ETV Bharat / state

ದಲ್ಲಾಳಿಗಳಿಂದ ರೈತರಿಗೆ ಮೋಸ ಆರೋಪ: ಬೇಲೂರಲ್ಲಿ ಹಸಿರು ಸೇನೆಯಿಂದ ಪ್ರತಿಭಟನೆ - ಬೇಲೂರು ತಾಲೂಕು ಎಪಿಎಂಸಿ ಕಚೇರಿಗೆ ಮುತ್ತಿಗೆ ನ್ಯೂಸ್​

ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವುದನ್ನು ಖಂಡಿಸಿ ಬೇಲೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ಪ್ರತಿಭಟನೆ ನಡೆಸಿತು.

ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ
author img

By

Published : Nov 5, 2019, 1:25 PM IST

ಹಾಸನ: ವರ್ತಕರು ಮತ್ತು ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವುದನ್ನು ಖಂಡಿಸಿ ಬೇಲೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.

ರೈತರಿಗೆ ಮೋಸವಾಗುತ್ತಿರುವ ಬಗ್ಗೆ ಕಳೆದ 11 ವರ್ಷಗಳಿಂದ ಎಷ್ಟು ಬಾರಿ ಮನವಿ ಮಾಡಿದರೂ ಮಾತು ಕೇಳದ ಆಡಳಿತ ಮಂಡಳಿಯವರು ರೈತರ ಬಗ್ಗೆ ಕಳಜಿ ತೋರುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೇಲೂರು ತಾಲೂಕು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ವರ್ತಕರು ಮತ್ತು ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವ ಬಗ್ಗೆ ಇಲ್ಲಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಕಾಳಜಿ ಇಲ್ಲ. ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ, ಇಲ್ಲಿ ಸುಮಾರು 50 ಕ್ಕೂ ಹೆಚ್ಚು ಮಳಿಗೆಗಳಿದ್ದರೂ ವರ್ತಕರು ಅಲ್ಲಿ ವ್ಯಾಪಾರ ಮಾಡದೇ ರಸ್ತೆ ಬದಿ ಮತ್ತು ಕೆಲವೆಡೆ ದಲ್ಲಾಳಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Intro:ಹಾಸನ; ಹಾಲು ಉತ್ಪಾದಕರ ಮತ್ತು ತೋಟದ ಬೆಳೆಗಾರರ ಉತ್ಪನ್ನಗಳಿಗೆ ಮಾರಕವಾದ ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಅಸಿಯಾನ್ ದೇಶಗಳು ಸೇರಿದಂತೆ ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ, ಜಪಾನ್, ದಕ್ಷಿಣ ಕೋರಿಯಾ, ಆಸ್ಟ್ರೇಲಿಯಾ ಮತ್ತು ನ್ಯಜಿಲೆಂಡ್ ನಂತಹ ಇತರೆ ೧೫ ದೇಶಗಳೊಂದಿಗೆ ಭಾರತದ ಸರಕಾರದ ಆರ್.ಸಿ.ಇ.ಪಿ. ಮಾತುಕತೆ ನಡೆಸಲಾಗುತ್ತದೆ. ನಮ್ಮ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಬೆದರಿಕೆಯಿದಾಗಿದ್ದು, ೨೦೧೯ರ ನವೆಂಬರ್ ರಂದು ಆರಂಭವಾದ ವೇಳೆ ಮಾತುಕತೆಗಳು ಮುಕ್ತಾಯವಾಗಲಿದೆ ಎಂಬ ವರದಿಯಾಗಿದೆ ಎಂದರು.
ಆರ್.ಸಿ.ಇ.ಪಿ. ಮುಕ್ತ ವ್ಯಾಪಾರ ಒಬ್ಬಂದವು ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಲು ನೋಡುತ್ತಿದ್ದುಮ ಇದರಿಂದ ನಮ್ ಲಕ್ಷಾಂತರ ಸಣ್ಣ ರೈತರ, ವಿಶೇಷವಾಗಿ ಮಹಿಳೆಯರ ಜೀವನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರ ತೀವ್ರ ಅಪಾಯದಲ್ಲಿದೆ ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರಗಳನ್ನು ಪಡೆಯುತ್ತದೆ ಮತ್ತು ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳುವಾಗ ರೈತರು ಅಪರಾಧಿಗಳಾಗುತ್ತಾರೆ ಎಂದರು. ವಿದೇಶಿ ನಿಗಮಗಳು ರಾಷ್ಟ್ರೀಯ ನ್ಯಾಯಾಲಯಗಳನ್ನು ಬೈಪಾಸ್ ಮಾಡಬಹುದು. ಮತ್ತು ನಮ್ಮ ಸ್ವಂತ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯ ಮಾಡಿದ್ದಲ್ಲಿ ಸರಕಾರದ ವಿರುದ್ಧ ಮೊಕದ್ದಮೆ ಹೂಡಬಹುದಾಗಿದೆ. ಖಾಸಿ ಮಧ್ಯಸ್ಥಿಕೆ ನ್ಯಾಯಾಮಂಡಳಿಗಳಲ್ಲಿ ಹೂಡಿದಾರ-ರಾಜ್ಯ ವಿವಾದ ಇತ್ಯಾರ್ಥ ಕಾರ್ಯವಿಧಾನಗಳ ಕುರಿತು ಚರ್ಚಿಸಲಾಗುತ್ತದೆ. ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳ ನೇರ ಚಿಲ್ಲರೆ ವ್ಯಾಪಾರವು ಸ್ಥಳೀಯ ಮಾರುಕಟ್ಟೆಗಳನ್ನು ಅಳಿಸಿ ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ. ಒಪ್ಪಂದಕ್ಕೆ ಸಹಿಯನ್ನು ಹಾಕದೇ ಮತ್ತು ಕೃಷಿಯನ್ನು ಈ ಒಪ್ಪಂದದಿಂದ ಹೊರಗಿಡಬೇಕೆಂದು ಒತ್ತಾಯಿಸಿದರು.
ಕಳೆದ ಎರಡು ವರ್ಷದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಎಲ್ಲಾ ಬೆಳೆಗಳು ನಾಶವಾಗಿದೆ. ಕಾಫಿಗೆ ಕಳೆ ರೋಗ, ಕಾಳು, ಮೆಣಸುಗಳಿಗೆ ಸೊರಗು ರೋಗ, ಮೆಕ್ಕಿಜೊಳಕ್ಕೆ ಸೈನಿಕ ಹುಳು ಬಾಧೆಯಿಂದ ಬೆಳೆ ಕೈಗೆ ಸಿಕ್ಕಿರುವುದಿಲ್ಲ. ಆಲೂಗೆಡ್ಡೆ ಮತ್ತು ಮೆಕ್ಕಿಜೊಳ ಎರೆಡೆರಡು ಬಾರಿ ಬಿತ್ತನೆಯಾಗಿದ್ದರೂ ರೈತರಿಗೆ ಫಸಲು ಇಲ್ಲ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಸಂಪುರ್ಣವಾಗಿ ನಿರ್ಲಕ್ಷ ಮಾಡಿದೆ. ಇದುವರೆಗೂ ಯಾವ ಪರಿಹಾರ ಕೊಟ್ಟಿರುವುದಿಲ್ಲ. ಹಾಗೂ ಬೆಳೆಗೆ ಮಾಡಿಸಿರುವ ವಿಮಾ ಹಣ ಕಂತುಗಳನ್ನು ಕೂಡ ಕೊಡಿಸಲು ವಿಫಲವಾಗಿದೆ ಎಂದು ದೂರಿದರು. ಇಂದು ಹಾಸನ ಜಿಲ್ಲೆಯ ರೈತರು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾನೆ. ರಾಜ್ಯ ಸರಕಾರಗಳು ಸಾಲಮನ್ನಾ ಘೋಷಣೆ ಮಾಡಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿ ಬೆದರಿಕೆ ಮಾಡುತ್ತಿದೆ. ಇದರಿಂದ ನೊಂಡ ರೈತನು ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾನೆ. ಕೂಡಲೇ ಜಿಲ್ಲಾಡಳಿತವು ಬ್ಯಾಂಕುಗಳ ಮತ್ತು ಸರಕಾರದ ಮಧ್ಯೆ ಮಾತುಕತೆ ನಡೆಸಿ ರೈತನಿಗುಂಟಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಯಾಗಿರುವುದಿಲ್ಲ. ಗ್ರಾಮದ ೫ ಇಲ್ಲವೇ ೧೦ ಜನರಿಗೆ ಮಾತ್ರ ಯೋಜನೆ ತಲುಪುತ್ತಿದ್ದು, ಉಳಿದವರಿಗೆ ತಲುಪುತ್ತಿಲ್ಲ. ಕೂಡಲೇ ಸರಿಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಹಿರಿಯರು ಮಂಜುನಾಥ್ ದತ್ತ, ತೋಚ. ಅನಂತಸುಬ್ಬರಾಯ್, ರೈತ ಸಂಘ ಹಾಗೂ ಹಸಿರು ಸೇನೆಯ ಏಷ್ಯಾ ಸಂಚಾಲಕ ಕೆ.ಎಂ. ರಾಜೇಗೌಡ, ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ಮುಖಂಡರಾದ ಸುರೇಶ್ ಬಾಬು, ಶ್ರೀಕಂಠದೊಡ್ಡೇರಿ, ಹರೀಶ್, ಉಮೇಶ್,, ಗಣೇಶ್ಮ ಪದ್ಮಪ್ರಭು, ಬಾಲಣ್ಣ, ಯೋಗೀಶ್,, ರವಿ, ಜಗದೀಶ್ ಇತರರು ಪಾಲ್ಗೊಂಡಿದ್ದರು.
Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.