ETV Bharat / state

ಪುಂಡ ಪೋಕರಿಗಳ ಹೆಡೆಮುರಿಕಟ್ಟಲು ಸಜ್ಜಾದ ಹಾಸನ ಪೊಲೀಸರು: ಎಸ್​​ಪಿ ಖಡಕ್​​ ಎಚ್ಚರಿಕೆ - Criminal cases in Hassan

ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ಹಾಸನದ ಪೊಲೀಸ್ ಕಚೇರಿ ಸಂಕೀರ್ಣದ ಭವನದಲ್ಲಿ ನಿನ್ನೆ ಹಾಸನ ನಗರ, ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರಿಗೆ ವಿಶೇಷ ಸೂಚನೆಗಳನ್ನು ನೀಡಿದರು.

SP issued special instructions to police staff to control Criminal cases in Hassan
ಪುಂಡ ಪೋಕರಿಗಳ ಹೆಡೆಮುರಿಕಟ್ಟಲು ಸಜ್ಜಾದ ಪೊಲೀಸರು; ಹಾಸನ ಪೊಲೀಸರಿಗೆ ಎಸ್​​ಪಿ ಖಡಕ್​​ ಸೂಚನೆ
author img

By

Published : Sep 27, 2020, 7:34 AM IST

ಹಾಸನ: ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ಕೆಲವು ಮಾಹಿತಿಗಳನ್ನು ಜಿಲ್ಲೆಯ ಪೊಲೀಸರಿಗೆ ನೀಡುವ ಮೂಲಕ ಖಡಕ್ ಸೂಚನೆ ಕೊಟ್ಟರು.

ಪೊಲೀಸ್ ಕಚೇರಿ ಸಂಕೀರ್ಣ ಭವನದಲ್ಲಿ ನಿನ್ನೆ ಹಾಸನ ನಗರ, ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರಿಗೆ ವಿಶೇಷ ಸೂಚನೆಗಳನ್ನು ಎಸ್​ಪಿ ನೀಡಿದರು. ರಾತ್ರಿ ಹೊತ್ತು ಕೆಲ ಪುಂಡ ಪೋಕರಿಗಳು ಸುಖಾಸುಮ್ಮನೆ ಓಡಾಡುತ್ತಾರೆ. ಅಲ್ಲದೆ, ಮನೆಗಳ್ಳತನ, ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣಗಳಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ತಮ್ಮ-ತಮ್ಮ ಬೀಟ್ ವ್ಯಾಪ್ತಿಯಲ್ಲಿ ಸಂಚರಿಸುವ ಕೆಲವು ಅನುಮಾನಾಸ್ಪದ ವಾಹನಗಳನ್ನು ಮತ್ತು ವ್ಯಕ್ತಿಗಳನ್ನು ತಪಾಸಣೆ ಮಾಡಿ. ಇದರಿಂದ ಜಿಲ್ಲೆಯಲ್ಲಿ ನಡೆಯುವಂತಹ ಕೃತ್ಯಗಳ ಬಗ್ಗೆ ನಿಮಗೆ ಕೆಲವು ಮಾಹಿತಿಗಳು ಸಿಗಬಹುದು. ಕೆಲವೊಮ್ಮೆ ಮೊಬೈಲ್ ನೆಟ್ವರ್ಕ್ ಸಿಗದೆ ಇರಬಹುದು. ಆದರೆ ನಿಮಗೆ ನಮ್ಮ ಇಲಾಖೆಯಿಂದ ವಾಕಿ-ಟಾಕಿ ನೀಡಲಾಗಿದೆ. ಅದನ್ನು ಪ್ರತಿಯೊಬ್ಬರು ಕೂಡ ತಮ್ಮ ಕರ್ತವ್ಯದ ವೇಳೆ ಕಡ್ಡಾಯವಾಗಿ ತೆಗೆದುಕೊಂಡು ಹೋಗಲೇಬೇಕು. ಇದರಿಂದ ಸ್ಥಳದಲ್ಲಿ ನಡೆದ ಕೃತ್ಯ ಅಥವಾ ಇತರೆ ಪ್ರಕರಣಗಳ ಬಗ್ಗೆ ತಕ್ಷಣ ಮಾಹಿತಿ ನೀಡಲು ಸಹಕಾರಿಯಾಗುತ್ತದೆ ಮತ್ತು ನಿಮ್ಮ ಭದ್ರತೆ ದೃಷ್ಟಿಯಿಂದಲೂ ಇದು ಉತ್ತಮ ಎಂದು ಸಲಹೆ ನೀಡಿದರು.

ಹಾಸನ ಪೊಲೀಸರಿಗೆ ಎಸ್​​ಪಿ ಖಡಕ್​​ ಸೂಚನೆ

ಇನ್ನು ಪ್ರತಿನಿತ್ಯ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಕೃತ್ಯಗಳು ನಡೆಯಬಹುದಾದ ಸ್ಥಳಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ನಾಲ್ಕಕ್ಕಿಂತ ಅಧಿಕ ವ್ಯಕ್ತಿಗಳು ಒಂದೇ ಕಡೆ ಕೂತು ಹರಟೆ ಹೊಡೆಯುವುದು, ಯಾವುದಾದರೂ ಕೃತ್ಯಕ್ಕೆ ಸಂಚು ರೂಪಿಸುತ್ತಿರುವುದು ಕಂಡುಬಂದರೆ ತಕ್ಷಣ ಅಂಥವರನ್ನು ತಮ್ಮ ತಂಡದೊಂದಿಗೆ ತೆರಳಿ ವಿಚಾರಣೆಗೊಳಪಡಿಸಿ. ರಾತ್ರಿ ಹತ್ತು ಗಂಟೆಯ ವೇಳೆ, ಹತ್ತು ಗಂಟೆಯ ನಂತರ ಮಹಿಳೆಯರು ಒಂಟಿಯಾಗಿ ಹೋಗುವ ಸಂದರ್ಭದಲ್ಲಿ ಅವರನ್ನು ವಿಚಾರಿಸಿ ಮತ್ತು ಏನಾದರೂ ಸಹಾಯ ಬೇಕಾದಲ್ಲಿ ಅವರಿಗೆ ಸಹಕರಿಸಿ ಎಂದು ಸೂಚಿಸಿದರು.

ಪೊಲೀಸರಿಗೆ ನೀಡಿದ ಇತರೆ ಸೂಚನೆಗಳು:

*ರಾತ್ರಿ 10:30ರ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ತಿಳಿಸಬೇಕು.

*ರಾತ್ರಿ ಪಾಳೆಯದ ಪೊಲೀಸರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದೀರಾ, ಹೀಗಾಗಿ ಭದ್ರತೆಯ ದೃಷ್ಟಿಯಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ವಾಕಿ-ಟಾಕಿಯನ್ನು ತೆಗೆದುಕೊಂಡು ಹೋಗಲೇಬೇಕು.

* ಮದ್ಯದಂಗಡಿಗಳನ್ನು ಕಡ್ಡಾಯವಾಗಿ 10:30ರ ಮೇಲೆ ಮುಚ್ಚಿಸಬೇಕು.

*ಮನೆಗಳ್ಳತನ ಮತ್ತು ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸದಾ ನೀವು ಸಿದ್ಧರಿರಬೇಕು.

*ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ನಿಯಂತ್ರಣಕ್ಕೆ ತರಲು ಇಂದಿನಿಂದ ನಾನು ಸೇರಿದಂತೆ ನೀವೆಲ್ಲರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು.

*ಪ್ರತಿನಿತ್ಯ ತಾವು ತಪಾಸಣೆಗೊಳಪಡಿಸಿದಾಗ ವಾಹನಗಳ ಸಂಖ್ಯೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ದಾಖಲಾತಿಗಳನ್ನು ಇಂದಿನಿಂದಲೇ ಪಡೆಯುವ ಮೂಲಕ ತಮ್ಮ ಬೀಟ್ ಪುಸ್ತಕದಲ್ಲಿ ದಾಖಲು ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

ಹಾಸನಕ್ಕೆ ಬಂದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರತಿ ಹೆಜ್ಜೆ-ಹೆಜ್ಜೆಗೂ ಸವಾಲುಗಳು ಎದುರಾಗುತ್ತವೆ. ಕಳೆದ ಆರು ತಿಂಗಳಿನಿಂದ ಕೋವಿಡ್-19 ತಡೆಗಟ್ಟಲು ತಮ್ಮ ಸಿಬ್ಬಂದಿಯ ಸಹಕಾರದಿಂದ ಹಗಲಿರುಳೆನ್ನದೆ ಶ್ರಮವಹಿಸಿ 45 ದಿನಗಳ ಕಾಲ ಹಸಿರು ವಲಯವನ್ನಾಗಿ ಮಾಡಿದ ಹೆಮ್ಮೆ ಶ್ರೀನಿವಾಸಗೌಡರಿಗೆ ಸಲ್ಲುತ್ತದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಭೇದಿಸುವ ಕೆಲಸ ಇವರಿಗೆ ಸವಾಲಾಗಿತ್ತು. ಆದರೂ ಛಲ ಬಿಡದೆ ಇವರು ಕೊನೆಗೂ ಆರೋಪಿಗಳನ್ನು ಹೆಡೆಮುರಿಕಟ್ಟಿ ಜನರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ತಗ್ಗಿಸಲು ಪೊಲೀಸರು ಸಜ್ಜಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.