ETV Bharat / state

ಪುರಾತನ ದೇಗುಲದ ಕಳಶ ಕದ್ದೊಯ್ದ ಕಳ್ಳರು... ಖದೀಮರ ಬಂಧನಕ್ಕೆ ಬಲೆ ಬೀಸಿದ ಪೊಲೀಸರು - ಹಾಸನ ದೇವರ ಕಳಸ ಕಳ್ಳತನ

ರಾಜ್ಯ ಪುರಾತತ್ವ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಗೋಪುರದ ಕಳಸವನ್ನು ಖದೀಮರು ಕಳ್ಳತನ ಮಾಡಿರುವ ವಿಚಾರ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

thieves-theft-to-kalasa-in-shiva-temple
ದೇವರ ಕಳಶವನ್ನೇ ಕದ್ದೊಯ್ದ ಕಳ್ಳರು.
author img

By

Published : Feb 19, 2020, 5:17 AM IST

ಹಾಸನ : ಪುರಾತನ ಕಾಲದ ಗೋಪುರದ ಕಳಶವನ್ನ ಕದ್ದೊಯ್ದಿರುವ ಘಟನೆ ತಾಲ್ಲೂಕಿನ ನುಗ್ಗೇಹಳ್ಳಿಯಲ್ಲಿರುವ ಶಿವನ ದೇವಾಲಯದಲ್ಲಿ ನಡೆದಿದೆ.

ರಾಜ್ಯ ಪುರಾತತ್ವ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಗೋಪುರದ ಕಳಸವನ್ನು ಖದೀಮರು ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೇವಾಲಯಕ್ಕೆ ಪುರಾತತ್ವ ಮತ್ತು ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯ ವತಿಯಿಂದ ಇಬ್ಬರು ಕಾವಲುಗಾರರನ್ನ ನೇಮೀಸಲಾಗಿದ್ದು, ಕಾವಲುಗಾರರು ಒಂದೇ ಕುಟುಂಬಕ್ಕೆ ಸೇರಿದ್ದವರಾಗಿದ್ದಾರೆ. ದೇವಾಲಯದ ಸಂರಕ್ಷಣೆಯ ಕಾರ್ಯವನ್ನ ಸರಿಯಾಗಿ ನಿರ್ವಹಿಸುತ್ತಿರಲಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ. ಕಾವಲುಗಾರರ ಕರ್ತವ್ಯ ಲೋಪದಿಂದ ಈ ಘಟನೆ ನಡೆದಿದೆ ಎಂಬ ಸ್ಥಳೀಯರು ಆರೋಪಿಸಿದ್ದಾರೆ.

ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ದೇವಸ್ಥಾನದ ಟ್ರಸ್ಟಿಗಳು ದೂರು ನೀಡಿದ್ದಾರೆ. ಮೇಲುಕೋಟೆಯ ಚಲುವರಾಯಸ್ವಾಮಿ ದೇವಾಲಯದ ಕಳ್ಳತನದ ಮಾದರಿಯಲ್ಲೇ ನುಗ್ಗೇಹಳ್ಳಿಯ ದೇವಾಲಯದಲ್ಲಿನ 12 ಪಂಚಲೋಹ ವಿಗ್ರಹಗಳಲ್ಲಿ ಒಂದಾದ 11ನೇ ಬಲಿಚಕ್ರವರ್ತಿಯ ವಿಗ್ರಹ ಬದಲಾಗಿದೆ. ಆ ವಿಗ್ರಹದ ಬದಲಿಗೆ ಅಚ್ಚು ಹಾಕಿಸಿದ್ದ ತಗಡಿನ ಮೂರ್ತಿ ಇಟ್ಟಿದ್ದ ಪ್ರಕರಣಗಳು ಮಾಸುವ ಮುನ್ನವೇ ಈಗ ಮತ್ತೊಂದು ಕಳಶ ಕಳವು ಪ್ರಕರಣ ನಡೆದಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಹಾಸನದಲ್ಲಿ ಕಳ್ಳತನವಾದ ದೇಗುಲದ ಕಳಶ

ಸ್ಥಳಕ್ಕೆ ನುಗ್ಗೇಹಳ್ಳಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಕೆಲವು ಮಾಹಿತಿಯನ್ನು ಆಧಾರಿಸಿ ಖದೀಮರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.