ETV Bharat / state

ಸರ್​​​ ಕೆಜಿಗೆ ಹತ್ತ್, ಕೆಜಿಗೆ ಹತ್ತ್...ಏನ್ ತಗೊಂಡ್ರು ಕೆಜಿಗೆ ಹತ್ತು..ಈ ಆಫರ್​ ಯಾರ್​ ಕೊಟ್ಟಿದ್ದು?

ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ, ಮಕ್ಕಳ ಸಂತೆಯಲ್ಲಿ ಆಲೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡರು.

ಮಕ್ಕಳ ಸಂತೆ
author img

By

Published : Aug 30, 2019, 10:22 PM IST

ಹಾಸನ: ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಿದ್ದ ವಿದ್ಯಾರ್ಥಿಗಳು, ಇಂದು ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡೋಕೆ ತಮ್ಮ ಪೋಷಕರುಗಳನ್ನೇ ಕರೆಯುತ್ತಾ ಇದ್ರು. ಹೀಗೆ ವ್ಯಾಪಾರ ಮಾಡ್ತಿರೋರು ಆಲೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಕ್ಷೇತ್ರ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮೆಟ್ರಿಕ್ ಮೇಳ ಮತ್ತು ಮಕ್ಕಳ ಸಂತೆ ಕಾರ್ಯಕ್ರಮದ ನಿಮಿತ್ತ ಈ ಹುಡುಗ್ರು ವ್ಯಾಪಾರದಲ್ಲಿ ತಲ್ಲಿನರಾಗಿದ್ರು.

ಇಂದಿನ ಮಕ್ಕಳಿಗೆ ಅಂತರ್ಜಾಲ ಮಾರುಕಟ್ಟೆ ಬಂದ ಬಳಿಕ ಗ್ರಾಮೀಣಾ ಭಾಗದ ವ್ಯಾಪಾರ-ವ್ಯಹಹಾರ-ಸಂತೆಗಳ ಕಾರ್ಯಚಟುವಟಿಕೆಗಳು ಮರೆಯಾಗುತ್ತಿವೆ. ಅದನ್ನ ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಂತೆಯನ್ನ ಏರ್ಪಡಿಸಲಾಗಿತ್ತು. ಮಕ್ಕಳಿಂದಲೇ ವ್ಯಾಪಾರ-ವಹಿವಾಟು ಮಾಡಿಸುವ ಮೂಲಕ ಅರಿವು ಮೂಡಿಸಲಾಯ್ತು.

ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಂತೆ

5-8ನೇ ತರಗತಿಯ ಮಕ್ಕಳುಗಳು ತಾವು ಮನೆಯಿಂದ ತಂದಿದ್ದ ಬೇಳೆಕಾಳು, ತರಕಾರಿ, ಬಟ್ಟೆ, ಪಾತ್ರೆ, ಆಟಿಕೆ, ಅಡುಗೆ ಮಾಡುವ ದಿನಬಳಕೆ ಸಾಮಗ್ರಿಗಳು, ಸೀರೆ, ತೆಂಗಿನಕಾಯಿ, ಗ್ರಾಮೀಣ ಭಾಗದಿಂದ ತಂದಿರುವ ಗೆಡ್ಡೆ-ಗೆಣಸುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿ ವ್ಯವಹಾರಿಕ ಅನುಭವ ಪಡೆಯುವುದಷ್ಟೆ ಅಲ್ಲದೇ ವ್ಯಾಪಾರದಲ್ಲಿಯೂ ಸೈ- ಓದಿನಲ್ಲೂ ಸೈ ಎನಿಸಿಕೊಂಡರು.

ತಾಲೂಕು ಶಿಕ್ಷಣ ಜಿಲ್ಲಾ ಸಂಯೋಜಕ ರವಿಕುಮಾರ್ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಚಿನ ಕಾಲದಲ್ಲಿ ವಸ್ತುಗಳನ್ನ ಕೊಡು-ಕೊಳ್ಳುವಿಕೆ ಇದ್ದು, ಬಳಿಕ ಹಣದ ಚಲಾವಣೆ ಬಳಕೆಗೆ ಬಂದಿದೆ. ಅದೇ ರೀತಿ ಗ್ರಾಮೀಣಾ ಭಾಗದದಲ್ಲಿ ಹಿಂದೆ ಜಮೀನನ್ನ ಗುತ್ತಿಗೆ ಮಾಡಿಕೊಳ್ಳುತ್ತಿದ್ದರು. ಧವಸವನ್ನ ಹಂಚಿಕೆ ಮಾಡಿಕೊಳ್ಳುವಾಗ ಕೊಳಗದಲ್ಲಿ ತೂಕ ಮಾಡಿ ಒಂದು ಪಲ್ಲ, 2 ಪಲ್ಲ ಎಂದು ಕೊಡುವ ವ್ಯವಸ್ಥೆ ಇತ್ತು. ಆದ್ರೆ ಅದು ಕೂಡಾ ಬದಲಾಗಿದ್ದು, ಕಿಲೋಗೆ ಬಂದಿದೆ. ಅಂತಹುಗಳನ್ನೆಲ್ಲಾ ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದ್ರು.

Intro:ಹಾಸನ: ಕೆಜಿಗೆ ಹತ್ತ್, ಕೆಜಿಗೆ ಹತ್ತ್,...ಏನ್ ತಗೊಂಡ್ರು ಕೆಜಿಗೆ ಹತ್ತು..ಬನ್ನಿ ಬನ್ನಿ ಬೇಗ ಬೇಗ ಬನ್ನಿ...ರೀ...ಇಲ್ಲೋಡ್ರಿ...ಸ್ಕೂಲಿಗೋಗೋ ಬದ್ಲು. ಇಲ್ಲಿ ಬಂದು ತರಕಾರಿ ಮಾರ್ತಿದ್ದಾರೆ ಅಂತ ಯೋಚಿಸ್ತಿದ್ದೀರಾ...ಹಾಗಿದ್ರೆ ಇಲ್ಲಿದೆ ನೋಡಿ ಇವ್ರ ಸ್ಟೋರಿ...

ತರತರಗತಿಯಲ್ಲಿ ಕುಳಿತು ಪಾಠ ಕೇಳಬೇಕಿದ್ದ ವಿದ್ಯಾರ್ಥಿಗಳು ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡೋಕೆ ಪುಟ್ಟ ಪುಟ್ಟ ಮಳಿಗೆಯನ್ನ ಮಾಡಿಕೊಂಡು ತಮ್ಮ ಪೊಷಕರುಗಳನ್ನೇ ಕರೆಯುತ್ತಾ, ಹೀಗೆ ವ್ಯಾಪಾರ ಮಾಡ್ತಿರೋ ಹುಡುಗ್ರು ಬೇರ್ಯಾರು ಅಲ್ಲ ಬಿಡಿ. ಆಲೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಕ್ಷೇತ್ರ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮೆಟ್ರಿಕ್ ಮೇಳ ಮತ್ತು ಮಕ್ಕಳ ಸಂತೆ ಕಾರ್ಯಕ್ರಮದ ನಿಮಿತ್ತ ಈ ಹುಡುಗ್ರು ವ್ಯಾಪಾರದಲ್ಲಿ ತಲ್ಲಿನರಾಗಿದ್ರು.

ಇಂದಿನ ಮಕ್ಕಳಿಗೆ ಅಂತರ್ಜಾಲ ಮಾರುಕಟ್ಟೆ ಬಂದ ಬಳಿಕ ಗ್ರಾಮೀಣಾ ಭಾಗದ ವ್ಯಾಪಾರ-ವ್ಯಹಹಾರ-ಸಂತೆಗಳ ಕಾರ್ಯಚಟುವಟಿಕೆಗಳು ಮರೆಯಾಗುತ್ತಿದ್ದು, ಅದನ್ನ ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸಂತೆಯನ್ನ ಏರ್ಪಡಿಸಿ ಮಕ್ಕಳಿಂದಲೇ ವ್ಯಾಪಾರ-ವಹಿವಾಟು ಮಾಡಿಸುವ ಮೂಲಕ ಅರಿವು ಮೂಡಿಸಲಾಯ್ತು.

5-8ನೇ ತರಗತಿಯ ಮಕ್ಕಳುಗಳು ತಾವು ಮನೆಯಿಂದ ತಂದಿದ್ದ ಬೇಳೆಕಾಳು, ತರಕಾರಿ, ಬಟ್ಟೆ, ಪಾತ್ರೆ, ಆಟಿಕೆ, ಅಡುಗೆ ಮಾಡುವ ದಿನಬಳಕೆ ಸಾಮಗ್ರಿಗಳು, ಸೀರೆ, ತೆಂಗಿನಕಾಯಿ, ಗ್ರಾಮೀಣ ಭಾಗದಿಂದ ತಂದಿರುವ ಗೆಡ್ಡೆ-ಗೆಣಸುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿ ವ್ಯವಹಾರಿಕ ಅನುಭವ ಪಡೆಯುವುದಷ್ಟೆಯಲ್ಲದೇ ವ್ಯಾಪಾರದಲ್ಲಿಯೂ ಸೈ- ಓದಿನಲ್ಲೂ ಸೈ ಎನಿಸಿಕೊಂಡರು.

ಆಲೂರು ಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ನೂತನ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇತ್ರ ಶಿಕ್ಷಣಾದಿಕಾರಿ ಹೊನ್ನೇಶ ಕುಮಾರ ಮಾತನಾಡಿ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವುದು, ತರಗತಿಯಲ್ಲಿ ಪಡೆದ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು, ಗೇಣು, ಮಾರು, ಮೊಳ, ಚಟಾಕು, ಪಾವು, ಶೇರು ಮುಂತಾದವುಗಳ ಅರಿವು ಮೂಡಿಸುವುದು ಈ ಮೆಟ್ರಿಕ್ ಮೇಳದ ಉದ್ದೇಶವಾಗಿದ್ದು, ಗ್ರಾಮೀಣ ಭಾಷೆಯಲ್ಲಿದ್ದ ಇವೆಲ್ಲವೂ ಮಾಯವಾಗಿ ಈಗೆ ಕೆಜಿ, ಗ್ರಾಂ, ಪೌಂಡ್ ರೂಪದಲ್ಲಿ ನಾವು ಬಳಸುತ್ತಿದ್ದೇವೆ. ಎರಡನ್ನು ಜೊತೆಯಾಗಿಯೇ ವಿದ್ಯಾರ್ಥಿಗಳಿಗೆ ಕಲಿಸುವ ಕಾರ್ಯಕ್ರಮ ಇದ್ದಾಗಿದೆ ಎಂದ್ರು.

ಬೈಟ್: ಹೊನ್ನೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ.ಆಲೂರು.

ತಾಲ್ಲೂಕು ಶಿಕ್ಷಣ ಜಿಲ್ಲಾ ಸಂಯೋಜಕ ರವಿಕುಮಾರ್ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾಚಿನ ಕಾಲದಲ್ಲಿ ವಸ್ತುಗಳನ್ನ ಕೊಡು-ಕೊಳ್ಳುವಿಕೆ ಇದ್ದು, ಬಳಿಕ ಹಣದ ಚಲಾವಣೆ ಬಳಕೆಗೆ ಬಂದಿದೆ. ಅದೇ ರೀತಿ ಗ್ರಾಮೀಣಾ ಭಾಗದದಲ್ಲಿ ಹಿಂದೆ ಜಮೀನನ್ನ ಗುತ್ತಿಗೆ ಮಾಡಿಕೊಳ್ಳುತ್ತಿದ್ದರು. ಧವಸವನ್ನ ಹಂಚಿಕೆ ಮಾಡಿಕೊಳ್ಳುವಾಗ ಕೊಳಗದಲ್ಲಿ ತೂಕ ಮಾಡಿ ಒಂದು ಪಲ್ಲ, 2 ಪಲ್ಲ ಎಂದು ಕೊಡುವ ವ್ಯವಸ್ಥೆ ಇತ್ತು. ಆದ್ರೆ ಅದು ಕೂಡಾ ಬದಲಾಗಿದ್ದು, ಕಿಲೋಗೆ ಬಂದಿದೆ. ಅಂತಹುಗಳನ್ನೆಲ್ಲಾ ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದ್ರು

ಬೈಟ್: ರವಿಕುಮಾರ್, ಶಿಕ್ಷಣ ಸಂಯೋಜಕ.

ಒಟ್ಟಾರೆ ಕಾಲ ಬದಲಾದಂತೆ ವ್ಯವಸ್ಥೆಗಳು ಬದಲಾಗುತ್ತಿದ್ದು, ಕೆಲವೊಂದು ಕಡೆ ಇನ್ನು ಗ್ರಾಮೀಣಾ ಭಾಗದ ಸಂತೆಗಳು ಜೀವಂತವಾಗಿದೆ. ಆದ್ರೆ ನಗರ ಪ್ರದೇಶದಲ್ಲಿ ಮಾಲ್ ಗಳು ಬಂದ ಬಳಿಕ ಸಂತೆಗಳು ತಮ್ಮ ಅಸ್ಥಿತ್ವವನ್ನ ಸ್ವಲ್ಪ ಕಳೆದುಕೊಂಡ್ರು, ಹಳ್ಳಿಗರಿಗೆ ಸಂತೆಯೇ ಅಚ್ಚು ಮೆಚ್ಚು. ಅಂತಹ ಗ್ರಾಮೀಣಾ ಭಾಗದ ವ್ಯವಹಾರಿಕ ಪದ್ದತಿಯನ್ನ ನಂಬಿಕೊಂಡು ಅದೇಷ್ಟೋ ಜನ್ರು ಜೀವನ ನಡೆಸುತ್ತಿದ್ದಾರೆ. ಅಂತಹ ಕುಟುಂಬದ ಜೀವನವನ್ನ, ಹಣದ ಮೌಲ್ಯವನ್ನ ಮಕ್ಕಳಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡ ಶಾಲೆಗೊಂದು ನಮ್ಮಕಡೆಯಿಂದಲೂ ಒಂದು ಶುಭಾಶಯ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.