ETV Bharat / state

ಮಳೆಹಾನಿ ಪ್ರದೇಶಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಭೇಟಿ, ಪರಿಶೀಲನೆ

ಸಕಲೇಶಪುರ ಪಟ್ಟಣದಲ್ಲಿ ಮಳೆಯಿಂದ ಹಾನಿಯಾಗಿರುವ ಬಡಾವಣೆಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲಿಸಿದರು.

author img

By

Published : Aug 8, 2019, 10:24 PM IST

ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ

ಹಾಸನ: ಸಕಲೇಶಪುರ ಪಟ್ಟಣದಲ್ಲಿ ಮಳೆಯಿಂದ ಹಾನಿಯಾಗಿರುವ ಬಡಾವಣೆಗಳಿಗೆ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿದ್ದರು.

ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ

ಬಳಿಕ ಪತ್ನಿ ಚಂಚಲ ಕುಮಾರಸ್ವಾಮಿಯವರೊಂದಿಗೆ ಹೊಳೆಮಲ್ಲೇಶ್ವರ ದೇವಾಲಯದ ತಟದಲ್ಲಿ ಹರಿಯುವ ಹೇಮಾವತಿ ನದಿಗೆ ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದ್ರು. ಹೇಮಾವತಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನಿಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜನರ ಆರೋಗ್ಯ ರಕ್ಷಣೆಗಾಗಿ ಮಾಂಸದ ಅಂಗಡಿಗಳನ್ನ ತೆರವುಗಳಿಸುವುದಕ್ಕೆ ಸೂಚಿಸಿದರು. ಅಲ್ಲದೇ ಗಂಜಿ ಕೇಂದ್ರಗಳನ್ನ ತೆರೆದು ಸಂತ್ರಸ್ತ ಕುಟುಂಬಗಳಿಗೆ ಬೇಕಾಗಿರುವ ಮೂಲ ಸೌಲಭ್ಯ ಮತ್ತು ಸೌಕರ್ಯಗಳನ್ನ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಅಕೀತು ಮಾಡಿದರು.

ಸಕಲೇಶಪುರ ಪಟ್ಟಣದ ಕೆಲ ಬಡಾವಣೆಗಳಲ್ಲಿರುವ ಮನೆಗಳಲ್ಲಿ ನೀರು ತುಂಬಿರುವುದಿರಂದ ಇಲ್ಲಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯವನ್ನ ವಿಪತ್ತು ನಿರ್ವಹಣಾ ತಂಡ ಮಾಡುತ್ತಿದೆ. ಭಾರಿ ಮಳೆಯಿರುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು, ಇಂದು ಆಲೂರು-ಸಿಂಗಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದಿರಂದ ಟ್ರಕ್​ಗಳು ಮಣ್ಣಿನಲ್ಲಿಯೇ ಸಿಲುಕಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್​ ಆಗಿತ್ತು. ಈ ನಡುವೆ ಮಳೆ ಸುರಿಯುತ್ತಿರುವುದರಿಂದ ವಾಹನಗಳ ತೆರವಿಗೆ ಮತ್ತು ಮಳೆಯಿಂದ ರಸ್ತೆಗೆ ಬಿದ್ದ ಮರಗಳನ್ನ ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಸಂಚಾರಿ ಪೊಲೀಸರು ಹರಸಾಹಸಪಟ್ಟು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Intro:ಮಳೆಯಿಂದ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ

ಮಳೆಯಿಂದ ಈಗಾಗಲೇ ಸಕಲೇಶಪುರ ಪಟ್ಟಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಬಡಾವಣೆಯ ಜನ್ರು ನೀರನ್ನ ಹೊರಹಾಕಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

ಮಳೆಯಿಂದ ಸಂತ್ರಸ್ಥರಾಗಿರೋ ಬಡಾವಣೆಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಸ್ಥಳೀಯ ಶಾಸಕ ಪುರಸಭೆಗೆ ಭೇಟಿ ನೀಡಿ ನೀರಿನಿಂದ ಜಲಾವೃತವಾಗಿರೋ ಬಡಾವಣೆಗಳ ಮತ್ತು ಇನ್ನಿತರ ಪ್ರದೇಶಗಳ ಮಾಹಿತಿಯನ್ನ ಪಡೆದ ಬಳಿಕ ಪತ್ನಿ ಚಂಚಲ ಕುಮಾರಸ್ವಾಮಿಯವರೊಂದಿಗೆ ಹೊಳೆಮಲ್ಲೇಶ್ವರ ದೇವಾಲಯದ ತಟದಲ್ಲಿ ಹರಿಯುವ ಹೇಮಾವತಿ ನದಿಗೆ ಗಂಗೆ ಪೂಜೆ ಮಾಡಿ ಬಾಗಿನಾ ಅರ್ಪಿಸಿದ್ರು.

ಬೈಟ್: ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.

ಗರ್ಭಗುಡಿಗೆ ನುಗ್ಗಿದ ನೀರು: ನೀರಿನ ಮಧ್ಯೆಯೇ ಹೊಳೆಮಲ್ಲೇಶ್ವರನಿಗೆ ಅಭಿಷೇಕ ಪೂಜೆ:

ಇನ್ನು ತಾಲ್ಲೂಕಿನಾದ್ಯಂತ ವರ್ಷಧಾರೆ ಮುಂದುವರೆದಿರುವುದರಿಂದ ಕೆರೆ ಕಟ್ಟೆಗಳು ಕೂಡಾ ತುಂಬುವ ಹಂತ ತಲುಪಿದ್ದು, ಸಕಲೇಶಪುರದಲ್ಲಿ ಮಳೆಯಿಂದ ಲಕ್ಷಾಂತರ ಹೆಕ್ಟರ್ ಪ್ರದೇಶಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗುತ್ತಿದೆ. ಇನ್ನು ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಗರ್ಭಗುಡಿಯೊಳಗೂ ನೀರು ತುಂಬಿಕೊಂಡು ನೀರಿನಲ್ಲಿಯೇ ನಿಂತು ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ದೇವಾಲಯದ ತುಂಬ ನೀರು ಹರಿದಿರುವುದರಿಂದ ದೇವಾಲಯದ ಹಲವು ವಸ್ತುಗಳು ಹಾಳಾಗಿದ್ದು, ಕೆಲವು ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆಯಂತೆ.

ಕಾಲ್ನಡಿಗೆಯಲ್ಲಿಯೇ ಬೇಟಿ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ:

ಇನ್ನು ಹೇಮಾವತಿ ಹಿನ್ನಿರಿನ ಪ್ರದೇಶಕ್ಕೆ ಭೇಟಿ ನಿಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ಥ ಕುಟುಂಬಗಳಿಗೆ ಬೇಕಾಗಿರುವ ಮೂಲ ಸೌಲಭ್ಯ ಮತ್ತು ಸೌಕರ್ಯಗಳನ್ನ ಒದಗಿಸುವಂತೆ ಸೂಚಿಸಿದ್ರು. ಇನ್ನು ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕಾಲ್ನಡಿಗೆಯ ಮೂಲಕ ಭೇಟಿ ನೀಡಿ ನಿರಾತ್ರಿತರಿಗೆ ಸಾತ್ವಾನ ಹೇಳಿದ್ದು, ನದಿಯ ಸಮೀಪವಿರುವ ಕೋಳಿಯಂಗಡಿ ಮತ್ತು ಮಾಂಸ ಮಾರಾಟದಂಗಡಿಯನ್ನ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸೂಚಿಸಿದ್ರು.

ಬೈಟ್: ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.

ವಿಪತ್ತು ನಿರ್ವಾಹಣಾ ತಂಡ ಸಚ್ಚು: ರಜೆ ನೀಡದ ಕೇಂದ್ರ ಸ್ಥಾನ ಬಿಟ್ಟ ಅಧಿಕಾರಿಗಳಿಗೆ ಡಿಸಿ ನೋಟಿಸ್:

ಇನ್ನು ಸಕಲೇಶಪುರ ಪಟ್ಟಣದ ಕೆಲ ಬಡಾವಣೆಗಳಲ್ಲಿರುವ ಮನೆಗಳಲ್ಲಿ ನೀರು ತುಂಬಿರುವುದಿರಂದ ಮನೆಯವರನ್ನ ಬೇರೆಡೆಗೆ ಸ್ಥಾಳಾಂತರ ಮಾಡುವ ಕಾರ್ಯ ಕೂಡಾ ವಿಪತ್ತು ನಿರ್ವಾಹಣಾ ತಂಡ ಮಾಡುತ್ತಿದ್ದು, ಈಗಾಗಲೇ ತಾಲ್ಲೂಕು ಆಡಳಿತದಿಂದ ಸಂತ್ರಸ್ಥರಿಗೆ ನಿರಾಶ್ರಿತರ ತಾಣದ ವ್ಯವಸ್ಥೆಯನ್ನ ಕೂಡಾ ಮಾಡಲಾಗಿದೆ. ಇನ್ನು ಇಂದು ಕೂಡಾ ಶಾಲಾ ಕಾಲೇಜುಗಳ ರಜೆಯನ್ನ ಮುಂದುವರೆಸಿದ್ದು, ರಜೆ ನೀಡದ ಶಾಲೆಗಳಿಗೆ ಹಾಗೂ ಅನುಮತಿಯಲ್ಲದೇ ಕೇಂದ್ರಸ್ಥಾನವನ್ನ ಬಿಟ್ಟು ಬೇರೆಡೆಗೆ ತೆರಳಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಛೇರಿಯಿಂದ ನೋಡಿಸ್ ನೀಡಲಾಗಿದ್ದು, ಶಿಸ್ತುಕ್ರಮ ಜರುಗಿಸುವ ಆದೇಶವನ್ನ ಹೊರಡಿಸಿದ್ದಾರೆ.

ರಸ್ತೆ ಮಧ್ಯ ಬಿದ್ದ ಮರ ಸಂಚಾರ ಅಸ್ಯವ್ತಸ್ತ:

ದಿನದಿಂದ ದಿನಕ್ಕೆ ವರ್ಷಾಧಾರೆ ಹೆಚ್ಚಾಗುತ್ತಿದ್ದು, ಸಕಲೇಶಪುರ ಮತ್ತು ಹಾಸನ ನಡುವಿನ ಒಸ್ಸೂರು ಎಸ್ಟೆಟ್ ಬಳಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ಮರಗಲು ಧರೆಗುರುಳಿದ್ದು, ಕೆಲಕಾಲ ಟ್ರಾಫಿಕ್ಸ್ ಜಾಮ್ ಉಂಟಾಗಿತ್ತು. ಇನ್ನು ಆಲೂರು-ಸಿಂಗಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದಿರಂದ ಟ್ರಕ್ ಗಳು ಮಳೆಯ ತೇವಾಂಶಕ್ಕೆ ಮಣ್ಣಿನಲ್ಲಿಯೇ ಸಿಲುಕು ಸುಮಾರು 2ಗಂಟೆಗೂ ಹೆಚ್ಚುಕಾಲ ರಸ್ತೆ ಬಂದಾಗಿತ್ತು. ಇದ್ರ ನಡುವೆ ಮಳೆ ಸುರಿಯುತ್ತಿರುವುದರಿಂದ ವಾಹನಗಳ ತೆರವಿಗೆ ಮತ್ತು ಮಳೆಯಿಂದ ರಸ್ತೆಗೆ ಬಿದ್ದ ಮರಗಳನ್ನ ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಸಂಚಾರಿ ಪೊಲೀಸರು ಹರಸಾಹಸವನ್ನೆ ಪಟ್ಟು, ಕೊನೆಗೂ ಮಧ್ಯಾಹ್ನ 1ಗಂಟೆಯ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಒಟ್ಟಾರೆ ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟೆಯಲ್ಲದೇ ವರುಣನ ಅಬ್ಬರ ಹಾಸನ ಜಿಲ್ಲೆಯಲ್ಲಿಯೂ ಹೆಚ್ಚಾಗಿದ್ದು, ನದಿ ಪಾತ್ರದ ಜನತೆಯ ಗೋಳು ಹೇಳತೀರದಾಗಿದೆ. ಇನ್ನು ಕೈಗೆ ಬರುವ ಮುನ್ನವೇ ಮಳೆಯಬ್ಬರದಿಂದ ಬೆಳೆಗಳೆಲ್ಲವೂ ನೀರುಪಾಲಾಗುತ್ತಿರುವುದುರಿಂದ ರೈತಾಪಿ ವರ್ಗ ಕೂಡಾ ಕಂಗಾಲಾಗಿದ್ದಾನೆ. ಸರ್ಕಾರ ಕೂಡಲೇ ಬೆಳೆನಷ್ಟದ ಪರಿಹಾರವನ್ನ ನೀಡಬೇಕೆಂದು ರೈತರು ಮತ್ತು ಸ್ಥಳೀಯರು ಶಾಸಕರಿಗೆ ಮನವಿ ಮಾಡ್ತಿದ್ದಾರೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.