ಜಾವಗಲ್(ಹಾಸನ) : ಇಬ್ಬರು ವ್ಯಕ್ತಿಗಳು ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಗೇರುಮರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಾನಮತ್ತ ವ್ಯಸನಿ ಮತ್ತು ಟಿಟಿ ಗಾಡಿಯ ಮಾಲೀಕನ ನಡುವೆ ಗಲಾಟೆಯಾಗಿದೆ.
ಘಟನೆ ಹಿನ್ನಲೆ: ಪಾನಮತ್ತ ವ್ಯಕ್ತಿಯೋರ್ವ ರಸ್ತೆಯ ಬದಿಯಲ್ಲಿ ಮಧ್ಯೆ ಸೇವಿಸಿದ್ದಾನೆ. ಬಳಿಕ ರಸ್ತೆಯ ಬದಿಯಲ್ಲಿ ನಿಂತಿದ್ದ ಟಿಟಿ ವಾಹನದ ಚಕ್ರದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರಿಂದ ಟಿಟಿ ವಾಹನ ಮಾಲೀಕನಿಗೆ ಸಿಟ್ಟು ಬಂದು ಆತನ ವಿರುದ್ದ ಕೂಗಾಡಿದ್ದಾನೆ. ಹೀಗಾಗಿ ಪಾನಮತ್ತ ವ್ಯಕ್ತಿ ಮತ್ತು ಟೆಂಪೋ ಟ್ರಾವಲ್ ಮಾಲೀಕರ ನಡುವೆ ಗಲಾಟೆಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
ವೈನ್ಸ್ ಶಾಪ್ಗಳಲ್ಲಿ ಇದೀಗ ಮಧ್ಯಪಾನ ಮಾಡಲು ನಿಷೇಧ ಹೇರಿಕೆ ಮಾಡಿರುವ ಕಾರಣ, ರಸ್ತೆ ಬದಿಯಲ್ಲಿ ಕುಡಿದು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಇಂತಹ ಸ್ಥಳಗಳಲ್ಲಿ ಪೊಲೀಸರಿಗೆ ನಿಯೋಜನೆ ಮಾಡಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.