯಿಂದ ಬಿತ್ತಿದ ಬೀಜ ಮೊಳಕೆಯೊಡೆಯದೇ ನೆಲಕಚ್ಚುವ ಸ್ಥಿತಿಗೆ ತಲುಪಿದೆ. ಈ ವೇಳೆಗಾಗಲೇ ಹೇಮಾವತಿ ಡ್ಯಾಂ ಬರ್ತಿಯಾಗಬೇಕಿತ್ತು. ಆದರೆ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಡ್ಯಾಂ ಖಾಲಿ ಖಾಲಿಯಾಗಿದೆ.

ಹೆಚ್ಚು ದಿನ ಉಳಿಯಲಿಲ್ಲ ಜಿಲ್ಲೆಯ ಜನರ ಮಂದಹಾಸ...!

ಆದರೆ, ಕಳೆದ 15 ದಿನದಿಂದ ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಮಳೆಯಾಗಿದ್ದರಿಂದ ಹೇಮಾವತಿ ನದಿ ಮೂಲಕ ಸುಮಾರು 9 ಟಿಎಂಸಿ ನೀರು ಡ್ಯಾಂನಲ್ಲಿ ಶೇಖರಣೆಯಾಗಿತ್ತು. ರೈತರಲ್ಲಿಯೂ ಕೊಂಚ ಮಂದಹಾಸ ಮೂಡಿತ್ತು. ವರುಣ ಕೊಂಚ ಕೃಪೆ ತೋರಿ ಒಂದಿಷ್ಟು ಡ್ಯಾಂ ತುಂಬಿಸಿದ್ದ. ಬಿತ್ತಿದ ಬೆಳೆಗೆ, ಜನ-ಜಾನುವಾರುಗಳಿಗೆ ಈ ವರ್ಷ ತೊಂದರೆಯಾಗೋದಿಲ್ಲ ಅಂತಾ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರ ಮಂದಹಾಸ ಹೆಚ್ಚು ದಿನ ಉಳಿಯದೇ ಮತ್ತೆ ಆತಂಕ ಎದುರಾಗಿದೆ.

ತಮಿಳುನಾಡಿಗೆ ಹರಿದಳಾ ಹೇಮಾವತಿ...?

ಸುಪ್ರೀಂಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ಸದ್ಯ ಎರಡು ಟಿಎಂಸಿ ನೀರನ್ನ ಬಿಡಬೇಕು. ಹಾಗಾಗಿ ಹೇಮೆಯ ಒಡಲಿನಿಂದ ಎರಡು ಟಿಎಂಸಿ ನೀರನ್ನ ಹರಿಬಿಡಲಾಗ್ತಿದೆ. ಅಷ್ಟಲ್ಲದೇ ತುಮಕೂರಿಗೆ ನದಿ ಮೂಲ ಇಲ್ಲದ ಕಾರಣ ಇದೇ ನೀರನ್ನು ಅಲ್ಲಿನ ಜನರು ಆಶ್ರಯಿಸಿದ್ದಾರೆ. ಟ್ರಿಬ್ಯುನಲ್​ ಆದೇಶದ ಅನ್ವಯ ತುಮಕೂರು ಭಾಗಕ್ಕೆ 25.31 ಟಿಎಂಸಿ ಹಾಗೂ ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಸೇರಿ ಒಟ್ಟು 18.36 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಆದರೆ, ನೀರೆ ಇಲ್ಲದಿರುವಾಗ ನೀರನ್ನ ಬಿಡುವುದಾದ್ರೂ ಹೇಗೆ ಎಂಬುದು ಪ್ರಶ್ನೆ. ಅಲ್ಲದೇ ಈಗಾಗಲೇ ತುಮಕೂರಿನ ಸಂಸದ ಜಿ.ಎಸ್ ಬಸವರಾಜು, ನೀರು ಹರಿಸದಿದ್ರೆ ತಮಿಳುನಾಡಿನ ರೀತಿಯೇ ನ್ಯಾಯಾಲಯದ ಮೊರೆ ಹೊಗುತ್ತೇವೆ ಎಂದಿದ್ದಾರೆ.

ಜಲಾಶಯದ ನೀರಿನ ಮಟ್ಟ:

ಜುಲೈ1 ರಂದು 5 ಟಿಎಂಸಿ ಇದ್ದ ನೀರು, ಜುಲೈ 5ರಂದು 1 ಟಿಎಂಸಿಗೆ ಇಳಿಕೆಯಾಗಿತ್ತು. ಇದಾದ ಬಳಿಕ ಮುಂಗಾರು ಚುರುಕುಗೊಂಡ ಹಿನ್ನೆಲೆ 2 ದಿನದಲ್ಲಿ ಮತ್ತೆ 1 ಟಿಎಂಸಿ ನೀರು ಹರಿದು ಬಂದು 7 ಟಿಎಂಸಿ ನೀರು ಶೇಖರಣೆಯಾಗಿತ್ತು. ಹಾಗೇ ಜುಲೈ 8 ರಂದು ಮಳೆ ಹೆಚ್ಚಾಗಿದ್ದರಿಂದ 12,314 ರಷ್ಟು ಒಳಹರಿವಿನ ಪ್ರಮಾಣ ಹೆಚ್ಚಾಗಿ 9 ಟಿಎಂಸಿ ನೀರು ಹರಿದು ಬಂದಿತ್ತು. ಅಲ್ಲದೇ ಜುಲೈ 11 ರಂದು 10.98 ರಷ್ಟು ಶೇಖರಣೆಯಾಗಿ ಜುಲೈ 19 ರಂದು 2889 ಅಡಿ ನೀರು ಹರಿದಿದ್ದರಿಂದ 14 ಟಿಎಂಸಿಯಷ್ಟು ನೀರು ಶೇಖರಣೆಯಾಗಿ, 200 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗಿತ್ತು. ಜುಲೈ 27 ರಂದು ಡ್ಯಾಂಗೆ 15 ಟಿಎಂಸಿ ನೀರು ಹರಿದು ಬಂದಿದ್ದರಿಂದ ಜುಲೈ 27 ರಂದು 1250, ಜು.28 ರಂದು 2500, ಜು.30 ರಂದು 3650, ಹಾಗೂ ಜು.31 ರಂದು 5000 ಕ್ಯೂಸೆಕ್ ನೀರನ್ನ ಜಲಾಶಯದ ತಳಭಾಗದ 4 ಕ್ರಸ್ಟ್ ಗೇಟ್​​ನಿಂದ ಹರಿಬಿಡಲಾಗುತ್ತಿದೆ.

ಕಾಲುವೆ ಮೂಲಕವೂ ನದಿಗೆ ನೀರು..!

ಜಲಾಶಯದಿಂದ ಕೇವಲ 5 ಸಾವಿರ ಕ್ಯೂಸೆಕ್ ನೀರನ್ನ ಮಾತ್ರ ಬಿಡಲಾಗುತ್ತಿಲ್ಲ. ಬದಲಿಗೆ ಕಾಲುವೆ ಮೂಲಕವೂ ನದಿಗೆ ನೀರು ಬಿಡಲಾಗುತ್ತಿದೆ. ಇದು ಜಿಲ್ಲೆಯ ಜನರ ಆಕ್ರೋಶವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಕೇವಲ 5 ಸಾವಿರ ಕ್ಯೂಸೆಕ್ ಎಂದು ಲೆಕ್ಕ ತೋರಿಸಿ ಕಾಲುವೆ ಮೂಲಕ ಹೆಚ್ಚು ನೀರನ್ನ ಹರಿಸುತ್ತಿರುವುದರಿಂದ ಜಿಲ್ಲೆಯ ರೈತಾಪಿ ವರ್ಗ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ದಿನದಿಂದ ದಿನಕ್ಕೆ ಬರಪರಿಸ್ಥಿತಿ ಹೆಚ್ಚಾಗುತ್ತಿದ್ದು, ಮಳೆರಾಯ ಕೂಡಾ ಮತ್ತೆ ಕೈಕೊಟ್ಟಿದ್ದಾನೆ. ಹೀಗಾಗಿ ಜಿಲ್ಲೆಯ ಜೀವನದಿ ತುಂಬದೇ ಖಾಲಿಯಾಗಿರುವಾಗ ಶೇಖರಣೆಯಾಗಿರೋ ಅಲ್ಪ ಪ್ರಮಾಣದ ನೀರನ್ನೂ ತಮಿಳುನಾಡಿಗೆ ಹರಿಸಿದ್ರೆ ತಮ್ಮ ಪಾಡು ಏನು ಎಂದು ಜಿಲ್ಲೆಯ ಜನ ಆತಂಕಿತರಾಗಿದ್ದಾರೆ. ವರುಣ ಬಂದ್ರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದೇನೋ..

Intro:ಹಾಸನ: ರಾಜ್ಯದಲ್ಲಿ ಮತ್ತೆ ಮುಂಗಾರು ಕ್ಷೀಣಿಸಿದ್ದು, ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿರುವಾಗಲೇ ಜಿಲ್ಲೆಯ ಜೀವನದಿಯಾಗಿರೋ ಹೇಮಾವತಿಯಿಂದ ತಮಿಳುನಾಡಿಗೆ ನೀರು ಹರಿಸಿದ್ರಿಂದ ರೈತಾಪಿ ವರ್ಗದವರಲ್ಲಿ ಆತಂಕ ಮನೆ ಮಾಡಿದೆ. ಅದ್ರ ಒಂದು ವರದಿ ಇಲ್ಲಿದೆ ನೋಡಿ.... ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಾಗಿದ್ರೆ ಹಾಸನದಲ್ಲಿ ಅನಾವೃಷ್ಠಿಯಿಂದ ಭಿತ್ತಿದ ಬೀಜ ಮೊಳಕೆಯೋಡೆಯದೇ, ನೆಲಕಚ್ಚುವ ಸ್ಥಿತಿಗೆ ತಲುಪಿದೆ. ಇಷ್ಟೋತ್ತಿಗಾಗಲೇ ಹೇಮಾವತಿ ಡ್ಯಾಂ ಬರ್ತಿಯಾಗಬೇಕಿತ್ತು. ಆದ್ರೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಡ್ಯಾಂ ಬಣಗುಡುತ್ತಿದೆ. ಹೆಚ್ಚು ದಿನ ಉಳಿಯಲಿಲ್ಲ ಜಿಲ್ಲೆಯ ಜನ್ರ ಮಂದಹಾಸ...! ಆದ್ರೆ ಕಳೆದ 15 ದಿನದಿಂದ ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಮಳೆಯಾಗಿದ್ರಿಂದ ಹೇಮಾವತಿ ನದಿ ಮೂಲಕ ಸುಮಾರು 9 ಟಿಎಂಸಿ ನೀರು ಡ್ಯಾಂ ನಲ್ಲಿ ಶೇಖರಣೆ ಯಾಗಿತ್ತು. ರೈತರಲ್ಲಿಯೂ ಕೊಂಚ ಮಂದಹಾಸ ಮೂಡಿತ್ತು. ವರುಣ ಕೊಂಚ ಕೃಪೆ ತೋರಿ ಒಂದಿಷ್ಟು ಡ್ಯಾಂ ತುಂಬಿಸಿದ್ದ. ಬಿತ್ತಿದ ಬೆಳೆಗೆ, ಜನ-ಜಾನುವಾರುಗಳಿಗೆ ಈ ವರ್ಷ ತೊಂದರೆಯಾಗೋದಿಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರ ಮಂದಹಾಸ ಹೆಚ್ಚು ದಿನ ಉಳಿಯದೇ ಮತ್ತೆ ಆತಂಕ ಎದುರಾಗಿದೆ. ಬೈಟ್: ಇಮ್ರಾನ್ ಖಾನ್, ಗೊರೂರು. ತಮಿಳುನಾಡಿಗೆ ಹರಿದಳಾ...ಹೇಮಾವತಿ...? ಹೌದು....ಸುಪ್ರೀಂ ಆದೇಶದನ್ವಯ ತಮಿಳುನಾಡಿಗೆ ಸದ್ಯ ಎರಡು ಟಿಎಂಸಿ ನೀರನ್ನ ಬಿಡಬೇಕು. ಹಾಗಾಗಿ ಹೇಮೆಯ ಒಡಲಿನಿಂದ ಹರಿಬಿಡಲಾಗ್ತಿದೆ. ಅಷ್ಟೆಯಲ್ಲಾ, ತುಮಕೂರಿಗೆ ನದಿ ಮೂಲ ಇಲ್ಲದ  ಕಾರಣ ಇದೇ ನೀರನ್ನು ಅಲ್ಲಿನ ಜನರು ಆಶ್ರಯಿಸಿದ್ದಾರೆ. ಟ್ರಿಬ್ಯುನಲ್​ ಆದೇಶದ ಅನ್ವಯ ತುಮಕೂರು ಭಾಗಕ್ಕೆ 25.31 ಟಿಎಂಸಿ ಹಾಗೂ ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಸೇರಿ ಒಟ್ಟು 18.36 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಆದ್ರೆ ನೀರೆ ಇಲ್ಲದಿರುವಾಗ ನೀರನ್ನ ಬಿಡುವುದಾದ್ರು ಹೇಗೆ...? ಈಗಾಗಲೇ ತುಮಕೂರಿನ ಸಂಸದವಜಿ.ಎಸ್ ಬಸವರಾಜು ನೀರು ಹರಿಸದಿದ್ರೆ ತಮಿಳುನಾಡಿನ ರೀತಿಯಲ್ಲಿಯೇ ನ್ಯಾಯಾಲಯದ ಮೊರೆ ಹೊಗುತ್ತೇವೆ ಎಂದಿದ್ರು. ಜಲಾಶಯದ ನೀರಿನ ಮಟ್ಟ ನೋಡೋದಾದ್ರೆ....! ಜು.1 ರಂದು 5 ಟಿಎಂಸಿ ಇದ್ದ ನೀರು, ಜು.5ರಂದು 1 ಟಿಎಂಸಿ ನೀರು ಶೇಖರಣೆಯಾಗಿತ್ತು. ಇದಾದ ಬಳಿಕ ಮುಂಗಾರು ಚುರುಕುಗೊಂಡ ಹಿನ್ನಲೆಯಲ್ಲಿ 2ದಿನದಲ್ಲಿ ಮತ್ತೆ 1ಟಿಎಂಸಿ ನೀರು ಹರಿದು ಬಂದ ಹಿನ್ನಲೆ 7 ಟಿಎಂಸಿ ನೀರು ಶೇಖರಣೆಯಾಗಿತ್ತು. ಹಾಗೇ ಜು.8ರಂದು ಮಳೆ ಹೆಚ್ಚಾಗಿದ್ರಿಂದ 12314ರಷ್ಟು ಒಳಹರಿವಿನ ಪ್ರಮಾಣ ಹೆಚ್ಚಾಗಿ 9ಟಿಎಂಸಿ ನೀರು ಹರಿದು ಬಂದಿತ್ತು. ಅಲ್ಲದೇ ಜು.11 ರಂದು 10.98ರಷ್ಟು ಶೇಖರಣೆಯಾಗಿ ಜು.19 ರಂದು 2889 ಅಡಿ ನೀರು ಹರಿದಿದ್ದರಿಂದ 14 ಟಿಎಂಸಿಯಷ್ಟು ನೀರು ಶೇಖರಣೆಯಾಗಿ, 200 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗಿತ್ತು. ಜು.27 ರಂದು ಡ್ಯಾಂಗೆ 15 ಟಿಎಂಸಿ ನೀರು ಹರಿದು ಬಂದಿದ್ರಿಂದ ಜು.27ರಂದು 1250, ಜು.28ರಂದು 2500, ಜು.30ರಂದು 3650, ಹಾಗೂ ಜು.31ರಂದು 5000 ಕ್ಯೂಸೆಕ್ಸ್ ನೀರನ್ನ ಜಲಾಶಯದ ತಳಭಾಗದ 4 ಕ್ರಸ್ಟ್ ಗೇಟ್ ನಿಂದ ನೀರನ್ನ ಹರಿಬಿಡಲಾಗುತ್ತಿದೆ. ಕಾಲುವೆ ಮೂಲಕವೂ ನದಿಗೆ ನೀರು..!! ಜಲಾಶಯದಿಂದ ಕೇವಲ 5 ಸಾವಿರ ಕ್ಯೂಸೆಕ್ ನೀರನ್ನ ಮಾತ್ರ ಬಿಡಲಾಗುತ್ತಿಲ್ಲ. ಬದಲಿಗೆ ಕಾಲುವೆ ಮೂಲಕವು ನದಿಗೆ ನೀರು ಬಿಡಲಾಗುತ್ತಿದೆ. ಇದ್ರಿಂದ ಜಿಲ್ಲೆಯ ಜನ್ರ ಆಕ್ರೋಶವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಕೇವಲ 5 ಸಾವಿರ ಕ್ಯೂಸೆಕ್ ಎಂದು ಲೆಕ್ಕ ತೋರಿಸಿ ಕಾಲುವೆ ಮೂಲಕ ಹೆಚ್ಚು ನೀರನ್ನ ಹರಿಸುತ್ತಿರುವುದರಿಂದ ಜಿಲ್ಲೆಯ ರೈತಾಪಿ ವರ್ಗ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಬೈಟ್: ಇಮ್ರಾನ್ ಖಾನ್, ಗೊರೂರು. ಒಟ್ಟಾರೆ, ದಿನದಿಂದ ದಿನಕ್ಕೆ ಬರಪರಿಸ್ಥಿತಿ ಹೆಚ್ಚಾಗುತ್ತಿದ್ದು, ಮಳೆರಾಯ ಕೂಡಾ ಮತ್ತೆ ಕೈಕೊಟ್ಟಿದ್ದಾನೆ. ಹೀಗಾಗಿ ಜಿಲ್ಲೆಯ ಜೀವನದಿ ತುಂಬದೇ ಖಾಲಿಯಾಗಿರುವಾದ ಶೇಖರಣೆಯಾಗರೋ ಅಲ್ಪ ಪ್ರಮಾಣದ ನೀರನ್ನ ತಮಿಳುನಾಡಿಗೆ ಹರಿಸಿದ್ರೆ ನಮ್ಮ ಪಾಡು ಏನು ಎಂಬುದು ಜಿಲ್ಲೆಯ ಜನ್ರ ಆತಂಕ... ವರುಣ ಆಗಮಿಸಿದ್ರೆ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದೇನೋ...ಅಲ್ಲಿವರೆಗೆ ಕಾಯಬೇಕಿದೆ. ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.