ETV Bharat / state

ವಿಡಿಯೋ ಮೂಲಕ ಅರಸೀಕೆರೆ ಶಾಸಕರ ವಿರುದ್ಧ ನಗರಸಭೆ ಸದಸ್ಯರ ಅಸಮಾಧಾನ - ಅರಸೀಕೆರೆ ನಗರಸಭೆಯ ಆರು ಜನ ಬಂಡಾಯ ಸದಸ್ಯರು

ಅರಸೀಕೆರೆ ನಗರಸಭೆಯ 6 ಮಂದಿ ಸದಸ್ಯರು ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟು ಶಾಸಕ ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Rebel members of Arasikere Municipality against MLA  K M Shivalingegowda
ನಗರಸಭೆ ಸದಸ್ಯರು
author img

By

Published : Jun 30, 2021, 6:54 AM IST

Updated : Jun 30, 2021, 8:48 AM IST

ಹಾಸನ: ಅರಸೀಕೆರೆ ನಗರಸಭೆಯ ಆರು ಜನ ಬಂಡಾಯ ಸದಸ್ಯರು ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದು, ತಮ್ಮ ಸ್ವಂತ ಅಭಿಪ್ರಾಯದಿಂದ ಜೆಡಿಎಸ್ ವಿರುದ್ಧ ಪ್ರತ್ಯೇಕ ಆಸನ ಕೇಳಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಸ್ವಪಕ್ಷ ಜೆಡಿಎಸ್​ ವಿರುದ್ಧವೇ ಬಂಡಾಯವೆದ್ದು ಭಾರೀ ಸಂಚಲನ ಮೂಡಿಸಿದ್ದ ಪ್ರಕರಣವೀಗ ಹೊಸ ತಿರುವು ಪಡೆದಿದೆ.

7 ಸದಸ್ಯರ ಪೈಕಿ 2ನೇ ವಾರ್ಡ್ ಸದಸ್ಯೆ ಕಲೈ ಅರಸಿ ಬಂಡಾಯದಿಂದ ಹೊರಬಂದು, ಜೆಡಿಎಸ್ ನಾಯಕರ ಪರ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲದೇ ‘ನಮಗೆ ಹಣದ ಆಮಿಷವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್, ಸಿಖಂದರ್ ಎಂಬುವರ ಕಡೆಯಿಂದ ನೀಡಿದ್ದರು. 25 ಲಕ್ಷ ರೂ. ಕೊಡುವುದಾಗಿ ಹೇಳಿ ಮುಂಗಡ 10 ಲಕ್ಷ ರೂ. ನಮ್ಮ ಮನೆಗೆ ತಲುಪಿಸಿದ್ರು’ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 25 ಲಕ್ಷ ಕೊಡ್ತೀವಿ, ಪಕ್ಷಕ್ಕೆ ಬನ್ನಿ ಅಂದ್ರು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್​; ಕಲೈ ಅರಸಿ

ಆದರೆ ಇದೀಗ ಇನ್ನುಳಿದ 6 ಮಂದಿ ಸದಸ್ಯರು ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ‘ನಾವು ಹಣ ಪಡೆದು ಬಂಡಾಯ ಎದ್ದಿದ್ದೇವೆ ಎಂಬ ಸುಳ್ಳು ಆರೋಪವನ್ನು ನಮ್ಮ ಮೇಲೆ ಮಾಡಿದ್ದಾರೆ. ಇದು ಸತ್ಯವೇ ಆದ್ರೆ ಶಾಸಕ ಶಿವಲಿಂಗೇಗೌಡ ಅವರು ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ’ ಅಂತ ಸವಾಲು ಹಾಕಿದ್ದಾರೆ.

ನಗರಸಭೆ ಸದಸ್ಯರ ಅಸಮಾಧಾನ

25ನೇ ವಾರ್ಡ್ ಸದಸ್ಯ ವಿದ್ಯಾಧರ, 19ನೇ ವಾರ್ಡ್ ಸದಸ್ಯ ದರ್ಶನ್, 9ನೇ ವಾರ್ಡ್ ಸದಸ್ಯ ಚಂದ್ರಶೇಖರ್, 18ನೇ ವಾರ್ಡ್ ಸದಸ್ಯೆ ಕವಿತಾ ದೇವಿ ಪತಿ ರಾಘವೇಂದ್ರ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜೆಡಿಎಸ್‌ಗೆ ಕೈಕೊಟ್ಟು ಬಿಜೆಪಿಗೆ ಬೆಂಬಲ; ಹಾಸನ ನಗರಸಭೆಯ 7 ಸದಸ್ಯರಿಗೆ ಸಂಕಷ್ಟ..!

Last Updated : Jun 30, 2021, 8:48 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.