ETV Bharat / state

ಅರಸೀಕೆರೆಯಲ್ಲಿ 100 ದಾಟಿದ ನಾಲ್ವರಿಂದ ಮತದಾನ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಶೇ.70.51, ಬೇಲೂರು ತಾಲೂಕಿನಲ್ಲಿ ಶೇ 64.22, ಆಲೂರು ತಾಲೂಕಿನಲ್ಲಿ ಶೇ 71.19, ಹೊಳೆನರಸೀಪುರದಲ್ಲಿ ಶೇ. 70.50 ರಷ್ಟು ಮತದಾನವಾಗಿದೆ. ಅರಸೀಕೆರೆ ತಾಲೂಕಿನಲ್ಲಿ ನೂರು ವರ್ಷ ದಾಟಿದ 4 ಮಂದಿ ಮತದಾನ ಮಾಡಿ ಗಮನ ಸೆಳೆದರು.

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ
ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ
author img

By

Published : Dec 27, 2020, 6:27 PM IST

Updated : Dec 27, 2020, 7:05 PM IST

ಹಾಸನ: ಜಿಲ್ಲೆಯಲ್ಲಿ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ತನಕ ಶೇ.69ರಷ್ಟು ಮತದಾನವಾಗಿದೆ.

ಹಾಸನದಲ್ಲಿ ಶೇ.69ರಷ್ಟು ಮತದಾನ

ಬೆಳಗ್ಗೆಯಿಂದಲೇ ಮಂದಗತಿಯಲ್ಲಿ ಮತದಾನ ನಡೆಯುತ್ತಿತ್ತು. ಮಧ್ಯಾಹ್ನದ ನಂತರ ಮತಗಟ್ಟೆಗಳತ್ತ ಹೆಚ್ಚು ಮತದಾರರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, 3:00 ಗಂಟೆಗೆ ಜಿಲ್ಲೆಯಲ್ಲಿ ಶೇ.68.94ರಷ್ಟು ವೋಟಿಂಗ್ ಆಗಿದೆ.

ಮತದಾರರ ಅಂಕಿಅಂಶಗಳ ವಿವರ
ಮತದಾನದ ಅಂಕಿಅಂಶಗಳ ವಿವರ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಶೇ.70.51, ಬೇಲೂರು ತಾಲೂಕಿನಲ್ಲಿ ಶೇ 64.22, ಆಲೂರು ತಾಲೂಕಿನಲ್ಲಿ ಶೇ 71.19, ಹೊಳೆನರಸೀಪುರದಲ್ಲಿ ಶೇ. 70.50 ರಷ್ಟು ಮತದಾನವಾಗಿದೆ.

ಅರಸೀಕೆರೆ ತಾಲೂಕಿನಲ್ಲಿ ನೂರು ವರ್ಷ ದಾಟಿದ 4 ಮಂದಿ ಮತದಾನ ಮಾಡಿ ಗಮನ ಸೆಳೆದರು.

ಅರಸೀಕೆರೆಯಲ್ಲಿ 1,92,684 ಮತದಾರರ ಪೈಕಿ 1,35,852 ಮತದಾರರು ಹಕ್ಕು ಚಲಾಯಿಸಿದ್ದು, ಬೇಲೂರು ತಾಲೂಕಿನಲ್ಲಿ 1,28,842 ಮತದಾರರ ಪೈಕಿ 82,743 ಮಂದಿ ಮತ ಚಲಾವಣೆ ಮಾಡಿದ್ದಾರೆ. 5,40,554 ಮತದಾರರು ಆಲೂರಿನಲ್ಲಿದ್ದು, ಇದರಲ್ಲಿ 38,483 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹೊಳೆನರಸೀಪುರದಲ್ಲಿ 57,056 ಮತದಾರರ ಪೈಕಿ, 82,661 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮತದಾನದ ಅಂಕಿಅಂಶಗಳ ವಿವರ
ಮತದಾನದ ಅಂಕಿಅಂಶಗಳ ವಿವರ

ಓದಿ: ಆಲೂರಿನ ಹುಣಸವಳ್ಳಿ ಗ್ರಾ.ಪಂಚಾಯಿತಿ: ಒಂದೇ ಸ್ಥಾನಕ್ಕೆ ಸಹೋದರರ ಸವಾಲ್‌

ಅರಸೀಕೆರೆ ತಾಲೂಕಿನಲ್ಲಿ ನೂರು ವರ್ಷ ದಾಟಿದ 4 ಮಂದಿ ಮತದಾನ ಮಾಡಿದ್ದು, ಮೊದಲ ಬಾರಿಗೆ ಮತದಾನ ಮಾಡುವವರು ಗೊಂದಲಕ್ಕೀಡಾಗಿ ನಂತರ ಮತಗಟ್ಟೆಯ ಸಿಬ್ಬಂದಿಗಳ ನೆರವಿನ ಮೂಲಕ ಮತದಾನ ಮಾಡಿದ ಪ್ರಕರಣ ಕೂಡ ಜರುಗಿತು.

ಅರಸೀಕೆರೆಯ ಗಿಜಿಹಳ್ಳಿಯಲ್ಲಿ ಮತದಾನ ಮಾಡುವ ಸಂದರ್ಭದಲ್ಲಿ 2 ಪಕ್ಷದ ಬೆಂಬಲಿತರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರಕರಣದ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Last Updated : Dec 27, 2020, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.