ಸಕಲೇಶಪುರ: ಪಟ್ಟಣದ ಆಜಾದ್ ರಸ್ತೆಯಲ್ಲಿ ಲಾಕ್ಡೌನ್ ನಡುವೆಯು ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತಿದ್ದ ಅಂಗಡಿಗಳಿಗೆ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಪುರಸಭಾ ಸಿಬ್ಬಂದಿ ಬೀಗ ಜಡೆದರು.
ಕೋಳಿ, ಮೀನು ಮಾಂಸದ ಅಂಗಡಿಗಳಿಗೆ ಮಾತ್ರ ದಿನ ಬಿಟ್ಟು ದಿನ ಮಾಂಸ ಮಾರಾಟ ಮಾಡಲು ಅವಕಾಶವಿದ್ದು, ಇದರ ನಡುವೆ ಅಕ್ರಮವಾಗಿ ಗೋ ಮಾಂಸವನ್ನು ಕೆಲವರು ಮಾರುತ್ತಿದ್ದರು. ಅಂಗಡಿಗಳನ್ನು ಮುಚ್ಚುವಂತೆ ಹಲವು ಬಾರಿ ಮನವಿ ಮಾಡಿದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಖುದ್ದು ಸ್ಥಳಕ್ಕೆ ಆಗಮಿಸಿ ಅಂಗಡಿಗಳಿಗೆ ಬೀಗ ಮುದ್ರೆ ಹಾಕಿದರು.
ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಪುರಸಭಾ ಪರಿಸರ ಇಂಜಿನಿಯರಿಂಗ್ ಸಹನಾ, ಪುರಸಭಾ ಕಂದಾಯ ನಿರೀಕ್ಷಕ ಅನಿಲ್, ಪಿಎಸ್ಐ ರಾಘವೇಂದ್ರ ಮುಂತಾದವರು ಹಾಜರಿದ್ದರು.