ETV Bharat / state

ಸಾಮಾಜಿಕ ಅಂತರ ಕಾಯ್ದು ಕೊಳ್ಳದ ಜನ... ಗದರಿಸಿದ ಪೊಲೀಸ್​ ವರಿಷ್ಠಾಧಿಕಾರಿ... - ಜನಜಂಗುಳಿ ನಿಯಂತ್ರಿಸಲು ಹಾಸನ ನಗರದಲ್ಲಿ ಮೂರು ಕಡೆ ಸಂತೆ

ಜನಜಂಗುಳಿ ನಿಯಂತ್ರಿಸಲು ಹಾಸನ ನಗರದಲ್ಲಿ ಮೂರು ಕಡೆ ಸಂತೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ಎಲ್ಲಾ ಕಡೆ ತೆರಳಿ ಜನರಿಗೆ ದೂರ ದೂರ ನಿಲ್ಲಲು ಸೂಚಿಸಿದ ಪೊಲೀಸ್​ ಅಧಿಕಾರಿಗಳು ನಗರದ ಕ್ರೀಡಾಂಗಣದಲ್ಲಿ ಜನರಿಗೆ ದೂರ ನಿಂತು ಖರೀದಿಸಲು ಮನವಿ ಮಾಡಿದರು.

People who do not have maintain a social gap in Hassan
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ
author img

By

Published : Mar 31, 2020, 3:41 PM IST

ಹಾಸನ : ನಿಂತ್ಕೊಳ್ರಿ ದೂರ.. ದಿನ ಬೆಳಗ್ಗೆ ಆದ್ರೆ ಅಷ್ಟು ಅರಚಿ ಕೊಳ್ತೀವಿ.ನಿಮಗಷ್ಟು ಗೊತ್ತಾಗಲ್ವಾ? ಎಷ್ಟು ಹೇಳಿದ್ರು ಸರತಿ ಸಾಲಿನಲ್ಲಿ ಬರದ ಜನರ ವಿರುದ್ಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಈ ರೀತಿ ಆಕ್ರೋಶಗೊಂಡಿದ್ದು ಕಂಡುಬಂತು.

ಪ್ರತಿ ಮಂಗಳವಾರದಂತೆ ಇಂದು ಹಾಸನದಲ್ಲಿ ಸಂತೆ ನಡೆಯುತ್ತಿತ್ತು. ಜನಜಂಗುಳಿ ನಿಯಂತ್ರಿಸಲು ನಗರದಲ್ಲಿ ಮೂರು ಕಡೆ ಸಂತೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ಎಲ್ಲಾ ಕಡೆ ತೆರಳಿ ಜನರಿಗೆ ದೂರ ದೂರ ನಿಲ್ಲಲು ಸೂಚಿಸಿದ ಅಧಿಕಾರಿಗಳು ನಗರದ ಕ್ರೀಡಾಂಗಣದಲ್ಲಿ ಜನರಿಗೆ ದೂರ ನಿಂತು ಖರೀದಿಸಲು ಮನವಿ ಮಾಡಿದರು.

ಈ ವೇಳೆ ಮಾತು ಕೇಳದ ಜನರ ವಿರುದ್ಧ ಲಾಠಿ ಹಿಡಿದು ಆಕ್ರೋಶ ಹೊರ ಹಾಕಿದ ಅವರು, ದೂರ ನಿಂತ್ಕೊಳಿ ಎಂದು ಗದರಿ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.