ETV Bharat / state

ವಾಹನದ ಚಕ್ರದಲ್ಲಿನ ಗಾಳಿ ಬಿಟ್ಟ ತಹಶೀಲ್ದಾರ್, ಗಾಂಧಿ ಫೋಟೋ ಹಿಡಿದು ಕುಳಿತ ಪೊಲೀಸ್! - Police Constable protest in Sakaleshpura

ನೋ ಪಾರ್ಕಿಂಗ್​ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದನ್ನು ಕಂಡ ತಹಶೀಲ್ದಾರ್,​ ಕಾರಿನ ಚಕ್ರದ ಗಾಳಿ ಬಿಟ್ಟಿದ್ದಾರೆ. ಇದನ್ನು ನೋಡಿದ ಕಾರ್​ ಮಾಲೀಕರಾದ ಕಾನ್​ಸ್ಟೇಬಲ್​ ಈ ಕ್ರಮವನ್ನು ಖಂಡಿಸಿ, ಕಾರಿನ ಬಳಿಯೇ ಕೂತು ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಕಾರು ನಿಲುಗಡೆ

author img

By

Published : Aug 18, 2020, 11:36 PM IST

Updated : Aug 19, 2020, 7:53 AM IST

ಸಕಲೇಶಪುರ: ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಕಾರು ನಿಲ್ಲಿಸಿದ ಹಿನ್ನೆಲೆ ತಹಶೀಲ್ದಾರ್ ಅವರು ಕಾರಿನ ಚಕ್ರಗಳ ಗಾಳಿ ತೆಗೆದರು. ಆದ್ರೆ ತಹಶೀಲ್ದಾರ್ ಕ್ರಮವನ್ನು ಪೇದೆ ಖಂಡಿಸಿ, ಪ್ರತಿಭಟಿಸಿದ ಘಟನೆ ನಗರದಲ್ಲಿ ನಡೆದಿದೆ.

ಪೊಲೀಸ್ ಕಾನ್​ಸ್ಟೇಬಲ್ ಪ್ರತಿಭಟನೆ

ಗ್ರಾಮಾಂತರ ಠಾಣೆಯ ದಯಾನಂದ್ ಪ್ರತಿಭಟಿಸಿದ ಕಾನ್​ಸ್ಟೇಬಲ್​. ಜನನಿಬಿಡ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮೆಡಿಕಲ್‌ ಶಾಪ್​ವೊಂದರ ಮುಂದೆ ಪೇದೆ ದಯಾನಂದ್ ತಮ್ಮ ಕಾರು ನಿಲ್ಲಿಸಿ ಔಷಧಿ ತರಲು ಮೆಡಿಕಲ್ ಶಾಪ್​ ಒಳಗೆ ಹೋಗಿದ್ದರು. ಈ ವೇಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಕಂಡ ತಹಶೀಲ್ದಾರ್ ಮಂಜುನಾಥ್, ತಮ್ಮ ಕಾರು ಚಾಲಕನಿಗೆ ಕಾನ್​ಸ್ಟೇಬಲ್​ ಕಾರಿನ ಚಕ್ರದ ಗಾಳಿ ಬಿಡಲು ಸೂಚಿಸಿದ್ದಾರೆ.

ಕಾರಿನ ಚಕ್ರದ ಗಾಳಿ ಬಿಡುವಾಗ ಪೇದೆ ಹೊರ ಬಂದು, ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ. ಆದ್ರೆ ಪೇದೆ ದಯಾನಂದ್ ಅವರು ಮಹಾತ್ಮ ಗಾಂಧಿ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.

ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಕಾರು ನಿಲುಗಡೆ
ನೋ ಪಾರ್ಕಿಂಗ್ ಸ್ಥಳದಲ್ಲಿ ಕಾನ್​ಸ್ಟೇಬಲ್​ ಕಾರು ನಿಲುಗಡೆ

ಬಳಿಕ ನಗರ ಠಾಣೆ ಪಿಎಸ್‌ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಬಂದು ಇತರ ಪೋಲಿಸರ ಸಹಾಯದಿಂದ ಕಾನ್​ಸ್ಟೇಬಲ್​ರನ್ನು​ ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕ್‌ಅಪ್ ವಾಹನದ ಮೂಲಕ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಸಮಾಜ ಸೇವಕ ಅಭಿಷೇಕ್ ಮಾತನಾಡಿ, ಕಾನೂನು ಕಾಪಾಡಬೇಕಾದ ಪೊಲೀಸ್ ಕಾನ್​ಸ್ಟೇಬಲ್​ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಇವರು ಈ ರೀತಿ ಪ್ರತಿಭಟನೆ ಕುಳಿತಿರುವುದರಿಂದ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗಿದೆ. ಇವರು ಬೇಕಿದ್ದಲ್ಲಿ ಪುರಸಭೆ ಮುಂಭಾಗ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಿ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

Last Updated : Aug 19, 2020, 7:53 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.