ETV Bharat / state

ಅರಸೀಕೆರೆ ನಗರಸಭೆಯಿಂದ ಸಾರ್ವಜನಿಕರ ಹಣ ಪೋಲು ಆರೋಪ - undefined

ರಸ್ತೆ ನಿರ್ಮಿಸುವಾಗ ಎಂಜಿನಿಯರ್ ಬೇಜವಾಬ್ದಾರಿತನ ತೋರಿದ್ದಾರೆ. ಈ ಕೆಲಸದಿಂದ ಚರಂಡಿ ನೀರು ಹರಿಯದೇ ಬ್ಲಾಕ್ ಆಗಿದೆ. ಅದನ್ನು ಸರಿಪಡಿಸಲು ರಸ್ತೆಯನ್ನು ಒಡೆದು ಅದೇ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಈ ಮೂಲಕ ನಗರಸಭೆ ಸಾರ್ವಜನಿಕರ ಹಣ ಪೋಲು ಮಾಡುತ್ತಿದೆ ಅನ್ನೋದು ಅರಸೀಕೆರೆಯ ಜನರ ಆರೋಪವಾಗಿದೆ.

ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವ ನಗರ ಸಭೆ
author img

By

Published : Jun 13, 2019, 10:47 AM IST

ಅರಸೀಕೆರೆ: ಹಾಸನ ಜಿಲ್ಲೆಯ ಅರಸೀಕೆರೆ ನಗರದ ಬಿ.ಹೆಚ್ ರಸ್ತೆಗೆ ಹೊಂದಿಕೊಂಡಂತಿರುವ ರಸ್ತೆ ಮೂಲಕ ನಿರ್ಮಾಣ ಮಾಡಲಾದ ಗರುಡನ ಗಿರಿಯ ಸಂಪರ್ಕದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ವರ್ಷ ಕಳೆದಿಲ್ಲ. ಅಷ್ಟರಲ್ಲೇ ಸಮಸ್ಯೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವ ನಗರ ಸಭೆ

ಪಿಡಬ್ಲ್ಯೂಡಿ ಇಲಾಖೆಯಿಂದ ಹೊಸ ರಸ್ತೆ ನಿರ್ಮಿಸುವಾಗ ಎಂಜಿನಿಯರ್ ಅವರ ಬೇಜವಾಬ್ದಾರಿ ಕೆಲಸದಿಂದ ಚರಂಡಿ ನೀರು ಹರಿಯದೇ ಬ್ಲಾಕ್ ಆಗಿದೆಯಂತೆ. ಈಗ ಅದನ್ನು ಸರಿಪಡಿಸಲು ಗ್ರಂಥಾಲಯದ ಮುಂಭಾಗ ರಸ್ತೆಯನ್ನು ಒಡೆದು ಆ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿರುವುದಕ್ಕೆ ಜನನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಸ್ತೆ ನಿರ್ಮಾಣದ ಸಂದರ್ಭದಲ್ಲೇ ಚರಂಡಿಯಲ್ಲಿದ್ದ ಚಪ್ಪಡಿ ಕಲ್ಲನ್ನು ತೆಗೆದು ಅಲ್ಲಿ ಸೇತುವೆ ನಿರ್ಮಾಣ ಮಾಡಿ ನಂತರ ರಸ್ತೆ ಮಾಡಬೇಕಿತ್ತು. ಆದ್ರೆ ಎಂಜಿನಿಯರ್​​ಗಳುಬೇಜವಾಬ್ದಾರಿಯಿಂದ ಕಲ್ಲನ್ನ ತೆರೆವುಗೊಳಿಸದೇ ಅದರ ಮೇಲೆಯೇ ಕಾಂಕ್ರಿಟ್ ಹಾಕಿದ್ದರು. ಇದರಿಂದ ರಸ್ತೆ ಕೆಳಭಾಗದ ಚಪ್ಪಡಿ ಕಲ್ಲು ಮುರಿದು ಚರಂಡಿ ಒಳಗೆ ಬಿದ್ದ ಕಾರಣ ನೀರು ಮುಂದಕ್ಕೆ ಹರಿಯಲು ಸಾಧ್ಯವಾಗದೇ ಅದು ರಸ್ತೆಯ ಮೇಲ್ಭಾಗ ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನು ವರ್ಷ ಕಳೆಯದ ಕಾಮಗಾರಿಯನ್ನು ಸರಿಪಡಿಸಲು ಮುಂದಾಗಿರೋ ನಗರಸಭೆ ಸಾರ್ವಜನಿಕರ ತೆರಿಗೆ ಹಣವನ್ನ ಪೊಲು ಮಾಡಲು ಹೊರಟಿದೆ. ಅದರ ಬದಲು ಕಾಮಗಾರಿಯನ್ನ ಬೇಜವಾಬ್ದಾರಿಯಿಂದ ಮಾಡಿರೋ ಇಂಜಿನಿಯರ್​ಗಳನ್ನೇ ಹೊಣೆಗಾರನನ್ನಾಗಿ ಮಾಡಿ ಅವರಿಗೆ ನೋಟೀಸ್ ನೀಡಬೇಕು. ಅವರ ತಪ್ಪಿನಿಂದ ಆದ ಅವ್ಯವಸ್ಥೆಗೆ ಈಗ ಸಾರ್ವಜನಿಕ ಹಣ ಪೋಲು ಮಾಡುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಪಿಡಬ್ಲ್ಯೂಡಿ ಇಲಾಖೆಯಿಂದಲೇ ಶೀಘ್ರವಾಗಿ ರಸ್ತೆಯ ರಿಪೇರಿ ಕಾರ್ಯವನ್ನ ನಡೆಸಬೇಕೆಂದು ಆಗ್ರಹಿಸಿದ್ದಾರೆ.

Intro:Arsikere:
ಹೊಸದಾಗಿ ನಿರ್ಮಾಣವಾದ ಅವೈಜ್ಞಾನಿಕ ರಸ್ತೆ, ಹೊಸ ರಸ್ತೆ ಅಗೆದು ಸಾರ್ವಜನಿಕರ ಹಣ ದುರುಪಯೋಗ ಮಾಡುತ್ತಿರುವ ನಗರಸಭೆ, ಪಿಡಬ್ಲ್ಯೂಡಿ ಎಂಜಿನಿಯರ್ ಬೇಜಾವಾಬ್ದಾರಿತಕ್ಕೆ ಸಾರ್ವಜನಿಕರ ಹಣ ಪೋಲು ಕೇಳೋರು ಯಾರು, ಲಕ್ಷಲಕ್ಷ ಹಣದ ನಷ್ಟ ತಂಬಿಕೊಡೋರು ಯಾರು

ಕೋಟಿ ವ್ಯಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ವರ್ಷವೂ ಕಳೆದಿಲ್ಲ. ಈಗ ಚಂರಂಡಿ ನೀರು ಸರಾಗವಾಗಿ ಹರಿತಿಲ್ಲ ಅಂತ ಕಾರಣ ಹೇಳಿ ಕೋಟಿ ರೂ.ವ್ಯಚ್ಚದ ಕಾಮಗಾರಿಯನ್ನ ಕಿತ್ತುಹಾಕಲು ಹೊರಟಿದ ಈ ನಗರಸಭೆ. ಹಾಗಿದ್ರೆ ಯಾವುದು ಆ ನಗರಸಭೆ...ರಸ್ತೆ ಕಿತ್ತಾಕುತ್ತಿರೋ ಆ ಅಧಿಕಾರಿಗಳಾದ್ರು ಯಾರು ಅಂತೀರಾ...ಈ ಸ್ಟೋರಿ ನೋಡಿ...

ಹಾಸನ ಜಿಲ್ಲೆಯ ಅರಸೀಕೆರೆ ನಗರದ ಬಿ.ಹೆಚ್ ರಸ್ತೆಗೆ ಹೊಂದಿಕೊಂಡಂತಿರುವ ರಸ್ತೆ ಮೂಲಕ ನಿರ್ಮಾಣ ಮಾಡಲಾದ ಗರುಡನ ಗಿರಿಯ ಸಂಪರ್ಕದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ಇನ್ನೂ ವರ್ಷವೂ ಕಳೆದಿಲ್ಲ, ಪಿಡಬ್ಲ್ಯೂಡಿ ಇಲಾಖೆ ಹೊಸ ರಸ್ತೆ ನಿರ್ಮಾಣ ಮಾಡುವಾಗ ಎಂಜಿನಿಯರ್ ಮಾಡಿದ ಬೇಜವಾಬ್ದಾರಿ ಕೆಲಸದಿಂದ ಚರಂಡಿ ನೀರು ಹರಿಯದೇ ಬ್ಲಾಕ್ ಆಗಿದ್ದು ಈಗ ಅದನ್ನು ಸರಿಪಡಿಸಲು ಗ್ರಂಥಾಲಯದ ಮುಂಭಾಗ ರಸ್ತೆಯನ್ನು ಒಡೆದು ಆ ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ.

ರಸ್ತೆ ನಿರ್ಮಾಣದ ಸಂದರ್ಭದಲ್ಲೇ ಚರಂಡಿಯಲ್ಲಿದ್ದ ಚಪ್ಪಡಿ ಕಲ್ಲನ್ನು ತೆಗೆದು ಅಲ್ಲಿ ಸೇತುವೆ ನಿರ್ಮಾಣ ಮಾಡಿ ನಂತರ ರಸ್ತೆ ಮಾಡಬೇಕಿತ್ತು. ಆದ್ರೆ ಎಂಜಿನಿಯರ್ಗಳ ಬೇಜವಾಬ್ದಾರಿಯಿಂದ ಕಲ್ಲನ್ನ ತೆರೆವುಗೊಳಿಸದೇ ಅದ್ರ ಮೇಲೆಯೇ ಕಾಂಕ್ರಿಟ್ ಹಾಕಿದ್ರಿಂದ ರಸ್ತೆ ಕೆಳಭಾಗದ ಚಪ್ಪಡಿ ಕಲ್ಲು ಮುರಿದು ಚಂರಡಿ ಒಳಗ್ಗೆ ಬಿದ್ದ ಕಾರಣ ನೀರು ಮುಂದಕ್ಕೆ ಹರಿಯಲು ಸಾಧ್ಯವಾಗದೇ ನೀರು ರಸ್ತೆಯ ಮೇಲ್ಭಾಗದ ಮೇಲೆ ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಇನ್ನು ವರ್ಷ ಕಳೆಯದ ಕಾಮಗಾರಿಯನ್ನ ಸರಿಪಡಿಸಲು ಮುಂದಾಗಿರೋ ನಗರಸಭೆ ಸಾರ್ವಜನಿಕರ ತೆರಿಗೆ ಹಣವನ್ನ ಪೊಲು ಮಾಡಲು ಹೊರಟಿದ್ದು, ಅದ್ರ ಬದಲು ಕಾಮಗಾರಿಯನ್ನ ಬೇಜವಾಬ್ದಾರಿಯಿಂದ ಮಾಡಿರೋ ಇಂಜಿನಿಯರ್ ಗಳನ್ನ ಹೊಣೆಗಾರನನ್ನಾಗಿ ಮಾಡಿ ಅವರಿಗೆ ನೋಟೀಸ್ ನೀಡಬೇಕು, ಅವರ ತಪ್ಪಿನಿಂದ ಆದ ಅವ್ಯವಸ್ಥೆಗೆ ಈಗ ಸಾರ್ವಜನಿಕ ಹಣ ಪೋಲು ಮಾಡುವುದು ಎಷ್ಟು ಸರಿ ಪಿಡಬ್ಲ್ಯೂಡಿ ಇಲಾಖೆಯಿಂದಲೇ ಶೀಘ್ರವಾಗಿ ರಸ್ತೆಯ ರಿಪೇರಿ ಕಾರ್ಯವನ್ನ ಸರಿಪಡಿಸಬೇಕಿದೆ ಎಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೈಟ್: ಮಂಜುನಾಥ, ಸ್ಥಳೀಯರು, ಅರಸೀಕೆರೆ.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.