ETV Bharat / state

'ಭಾರತ ಉಳಿಸಿ' ಆಂದೋಲನದ ಅಂಗವಾಗಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ - Protest From Various Organisations

'ಭಾರತ ಉಳಿಸಿ' ಆಂದೋಲನವು ನಿರಂತರ ಪ್ರತಿರೋಧ ಕಾರ್ಯಕ್ರಮವಾಗಿದ್ದು, ಈ ಹೋರಾಟಕ್ಕೆ ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು ಹಾಗು ಮಹಿಳೆಯರು ಮೊದಲಾದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಸಂಘಟನೆಗಳ ಸಕ್ರಿಯ ಬೆಂಬಲದೊಂದಿಗೆ ಮುಂದುವರಿಯಲಿದೆ.

protest from various organisations
ವಿವಿಧ ಸಂಘಟನೆಗಳಿಂದ ಪ್ರತಿಭಟನೆ
author img

By

Published : Aug 11, 2020, 6:54 PM IST

ಹಾಸನ: ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳು 'ಭಾರತ ಉಳಿಸಿ' ಆಂದೋಲನದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಸರ್ಕಾರದ ವಿರುದ್ಧ ಪ್ರತಿಭಟನಾ ಧರಣಿ ನಡೆಸಿದವು.

ನಗರದ ಹೇಮಾವತಿ ಪ್ರತಿಮೆಯಿಂದ ಘೋಷಣೆಗಳು ಹಾಗೂ ಭಿತ್ತಿ ಪತ್ರಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು, ಬಳಿಕ ಅಂಬೇಡ್ಕರ್ ಪ್ರತಿಮೆಯ ವೃತ್ತದಲ್ಲಿ ಪ್ರತಿಮೆಯ ಕೆಳಗೆ ಹಾಗೂ ಮುಂದಿನ ರಸ್ತೆ ಬದಿ ಧರಣಿ ಕುಳಿತರು.

ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿಯಾಗಿ ಶಾಸನ ಸಭೆಗಳನ್ನು ಉಪೇಕ್ಷಿಸಿ, ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಕಾನೂನುಗಳ ಬದಲಾವಣೆ, ಭೂ ಸಂಬಂಧಿತ ಕಾನೂನುಗಳ ಬದಲಾವಣೆ ತರಲು ಪಟತೊಟ್ಟಿದೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಶೇ. 80ಕ್ಕೂ ಅಧಿಕ ಉದ್ದಿಮೆಗಳ ಮಾಲೀಕರ ಪರವಾದ ಕೈಗಾರಿಕಾ ತಿದ್ದುಪಡಿ ಕಾಯ್ದೆ ತಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರೀಯ ಆಂದೋಲನವನ್ನು 'ಅಖಿಲ ಭಾರತ ಸತ್ಯಾಗ್ರಹ' ನಡೆಸುವ ಮುಖಾಂತರ ಚಾಲನೆ ನೀಡಲಾಗುತ್ತಿದೆ. 'ಭಾರತ ಉಳಿಸಿ' ಆಂದೋಲನವು ನಿರಂತರ ಪ್ರತಿರೋಧ ಕಾರ್ಯಕ್ರಮವಾಗಿದ್ದು, ಈ ಹೋರಾಟಕ್ಕೆ ರೈತರ, ಕೃಷಿ ಕಾರ್ಮಿಕರ, ವಿದ್ಯಾರ್ಥಿ, ಯುವಜನರು, ಮಹಿಳೆಯರು ಮೊದಲಾದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಸಂಘಟನೆಗಳ ಸಕ್ರಿಯ ಬೆಂಬಲದೊಂದಿಗೆ ಮುಂದುವರಿಯಲಿದೆ ಎಂದರು.

ಭೂ ಸಂಬಂಧಿ ಕಾನೂನುಗಳು, ಎ.ಪಿ.ಎಂ.ಸಿ. ಕಾಯ್ದೆ ಮತ್ತು ಅಗತ್ಯ ಸಾಮಗ್ರಿ ಕಾಯಿದೆಗಳಿಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು; ಮುಂದಿನ ಆರು ತಿಂಗಳ ಅವಧಿಗೆ ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಪ್ರತಿ ತಿಂಗಳು ರೂ. 7500 ನೇರ ನಗದು ಪಾವತಿಸುವ ಮೂಲಕ ಸಾರ್ವತ್ರಿಕ ಅಗತ್ಯ ಮೂಲ ಆದಾಯ (ಯೂನಿವರ್ಸಲ್ ಬೇಸಿಕ್ ಇನ್‌ಕಂ) ಯೋಜನೆ ಜಾರಿಗೊಳಿಸಬೇಕು.

ಬಂದರು, ವಿಮಾನ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಯತ್ನವನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸಿ ವಿಸ್ತರಿಸಬೇಕು. ಆನ್​ಲೈನ್ ಶಿಕ್ಷಣ ಮತ್ತು ಲಾಕ್​ಡೌನ್ ಅವಧಿಯಲ್ಲಿ ಪರೀಕ್ಷೆಗಳನ್ನು ನಿಷೇಧಿಸಬೇಕು. ಅಗತ್ಯ ಸಾಮಗ್ರಿ ಕಾಯ್ದೆಯ ತಿದ್ದುಪಡಿ ಸೇರಿದಂತೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮೂರು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.