ETV Bharat / state

ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡುವ ಗ್ರಾಮದಲ್ಲೇ ಸಮಸ್ಯೆಗಳ ಸರಮಾಲೆ! - villagers

ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಅದರಂತೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಸ್ಥಳೀಯ ಅಧಿಕಾರಿಗಳು ಅವರ ಮಾರ್ಗವನ್ನು ಅನುಸರಿಸುತ್ತಿದ್ದು, ಅವರ ಕಣ್ಣಿಗೆ ಬೀಳುವ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ ಕಾದು ನೋಡಬೇಕು.

ಸರ್ಕಾರಿ ಪ್ರಾಥಮಿಕ ಶಾಲೆಯ ವ್ಯವಸ್ಥೆ
author img

By

Published : Jun 18, 2019, 10:02 AM IST

Updated : Jun 18, 2019, 12:31 PM IST

ಹಾಸನ: ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆಗಳನ್ನು ಹೊಂದಿರುವ ಅರಸೀಕೆರೆ ತಾಲೂಕು ಬಯಲುಸೀಮೆ ಪ್ರದೇಶವಾಗಿದ್ದು, ಫ್ಲೋರೈಡ್ ಅಂಶವುಳ್ಳ ನೀರನ್ನು ಸೇವಿಸುತ್ತಿರುವುದು ಇಲ್ಲಿನ ಜನತೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹಾಗಾಗಿ ಹಾಸನದ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು, ಇವುಗಳತ್ತ ಗಮನ ಹರಿಸಬೇಕಿದೆ.

ರೋಗಿಗಳ ಪರದಾಟ:

2009ರಲ್ಲಿ ಅರಸೀಕೆರೆ ಮತ್ತು ಹುಳಿಯರ್ ನಡುವೆ ಬರುವ ಜಯಚಾಮರಾಜಪುರ ಗ್ರಾಮಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವೇನೋ ಆಯಿತು. ಆದರೆ, ಅಂದಿನಿಂದ ಇಲ್ಲಿಯವರೆಗೆ ತುರ್ತು ವಾಹನಗಳಿಲ್ಲದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

villagers are facing tens of problems
ಜಯಚಾಮರಾಜಪುರ ಗ್ರಾಮಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ

ಇನ್ನು ಆಸ್ಪತ್ರೆಗೆ ನಾಲ್ಕು ಜನ ವೈದ್ಯರು ಮತ್ತು ಇತರೆ ಇಬ್ಬರು ಸಿಬ್ಬಂದಿಯ ಅವಶ್ಯಕತೆಯಿದ್ದು, ಇದುವರಿಗೂ ಕೂಡ ನೇಮಕಾತಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿಲ್ಲ. ಬರುವ ವೈದ್ಯರಿಗೆ ಸರಿಯಾದ ಕ್ವಾಟ್ರಸ್​​ ಇಲ್ಲದ್ದರಿಂದ ಈ ಗ್ರಾಮದಲ್ಲಿ ಉಳಿಯಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಈಗಿರುವ ವೈದ್ಯರ ವಸತಿ ಗೃಹಗಳು ಕೂಡ ಬಿದ್ದುಹೋಗುವ ಹಂತದಲ್ಲಿದ್ದು, ಈ ನಡುವೆಯೇ ಕೆಲ ವೈದ್ಯರು ಅಲ್ಲಿಯೇ ಜೀವನ ದೂಡುತ್ತಿದ್ದಾರೆ. ಆರೋಗ್ಯ ಮಂತ್ರಿಯಾಗಿದ್ದ ಹಾಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಖುದ್ದು ಈ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ನೇಮಕಾತಿ ಮತ್ತು ವಾಹನ ನೀಡುವ ಭರವಸೆ ನೀಡಿದರು. ಆದರೆ, ಈಗ ಅದು ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಸ್ಥಳೀಯರು.

ಶತಮಾನೋತ್ಸವ ಆಚರಿಸಿದ ಸರ್ಕಾರಿ ಶಾಲೆಗೆ ಶೌಚಾಲಯದ ಕೊರತೆ:

ಇದೇ ಗ್ರಾಮದಲ್ಲಿ ಇತ್ತೀಚಿಗಷ್ಟೇ ಶತಮಾನೋತ್ಸವ ಆಚರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯೂ ಇದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಶಾಲೆಯ ಎರಡು ಕೊಠಡಿಗಳು ಬಿದ್ದು ಹೋಗಿದ್ದರು ಕೂಡ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿ ಮಾಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇನ್ನು ಶಾಲೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿದ್ದು, ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ.

villagers are facing tens of problems
ಸರ್ಕಾರಿ ಪ್ರಾಥಮಿಕ ಶಾಲೆಯ ವ್ಯವಸ್ಥೆ

ಒಂದೂವರೆ ವರ್ಷದ ಹಿಂದೆ ಶೌಚಾಲಯ ಬಿದ್ದು ಹೋಗಿದ್ದು, ನೀರಿನ ವ್ಯವಸ್ಥೆಯೂ ಕೂಡ ಇಲ್ಲದಿರುವುದರಿಂದ ಹಾಗೂ ಶಾಲೆಯ ಸುತ್ತ ಕಾಂಪೌಂಡ್​ ಕೂಡ ಇಲ್ಲದ ಕಾರಣ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ್ರೆ ರಕ್ಷಣೆಗೋಸ್ಕರ ಅಲ್ಲಿನ ಮಹಿಳಾ ಶಿಕ್ಷಕಿಯರು ಅವರ ಹಿಂದೆ ಹೋಗುವುದು ಇಂದಿನ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.

ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ:

ಇನ್ನು ಇಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆ ಗ್ರಾಮದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ತರಾತುರಿಯಲ್ಲಿ ಕೆಲಸಗಳು ನಡೆಯುತ್ತಿವೆ. ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಗೃಹ ಮಂಡಳಿ ಅಧ್ಯಕ್ಷರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಮಾಡುತ್ತಿರುವುದು ಇತರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲವೂ ಚೆನ್ನಾಗಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ವಾಸ್ತವ್ಯ ಹೂಡುವ ಬದಲು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರೆ ಅಲ್ಲಿನ ಹೆಣ್ಣುಮಕ್ಕಳ ಸಮಸ್ಯೆಯಿಂದ ಹಿಡಿದು ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳು ಗೊತ್ತಾಗುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡುವ ಗ್ರಾಮದಲ್ಲೇ ಸಮಸ್ಯೆಗಳ ಸರಮಾಲೆ

ವಿದ್ಯುತ್ ಸಂಪರ್ಕ ಕಡಿತ:

ಇನ್ನು ಈ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆ ಅನುಷ್ಠಾನವಾಗಿದ್ದರೂ ಕೂಡ ಪ್ರತಿನಿತ್ಯ 10-15 ಬಾರಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಈ ಗ್ರಾಮದ ಸುತ್ತಮುತ್ತ ಇರುವ ಕೆಲವು ಸಣ್ಣ-ಪುಟ್ಟ ಉದ್ದಿಮೆಗಳಿಗೆ ಪ್ರತಿನಿತ್ಯ ನಷ್ಟವಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರಲ್ಲಿ ಮಳೆಯಾದರೆ ಸಾಕು ಜೆಸಿ ಪಡದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಕೇಳಿದರೆ ಅವರು ಕಾಟಾಚಾರದ ಉತ್ತರ ನೀಡಿ ಕಳಿಸುತ್ತಾರೆ. ಇಂತಹ ಸಮಸ್ಯೆಯಿಂದ ಮುಕ್ತಿ ಕೊಡಿ ಎನ್ನುತ್ತಾರೆ ಗ್ರಾಮಸ್ಥರು.

Intro:ಈಟಿವಿ ಭಾರತದಲ್ಲಿ ಮಾತ್ರ ಇಷ್ಟೋರಿ

ಹಾಸನ : ಈ ಗ್ರಾಮದಲ್ಲಿ ಹತ್ತಾರು ಸಮಸ್ಯೆಗಳಿವೆ ಆದರೆ ಯಾವೊಬ್ಬ ಜನಪ್ರತಿನಿಧಿ ಕೂಡ ತಲೆಕೆಡಿಸಿಕೊಂಡಿಲ್ಲ. ಇವತ್ತು ಗ್ರಾಮವಾಸ್ತವ್ಯದ ನೆಪದಲ್ಲಿ ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ತರಾತುರಿಯಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದು ಕೂಡ ಕೇವಲ ಜನಪ್ರತಿನಿಧಿಗಳ ವಾಸ್ತವ್ಯದ ಹಿನ್ನೆಲೆಯಲ್ಲಿ ಮಾತ್ರ ಹಾಗಿದ್ರೆ ಯಾವುದೇ ಗ್ರಾಮ ಯಾರು ಗ್ರಾಮವಾಸ್ತವ್ಯ ಮಾಡುತ್ತಿರು ಅಂತಿರಾ ಈ ಸ್ಟೋರಿ ನೋಡಿ...

ಹಾಸನ ಮಲ್ನಾಡು ಅರೆಮಲೆನಾಡು ಮತ್ತು ಬಯಲುಸೀಮೆ ಗಳನ್ನು ಹೊಂದಿರುವ ಜಿಲ್ಲೆ ಅರಸೀಕೆರೆಯ ಬಯಲುಸೀಮೆ ಪ್ರದೇಶವಾಗಿದ್ದು ಫ್ಲೋರೈಡ್ ಯುಕ್ತ ನೀರನ್ನು ಸೇವಿಸುತ್ತಿರುವುದು ಇಲ್ಲಿನ ಜನತೆಗೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳು ಬೀರಿವೆ. ಜೂನ್ 21 ರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಪ್ರಾರಂಭ ಮಾಡುತ್ತಿದ್ದಾರೆ ಆದರೆ ಹಾಸನದಲ್ಲಿ ಮಾತ್ರ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಬಯಲುಸೀಮೆಯ ಗ್ರಾಮದಲ್ಲಿ ನಡೆಯುತ್ತಿದ್ದು, ಈ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆಯೇ ಎದ್ದುಕಾಣುತ್ತಿದೆ.

ಸಮುದಾಯ ಕೇಂದ್ರಕ್ಕೆ ತುರ್ತು ವಾಹನವೇ ಇಲ್ಲ.
ಅರಸೀಕೆರೆ ಮತ್ತು ಹುಳಿಯರ್ ನಡುವೆ ಬರುವ ಜಯಚಾಮರಾಜಪುರ ಗ್ರಾಮಕ್ಕೆ ಸಕಲ ಸೌಲಭ್ಯವುಳ್ಳ ಸಮುದಾಯ ಕೇಂದ್ರ 2009ರಲ್ಲಿ ನಿರ್ಮಾಣವಾಯಿತು ಅಂದಿನಿಂದ ಇಂದಿನವರೆಗೂ ಕೂಡ ಈ ಆಸ್ಪತ್ರೆಗೆ ತುರ್ತು ವಾಹನಗಳಿಲ್ಲದ ಬರುವ ರೋಗಿಗಳು ಪರದಾಡುವಂತಾಗಿದೆ.

ಇನ್ನು ಆಸ್ಪತ್ರೆಗೆ ನಾಲ್ಕು ಜನ ವೈದ್ಯರು ಮತ್ತು ಇತರೆ ಇಬ್ಬರು ಸಿಬ್ಬಂದಿಗಳ ಅವಶ್ಯಕತೆಯಿದ್ದು ಇದು ರಿಗೂ ಕೂಡ ನೇಮಕಾತಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಮುಂದಾಗಿಲ್ಲ ಬರುವ ವೈದ್ಯರಿಗೆ ಸರಿಯಾದ ಕ್ವಾಟರ್ಸ್ ಇಲ್ಲದ ಕಾರಣ ಈ ಗ್ರಾಮದಲ್ಲಿ ಉಳಿಯಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಈಗಿರುವ ವೈದ್ಯರ ವಸತಿಗೃಹಗಳು ಕೂಡ ಬಿದ್ದುಹೋಗುವ ಹಂತದಲ್ಲಿದ್ದು ನಡುವೆಯೇ ಕೆಲ ವೈದ್ಯರು ಸಂಸಾರ ನಡೆಸುತ್ತಾರೆ ಸರ್ಕಾರದ ಆರೋಗ್ಯ ಮಂತ್ರಿಯಾಗಿದ್ದ ಹಾಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಖುದ್ದು ಈ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ನೇಮಕಾತಿ ಮತ್ತು ವಾಹನ ನೀಡುವ ಭರವಸೆ ನೀಡಿದರು ಆದರೆ ಈಗ ಭರವಸೆಯಾಗಿಯೇ ಉಳಿದಿದೆ.

ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋದರೆ ಶಿಕ್ಷಕರು ಕಾಯುವ ಪರಿಸ್ಥಿತಿ ಇದೆ.

ಇದೇ ಗ್ರಾಮದಲ್ಲಿ ಇತ್ತೀಚಿಗಷ್ಟೇ ಶತಮಾನೋತ್ಸವ ಆಚರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯೊಂದಿದೆ. ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಶಾಲೆಯ ಎರಡು ಕೊಠಡಿಗಳು ಬಿದ್ದು ಹೋಗಿದ್ದರು ಕೂಡ ಸ್ಥಳೀಯ ಶಾಸಕ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿಪಡಿಸುವ ಕಾಯಕಕ್ಕೆ ಮುಂದಾಗದಿರುವುದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುವಂತಿದೆ. ಇನ್ನು ಶಾಲೆಯಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೆಣ್ಣು ಮಕ್ಕಳಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲ. ಒಂದುವರೆ ವರ್ಷದ ಹಿಂದೆ ಶೌಚಾಲಯ ಬಿದ್ದುಹೋಗಿದ್ದು, ನೀರಿನ ವ್ಯವಸ್ಥೆಯೂ ಕೂಡ ಇಲ್ಲದಿರುವುದರಿಂದ ಹಾಗೂ ಶಾಲೆಯ ಸುತ್ತ ಕಾಂಪೌಂಡ್ ಕೂಡ ಇಲ್ಲದ ಕಾರಣ ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ್ರೆ ವಿದ್ಯಾರ್ಥಿಗಳ ರಕ್ಷಣೆಗಾಗಿ ಅಲ್ಲಿನ ಮಹಿಳಾ ಶಿಕ್ಷಕಿಯರು ಅವರು ಹಿಂದೆ ಹೋಗುವುದು ಇಂದಿನ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.

ಬೈಟ್: ಆಲಿಯಾ, ಏಳನೇ ತರಗತಿ ವಿದ್ಯಾರ್ಥಿನಿ.

ಗ್ರಾಮವಾಸ್ತವ್ಯದ ಹಿನ್ನೆಲೆ ತರಾತುರಿಯಲ್ಲಿ ನಡೆಯುತ್ತಿರುವ ಮೂಲಸೌಕರ್ಯದ ಕೆಲಸಕಾರ್ಯಗಳು

ಇನ್ನು ನಾಳೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಗ್ರಾಮವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಗ್ರಾಮದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದಲ್ಲಿ ತರಾತುರಿಯಲ್ಲಿ ಕೆಲಸಗಳು ನಡೆಯುತ್ತಿದೆ. ಗ್ರಾಮವಾಸ್ತವ್ಯಕ್ಕಾಗಿ ಜಿಲ್ಲಾಧಿಕಾರಿ ಮತ್ತು ರಾಜ್ಯ ಗೃಹಮಂಡಳಿ ಅಧ್ಯಕ್ಷರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಮಾಡುತ್ತಿರುವುದು ಇತರ ಪಕ್ಷಗಳಿಗೆ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲವೂ ಚೆನ್ನಾಗಿರುವ ಬಿಸಿಎಮ್ ಹಾಸ್ಟೆಲ್ ನಲ್ಲಿ ವಾಸ್ತವ್ಯ ಹೂಡುವ ಬದಲು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದರೆ ಅಲ್ಲಿನ ಹೆಣ್ಣುಮಕ್ಕಳ ಸಮಸ್ಯೆಯಿಂದ ಹಿಡಿದು ಪ್ರತಿನಿತ್ಯ ಹಾಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳು ಗೊತ್ತಾಗುತ್ತದೆ ಎಂಬುದು ಆಗ್ರಹವಾಗಿದೆ.

ಗ್ರಾಮದ ರಸ್ತೆ ಬದಿಯ ಪಕ್ಕದಲ್ಲಿಯೇ ಸಣ್ಣದೊಂದು ಕಟ್ಟೆ ಹೊಂದಿದ್ದು ಗ್ರಾಮದ ಕೆಲವು ಮನೆಗಳ ಶೌಚಾಲಯದ ನೀರನ್ನು ಕಟ್ಟೆಗೆ ಹರಿಯ ಬಿಡುತ್ತಿರುವುದರಿಂದ ನೀರು ಮಲಿನವಾಗಿದೆ. ಜಾನುವಾರುಗಳಿಗೆ ಇದೇ ನೀರನ್ನು ಕುಡಿಸುವುದರಿಂದ ಅವುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಅಷ್ಟೇ ಅಲ್ಲದೆ ಪ್ರತಿನಿತ್ಯ ಈ ಗ್ರಾಮದ ಕೆಲವರು ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ಈ ನೀರನ್ನೇ ಬಳಸುತ್ತಿರುವುದು ಅನೈರ್ಮಲ್ಯತೆ ಎದ್ದುಕಾಣುತ್ತಿದೆ.

ಕಣ್ಣಾ ಕಣ್ಣಾಮುಚ್ಚಾಲೆ ಆಡುವ ನಿರಂತರ ವಿದ್ಯುತ್.

ಈ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆ ಅನುಷ್ಠಾನ ವಾಗಿದ್ದರೂ ಕೂಡ ಪ್ರತಿನಿತ್ಯ 10-15 ಬಾರಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಈ ಗ್ರಾಮದ ಸುತ್ತಮುತ್ತ ಇರುವ ಕೆಲವು ಸಣ್ಣ-ಪುಟ್ಟ ಉದ್ದಿಮೆಗಳಿಗೆ ಪ್ರತಿನಿತ್ಯ ನಷ್ಟವಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರಲ್ಲಿ ಮಳೆಯಾದರೆ ಸಾಕು ಜೆಸಿ ಪಡದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕೇಳಿದರೆ ಅವರು ಕಾಟಾಚಾರದ ಉತ್ತರವನ್ನು ನೀಡಿ ಕಳಿಸುತ್ತಾರೆ.

ಬೈಟ್: ಶಂಭುಲಿಂಗಪ್ಪ, ಸ್ಥಳೀಯರು, ಜೆ ಸಿ ಪುರ.

ಒಟ್ಟಾರೆ ಹತ್ತಾರು ಸಮಸ್ಯೆಗಳನ್ನು ಹೊತ್ತಿರುವ ಅರಸೀಕೆರೆ ತಾಲೂಕಿನ ಜೆಸಿ ಪುರ ಗ್ರಾಮದ ಸಮಸ್ಯೆಗಳು ನಾಳೆ ನಡೆಯುವ ಗ್ರಾಮ ವಾಸ್ತವ್ಯದಿಂದ ಹೊಸ ರೂಪ ಪಡೆದು ಅಭಿವೃದ್ಧಿ ಕಾಣುವುದೇ ಕಾದುನೋಡಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:0
Last Updated : Jun 18, 2019, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.