ಹಾಸನ: ಯಂತ್ರದ ಬಟನ್ ಕಾರ್ಯನಿರ್ವಹಿಸದ ಹಿನ್ನೆಲೆ ಆಕ್ರೋಶಗೊಂಡ ಮಾಜಿ ಸಚಿವ ಹೆಚ್. ಡಿ. ರೇವಣ್ಣ, ಯಾವನೋ ಅವನು, ಕಂಟ್ರಾಕ್ಟರ್, ಇವರನ್ನೆಲ್ಲ ಬಲಿ ಹಾಕ್ತೀನಿ ಎಂದು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಲಗೊಂದನಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮೂರು ಬಾರಿ ಯಂತ್ರದ ಬಟನ್ ಒತ್ತಿದರೂ, ಯಂತ್ರ ಆನ್ ಆಗದ ಹಿನ್ನೆಲೆ ಕೋಪಗೊಂಡ ರೇವಣ್ಣ ಅಧಿಕಾರಿಗಳ ಎದುರಿನಲ್ಲಿಯೇ ಯಾವನೋ ಅವನು ಗುತ್ತಿಗೆದಾರ, ಇಂತಹ ಕಾಮಗಾರಿಗಳನ್ನು ಕಂಪನಿಗೆ ಕೊಡಿ ಯಾಕೆ ಇಂತಹವರಿಗೆಲ್ಲ ಕೊಡ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಕಾರ್ಯಪ್ರವೃತ್ತರಾದ ಸಂಬಂಧ ಪಟ್ಟ ಅಧಿಕಾರಿಗಳು ಯಂತ್ರ ಸರಿಪಡಿಸಿದರು.
26 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾಲನೆ
ಆಲಗೊಂದನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ 26 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಇಂದು ಚಾಲನೆ ನೀಡಲಾಯಿತು.