ಅರಕಲಗೂಡು: ಗ್ರಾಮ ಪಂಚಾಯತಿ ಸಿಬ್ಬಂದಿಗೆ ವೇತನ ಕೊರತೆಯಾಗದಂತೆ ಪ್ರತ್ಯೇಕ ಅನುದಾನದಲ್ಲಿ ಇ - ಎಫ್ ಎಂಎಸ್ ಮೂಲಕ ಪ್ರತಿ ತಿಂಗಳು ಪಾವತಿ ಮಾಡಬೇಕೆಂದು ತಾಲೂಕು ಪಂಚಾಯತ್ ಸಿಓಗೆ ಮನವಿ ಸಲ್ಲಿಸಲಾಯಿತು.
23-07-2019ರ ಆದೇಶದಂತೆ ಅನುಮೋದನೆ ನೀಡಲು ಒತ್ತಾಯಿಸಿ, ಬೇಡಿಕೆಗಳನ್ನು ಈಡೇರಿಸುವಂತೆ CITU ಜಿಲ್ಲಾದ್ಯಕ್ಷರಾದ ಧರ್ಮೇಶ್ ರವರು ತಾಲ್ಲೂಕು ಪಂಚಾಯತಿಸಿ.ಓ.ರವಿಕುಮಾರ್ ರವರಿಗೆ ಮನವಿ ಸಲ್ಲಿಸಿದರು.
ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು. ಗ್ರಾಮ ಪಂಚಾಯತಿ ಸಿಬ್ಬಂದಿ ಮೇಲೆ ದೌರ್ಜನ್ಯ ಹಲ್ಲೆ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಸಿ.ಓ.ರವಿಕುಮಾರ್ ಮಾತನಾಡಿ ಸರ್ಕಾರದ 14 ನೇ ಹಣಕಾಸು ಆಯೋಗದಲ್ಲಿ ಅನುಮೋದನೆ ಅದಂತೆ ಸರ್ಕಾರದಿಂದ ಬಿಡುಗಡೆ ಆದ ಹಣವನ್ನು ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಸಂಬಳ ಹಾಕಿದ್ದೇವೆ. ಕೆಲವು ಗ್ರಾಮ ಪಂಚಾಯತಿ ಗಳಿಗೆ ಹಣ ಬಂದಿಲ್ಲ ಬಂದ ತಕ್ಷಣ ಹಾಕಲಾಗುವುದು ಅವರ ಹಿತ ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.