ETV Bharat / state

ಆಸ್ಪತ್ರೆಯಲ್ಲಿ ರೋಗಿ ಸಾವು: ಜಿಲ್ಲಾಧಿಕಾರಿ ಕಚೇರಿ ಬಳಿ ಮೃತನ ಸಂಬಂಧಿಕರ ಆಕ್ರೋಶ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಜಿಲ್ಲಾಧಿಕಾರಿ ಕಚೇರಿಯ ಬಳಿ ಬಂದು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

premises
ಜಿಲ್ಲಾಧಿಕಾರಿ ಕಚೇರಿ ಬಳಿ ಮೃತನ ಸಂಬಂಧಿಕರ ಆಕ್ರೋಶ
author img

By

Published : Oct 3, 2020, 3:29 PM IST

Updated : Oct 3, 2020, 7:47 PM IST

ಹಾಸನ: ಆಸ್ಪತ್ರೆಯಲ್ಲಿ ರೋಗಿಯ ಸಾವು ಹಿನ್ನೆಲೆ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳೇ ಆಚೆ ಬಂದು ನಮ್ಮ ಸಮಸ್ಯೆ ಕೇಳಿ ಎಂದು ಮೃತರು ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಯ್ತು. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ಮೂಲದ ಮಹೇಶ್ ಧರ್ಮ(50) ಮೃತ ವ್ಯಕ್ತಿ. ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಸೆಪ್ಟೆಂಬರ್ 24 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನದ ನಂತರ ಆಸ್ಪತ್ರೆಯವರು ಕೋವಿಡ್ ಎಂದು ಹೇಳಿದರು. ಆದರೆ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಮಹೇಶ್ ‌ಧರ್ಮ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದರು.

ಆಸ್ಪತ್ರೆಯಲ್ಲಿ ರೋಗಿ ಸಾವು: ಜಿಲ್ಲಾಧಿಕಾರಿ ಕಚೇರಿ ಬಳಿ ಮೃತನ ಸಂಬಂಧಿಕರ ಆಕ್ರೋಶ

ಕುಟುಂಬಸ್ಥರ ಮನವಿ ಆಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾತನಾಡಿ, ಯಾವ ವೈದ್ಯರೂ ಕೂಡ ರೋಗಿ ಸಾಯಲಿ ಎಂದು ಬಯಸುವುದಿಲ್ಲ. ಇಂತಹ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡುವುದು ಸರಿಯಲ್ಲ. ಮೃತ ಮಹೇಶ್ ಅವರಿಗೆ ಏನಾಗಿತ್ತು, ಯಾವ ಚಿಕಿತ್ಸೆ ನೀಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಡಿಎಚ್ಒ ಸತೀಶ್ ಮಾತನಾಡಿ, ರೋಗಿಗೆ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ‌ ನೀಡಲು ಹೇಳಿದ್ದೇನೆ. ಪ್ರತಿಯೊಬ್ಬ ರೋಗಿಗೆ ದಿನಕ್ಕೆ ಮೂರು ಬಾರಿ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೋವಿಡ್‌ ಇರುವುದರಿಂದ ಹೆಚ್ಚು ತೊಂದರೆಯಾಗಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಆದ್ದರಿಂದ ತನಿಖೆ ಮಾಡಲು ಹೇಳಿದ್ದೇನೆ ಎಂದರು.ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಡಿಎಚ್‌ಒ ಸತೀಶ್, ಮೃತರ ಸಂಬಂಧಿಕರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು. ವೈದ್ಯರು ನಿರ್ಲಕ್ಷ್ಯ ಮಾಡಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದು ಮೃತರ ಸಂಬಂಧಿಕರಿಗೆ ತಿಳಿಸಿದರು.

Last Updated : Oct 3, 2020, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.