ETV Bharat / state

ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಮೂವರು ಸಾವು: ಚನ್ನರಾಯಪಟ್ಟಣದಲ್ಲಿ ದುರಂತ - Channarayapatnam Rural Station news

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾರಿ ದುರಂತ ಸಂಭವಿಸಿದೆ. ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಮೂವರು ಸಾವು
author img

By

Published : Sep 11, 2019, 10:53 AM IST

ಹಾಸನ: ವಿದ್ಯುತ್ ಶಾಕ್​ನಿಂದಾಗಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಗಸರ ಹಳ್ಳಿಯಲ್ಲಿ ನಡೆದಿದೆ. ತಾಯಿ, ಮಗಳು ಮತ್ತು ಮಗ ವಿದ್ಯುತ್​ ಶಾಕ್​ನಿಂದ ಸಾವನ್ನಪ್ಪಿದ್ದಾರೆ.

ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಮೂವರು ಸಾವು

ತಾಯಿ ಭಾಗ್ಯಮ್ಮ, ಮಗಳು ದ್ರಾಕ್ಷಾಯಿಣಿ ಮತ್ತು ಮಗ ದಯಾನಂದ್ ಮೃತರು. ಬಟ್ಟೆ ತೊಳೆದು, ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಹಾಕುವಾಗ ಮಗಳು ದ್ರಾಕ್ಷಾಯಿಣಿಗೆ ಕರೆಂಟ್ ಶಾಕ್​ ತಗುಲಿತ್ತು. ಮಗಳನ್ನು ರಕ್ಷಿಸಲು ತಾಯಿ ಮತ್ತು ಮಗ ಸಹ ಶಾಕ್​ಗೆ ಬಲಿಯಾಗಿದ್ದಾರೆ.

ಈ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹಾಸನ: ವಿದ್ಯುತ್ ಪ್ರವಹಿಸಿದ ಹಿನ್ನಲೆ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಾಗೂರು ಸಮೀಪದ ಅಗಸರ ಹಳ್ಳಿಯಲ್ಲಿ ಇಂತಹದ್ದೊಂದು ದುರ್ಘಟನೆ ಸಂಭವಿಸಿದ್ದು, ತಾಯಿ ಮಗಳು ಮತ್ತು ಮಗ ಸಾವಿಗೀಡಾದ ನತದೃಷ್ಟರು.

ತಾಯಿ ಭಾಗ್ಯಮ್ಮ ಮಗಳು ದ್ರಾಕ್ಷಾಯಿಣಿ ಮತ್ತುಮಗ ದಯಾನಂದ್ ಮೃತಪಟ್ಟವರು. ಬಟ್ಟೆ ತೊಳೆದ ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದ್ದ ತಂತಿಗೆ ಬಟ್ಟೆಯನ್ನು ಒಣಗಿಸಲು ತಂತಿಗೆ ಬಟ್ಟೆ ಹಾಕಿದಾಗ ತಂತಿಯಲ್ಲಿದ್ದ ವಿದ್ಯುತ್ ಏಕಾಏಕಿ ದ್ರಾಕ್ಷಾಯಿಣಿಗೆ ಪ್ರವಹಿಸಿದ ಪರಿಣಾಮ ಕಿರುಚಾಟ ನಡೆಸಿದ್ದಾಳೆ.

ವಿದ್ಯುತ್ ಸ್ಪರ್ಶದಿಂದ ಕಿರುಚಾಟ ನಡೆಸಿ ಸಾವಿಗೀಡಾಗುತ್ತಿದ್ದ ಆಕೆಯನ್ನು ರಕ್ಷಿಸಲು ಹೋದ ತಾಯಿಭಾಗ್ಯ ಮತ್ತು ಸಹೋದರ ದಯಾನಂದ್ ಏಕಾಏಕಿ ಆಕೆಯನ್ನು ಹಿಡಿದು ನಡೆದುಕೊಳ್ಳಲು ಹೋದಾಗ ಅವರಿಗೂ ವಿದ್ಯುತ್ ಸ್ಪರ್ಶ ಉಂಟಾಗಿ ಮೂವರು ಸ್ಥಳದಲ್ಲಿಯೇ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದು ಸಂಬಂಧಿಕರ ರೋಧನೆ ಮುಗಿಲು ಮುಟ್ಟಿತ್ತು. ಇನ್ನು ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಆದರೆ ವಿದ್ಯುತ್ ಇಲಾಖೆಯವರು ಮಳೆಗಾಲದಲ್ಲೂ ಸರಿಯಾದ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದು ಇಂತಹ ಅವಘಡಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆBody:0Conclusion:ಸುನೀಲ್ ಕುಂಭೇನಹಳ್ಳಿ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.