ETV Bharat / state

ವಿಶ್ವಶಾಂತಿಗಾಗಿ ಹಾಸನ ಮೂಲದ ಕಲಾವಿದನ ಸೈಕಲ್​​​ ಸವಾರಿ... ಕ್ರಮಿಸಿದ್ದು 20 ಸಾವಿರ ಕಿ.ಮೀ.! - 20 ಸಾವಿರ ಕಿಲೋ ಮೀಟರ್ ಸೈಕಲ್​ ಸವಾರಿ​

ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದ ನಾಗರಾಜ್‌ ಗೌಡ, ವಿಶ್ವಶಾಂತಿಗಾಗಿ ಈವರೆಗೂ 20 ಸಾವಿರ ಕಿ.ಮೀ. ಸೈಕಲ್‌ ಯಾತ್ರೆ ನಡೆಸಿದ್ದಾರೆ.

ವಿಶ್ವಶಾಂತಿಗಾಗಿ ಕಲಾವಿದನ ಸೈಕಲ್​ ಸವಾರಿ,,, ಕ್ರಮಿಸಿರುವುದು ನೂರು-ಇನ್ನೂರು ಕಿ.ಮೀ ಅಲ್ಲ...!!
author img

By

Published : Nov 23, 2019, 11:05 AM IST

ಹಾಸನ: ರಾಷ್ಟ್ರೀಯ ಏಕತೆ ಮತ್ತು ವಿಶ್ವಶಾಂತಿಗಾಗಿ ಕಲಾವಿದರೊಬ್ಬರು ದೇಶದಾದ್ಯಂತ ಈವರೆಗೂ 20 ಸಾವಿರ ಕಿ.ಮೀ. ಸೈಕಲ್‌ ಯಾತ್ರೆ ನಡೆಸಿದ್ದಾರೆ.

ವಿಶ್ವಶಾಂತಿಗಾಗಿ ಕಲಾವಿದನ ಸೈಕಲ್​ ಸವಾರಿ

ಕಲಾವಿದ ನಾಗರಾಜ್‌ ಗೌಡ ಅವರ ಹುಟ್ಟೂರು ಹಾಸನ. ಹತ್ತು ವರ್ಷದಿಂದ ಮುಂಬೈನಲ್ಲಿ ನೆಲೆಸಿದ್ದು, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದು, ಕನ್ನಡದ ಪ್ರಚಂಡ ಕುಳ್ಳ, ವಿಜಯ್‌ ಚಿತ್ರದಲ್ಲಿ ಪಾನ್‌ ಅಂಗಡಿಯಲ್ಲಿ ವ್ಯಾಪಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಾಗರಾಜ್‌ಗೌಡ ಅವರು ತಾವು ವ್ಯಾಸಂಗ ಮಾಡಿದ ಹಾಸನದ ಆರ್‌.ಸಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ರಾಷ್ಟ್ರೀಯ ಏಕತೆ, ವಿಶ್ವಶಾಂತಿ, ಭಯೋತ್ಪಾದನೆ, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.

2017ರ ಡಿಸೆಂಬರ್​ 3ರಿಂದ ಮುಂಬೈನಿಂದ ಸದ್ಭಾವನಾ ಯಾತ್ರೆ ಆರಂಭಗೊಂಡಿದೆ. ಈವರೆಗೆ ರಾಜಸ್ಥಾನ, ಹರಿಯಾಣ, ಪಂಜಾಬ್‌, ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರಾಖಂಡ್​, ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಬೆಂಗಳೂರು ಸುತ್ತಿರುವ 48 ವರ್ಷದ ಕಲಾವಿದ ನಾಗರಾಜ್‌ ಗೌಡ, ಸದ್ಯ ಹಾಸನ ತಲುಪಿದ್ದಾರೆ.

ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ನೀರು, ಪರಿಸರ, ಗೋ ರಕ್ಷಣೆ, ಜಲ ಹಾಗೂ ಹಸಿರು ಕುರಿತು ಅರಿವು ಮೂಡಿಸುತ್ತಾರೆ. ಯಾತ್ರೆ ವೇಳೆ ರಾಜಕೀಯ ನಾಯಕರಾದ ಅರವಿಂದ್​​ ಕೇಜ್ರಿವಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜನ ಖರ್ಗೆ, ಅಖಿಲೇಶ್‌ ಯಾದವ್, ಕಮಲ್‌ನಾಥ್‌, ಕಲ್ಯಾಣ್‌ ಸಿಂಗ್, ಮನೋಜ್‌ ತಿವಾರಿ ಹಾಗೂ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.

ಮೊದಲ ಹಂತದ ಯಾತ್ರೆ ಮಾರ್ಚ್‌ಗೆ ಪೂರ್ಣಗೊಳಿಸುತ್ತೇನೆ. ಮೂರು ತಿಂಗಳ ವಿಶ್ರಾಂತಿ ಬಳಿಕ ದಾನಿಗಳು ನೆರವು ನೀಡಿದರೆ ಜೂನ್‌ನಿಂದ ಟಿವಿಎಸ್‌ ಮೊಪೆಡ್‌ನಲ್ಲಿ ಎರಡನೇ ಹಂತದ ಯಾತ್ರೆ ಆರಂಭಿಸುತ್ತೇನೆ. ರಾತ್ರಿ ಆಶ್ರಮ, ಮಂದಿರ, ಗುರುದ್ವಾರಗಳಲ್ಲಿ ಮಲಗುತ್ತೇನೆ. ಸೈಕಲ್‌ ಮೇಲೆ ದಿನನಿತ್ಯ ಬಳಕೆಗಾಗಿ ಬಟ್ಟೆ, ಹಾಸಿಗೆ, ಹೊದಿಕೆ ಮತ್ತಿತರ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದೇನೆ. ಧಾರ್ಮಿಕ ಸ್ಥಳಗಳಲ್ಲೇ ಊಟ, ಉಪಾಹಾರ ಸೇವಿಸುತ್ತೇನೆ. ಸಾರ್ವಜನಿಕರು ನನ್ನ ಕಾರ್ಯ ಮೆಚ್ಚಿ ಅಲ್ಪ ಕಾಣಿಕೆ ನೀಡುತ್ತಾರೆ ಎಂದರು.

Intro:ಹಾಸನ: ರಾಷ್ಟ್ರೀಯ ಏಕತೆ ಮತ್ತು ವಿಶ್ವಶಾಂತಿಗಾಗಿ ಕಲಾವಿದರೊಬ್ಬರು ದೇಶದಾದ್ಯಂತ ಈವರೆಗೂ 20 ಸಾವಿರ ಕಿ.ಮೀ. ಸೈಕಲ್‌ ಯಾತ್ರೆ ನಡೆಸಿದ್ದಾರೆ.

ಕಲಾವಿದ ನಾಗರಾಜ್‌ ಗೌಡ ಅವರ ಹುಟ್ಟೂರು ಹಾಸನ. ಹತ್ತು ವರ್ಷದಿಂದ ಮುಂಬೈನಲ್ಲಿ ನೆಲೆಸಿದ್ದು, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದು, ಕನ್ನಡದ ಪ್ರಚಂಡ ಕುಳ್ಳ, ವಿಜಯ್‌ ಚಿತ್ರದಲ್ಲಿ ಪಾನ್‌ ಅಂಗಡಿಯಲ್ಲಿ ವ್ಯಾಪಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನಾಗರಾಜ್‌ಗೌಡ ಅವರು ತಾವು ವ್ಯಾಸಂಗ ಮಾಡಿದ ಹಾಸನದ ಆರ್‌.ಸಿ. ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ರಾಷ್ಟ್ರೀಯ ಏಕತೆ, ವಿಶ್ವಶಾಂತಿ, ಭಯೋತ್ಪಾದನೆ, ಪರಿಸರ ರಕ್ಷಣೆ ಮುಂತಾದ ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.

2017ರ ಡಿ. 3ರಿಂದ ಮುಂಬೈನಿಂದ ಸದ್ಭಾವನಾ ಯಾತ್ರೆ ಆರಂಭಗೊಂಡಿದೆ. ಈವರೆಗೆ ರಾಜಸ್ತಾನ, ಹರಿಯಾಣ, ಪಂಜಾಬ್‌,ಗುಜರಾತ್‌, ಹಿಮಾಚಲ ಪ್ರದೇಶ, ಉತ್ತರಾಖಂಡ, ದಿಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಬೆಂಗಳೂರು ಸುತ್ತಿರುವ 48 ವರ್ಷದ ಕಲಾವಿದ ನಾಗರಾಜ್‌ ಗೌಡ ಹಾಸನ ತಲುಪಿದರು.

ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ನೀರು, ಪರಿಸರ, ಗೋ ರಕ್ಷಣೆ, ಜಲ ಹಾಗೂ ಹಸಿರು ಕುರಿತು ಅರಿವು ಮೂಡಿಸಿದರು.

ಯಾತ್ರೆ ವೇಳೆ ರಾಜಕೀಯ ನಾಯಕರಾದ ಅರವಿಂದ ಕೇಜ್ರಿವಾಲ್, ಶೀಲಾ ದೀಕ್ಷಿತ್‌, ಸಿದ್ದರಾಮಯ್ಯ, ಮಲ್ಲಿಕಾರ್ಜನ ಖರ್ಗೆ, ಅಖಿಲೇಶ್‌ ಯಾದವ್, ಕಮಲ್‌ನಾಥ್‌, ಕಲ್ಯಾಣ್‌ ಸಿಂಗ್, ಮನೋಜ್‌ ತಿವಾರಿ ಹಾಗೂ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.

‘ದೇವರ ಮೇಲೆ ಭಾರ ಹಾಕಿ ಯಾತ್ರೆ ಆರಂಭಿಸಿದೆ. ಯಾರ ಬೆಂಬಲವೂ ಇಲ್ಲ. ಹಣಕಾಸಿನ ನೆರವೂ ಇಲ್ಲ. ದಿನಕ್ಕೆ 80–100 ಕಿ.ಮೀ ಸೈಕಲ್‌ ತುಳಿಯುತ್ತೇನೆ. ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಸೈಕಲ್‌ ಓಡಿಸುತ್ತೇನೆ. ಮಧ್ಯಾಹ್ನ ಸ್ವಲ್ಪ ಹೊತ್ತು ಮರದ ಕೆಳಗೆ ಅಥವಾ ದೇವಸ್ಥಾನಗಳಲ್ಲಿ ವಿಶ್ರಾಂತಿ ಪಡೆಯುತ್ತೇನೆ’ ಎಂದು ನಾಗರಾಜ್‌ ಗೌಡ ಹೇಳಿದರು.

‘ಮೊದಲ ಹಂತದ ಯಾತ್ರೆ ಮಾರ್ಚ್‌ಗೆ ಪೂರ್ಣಗೊಳಿಸುತ್ತೇನೆ. ಮೂರು ತಿಂಗಳ ವಿಶ್ರಾಂತಿ ಬಳಿಕ ದಾನಿಗಳು ನೆರವು ನೀಡಿದರೆ ಜೂನ್‌ನಿಂದ ಟವಿಎಸ್‌ ಮೊಪೆಡ್‌ನಲ್ಲಿ ಎರಡನೇ ಹಂತದ ಯಾತ್ರೆ ಆರಂಭಿಸುತ್ತೇನೆ. ರಾತ್ರಿ ಆಶ್ರಮ, ಮಂದಿರ, ಗುರುದ್ವಾರಗಳಲ್ಲಿ ಮಲಗುತ್ತೇನೆ. ಧಾರ್ಮಿಕ ಸ್ಥಳಗಳಲ್ಲೇ ಊಟ, ಉಪಾಹಾರ ಸೇವಿಸುತ್ತೇನೆ. ಸಾರ್ವಜನಿಕರು ನನ್ನ ಕಾರ್ಯ ಮೆಚ್ಚಿ ಅಲ್ಪ ಕಾಣಿಕೆ ನೀಡುತ್ತಾರೆ’ ಎಂದರು.

ಸೈಕಲ್‌ ಮೇಲೆ ದಿನನಿತ್ಯ ಬಳಕೆಗಾಗಿ ಬಟ್ಟೆ, ಹಾಸಿಗೆ, ಹೊದಿಕೆ ಮತ್ತಿತರ ಸಾಮಗ್ರಿಗಳನ್ನು ಇಟ್ಟುಕೊಂಡಿದ್ದಾರೆ. ರಾಷ್ಟ್ರ ಧ್ವಜ ಕಟ್ಟಿದ್ದಾರೆ.

ಬೈಟ್ : ನಾಗರಾಜ್‌ಗೌಡ, ಸೈಕಲ್‌ ಯಾತ್ರಿ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.