ETV Bharat / state

ಮತಾಂತರ ನಿಷೇಧ ಕಾಯ್ದೆ ಸ್ವಾಗತಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.

Vishwa Prasanna Theertha Swamiji
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
author img

By

Published : May 20, 2022, 7:12 AM IST

ಹಾಸನ: ಸಮಾಜದಲ್ಲಿ ನಡೆಯುತ್ತಿರುವ ಮತಾಂತರ ಹಾವಳಿ ದೂರ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಮತಾಂತರ ಎಂಬುದು ಮನೆ-ಮನೆಗಳಲ್ಲಿ ಅವಾಂತರ ಎಬ್ಬಿಸುತ್ತಿತ್ತು. ಅನೇಕ ಮನೆಗಳಲ್ಲಿ ಗಂಡ ಹೆಂಡತಿಯರನ್ನು ಬೇರ್ಪಡಿಸುವಂತಹ ಕೆಟ್ಟ ಕಾರ್ಯವಾಗುತ್ತಿತ್ತು. ಇಂತಹ ಹಾವಳಿಯನ್ನು ದೂರ ಮಾಡುವುದಕ್ಕೆ ಕಾಯ್ದೆ ತರಲಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.​

ಪಠ್ಯಪುಸ್ತಕಗಳಲ್ಲಿ ಹೊಸ ವಿಷಯಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಲಕಾಲಕ್ಕೆ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸುವಂಥದ್ದು ತಪ್ಪಲ್ಲ. ಭಗತ್ ಸಿಂಗ್ ವಿಚಾರವನ್ನು ತೆಗೆದುಹಾಕಿಲ್ಲ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಸುಮ್ಮನೆ ಸಮಾಜದಲ್ಲಿ ಗುಲ್ಲೆಬ್ಬಿಸುವ ಕೆಲಸ ಒಳ್ಳೆಯದಲ್ಲ ಎಂದರು.

ಇದನ್ನೂ ಓದಿ: ಮತಾಂತರಕ್ಕೆ ಯತ್ನ: ದಂಪತಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

​ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಾಗೂ ಶ್ರೀರಂಗಪಟ್ಟಣ ಮಸೀದಿ ವಿವಾದ ವಿಚಾರವಾಗಿ ಮಾತನಾಡಿ, ಈಗಿನವರು ಯಾರೂ ಅಂತಹ ಕೆಲಸ ಮಾಡಿದ್ದಲ್ಲ. ಹಿಂದಿನ ಕಾಲದಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಮಸೀದಿಯೊಳಗೆ ಶಿವಲಿಂಗ ದೊರೆತಿದ್ದರೆ, ಈ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ತೀರ್ಪು ಬಂದರೆ ಅದನ್ನು ಒಪ್ಪಿಕೊಳ್ಳಬೇಕು. ಯಾವುದೇ ಮಂದಿರವನ್ನು ಖರೀದಿಸಿ ಮಾರ್ಪಾಡುಗೊಳಿಸಿದ್ದರೆ ಅದು ತಪ್ಪಲ್ಲ. ಆದರೆ ಅತಿಕ್ರಮಣ ಮಾಡಿ ಮಾರ್ಪಾಡು ಮಾಡಿರುವುದನ್ನು ಒಪ್ಪಲಾಗದು ಎಂದು ಶ್ರೀಗಳು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.