ಹಾಸನ: ಬೇಲೂರು ಪಟ್ಟಣದ ಯಗಚಿ ಹೊಳೆ ಪಕ್ಕದ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು,ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೃತ ವ್ಯಕ್ತಿ ಸುಮಾರು 45 ವರ್ಷದ ಪುರುಷ ಎಂದು ತಿಳಿದುಬಂದಿದ್ದು,ಮೃತದೇಹವನ್ನು ಮರದ ಎಲೆಗಳಿಂದ ಮುಚ್ಚಿದ್ದು ಬಹುತೇಕ ಉಸಿರುಗಟ್ಟಿ ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಬೇಲೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.