ETV Bharat / state

ಹೆತ್ತವರೇ ಕಳ್ಳರಾದರೇ, ಯಾರನ್ನು ನಂಬುವುದು!?

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ರೇಖಾಳ ತಂದೆ-ತಾಯಿಯ ವಿಚಾರಣೆ ನಡೆಸಿದಾಗ ಪೋಷಕರು ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ..

author img

By

Published : Aug 13, 2021, 10:00 PM IST

ಮಗಳ ಒಡವೆ, ಹಣ ಕದ್ದ ಪೋಷಕರು
Parents thefted their daughter jewelry and amount in Hassan

ಹಾಸನ : ಹೆತ್ತವರು ತಮ್ಮ ಇಡೀ ಜೀವನವನ್ನೇ ಮಕ್ಕಳಿಗಾಗಿ ಮುಡಿಪಿಟ್ಟು ತಮ್ಮ ದುಡಿಮೆಯನ್ನೆಲ್ಲ ಅವರಿಗೆ ಅರ್ಪಿಸೋದನ್ನು ಕೇಳಿದ್ದೇವೆ. ಆದರೆ, ಪೋಷಕರೇ ಮಗಳ ಒಡವೆ, ಹಣ ಕದ್ದು ಕಳ್ಳತನದ ನಾಟಕವಾಡಿ ಸಿಕ್ಕಿಬಿದ್ದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯ ಕಲ್ಲೇಶಾಚಾರ್ ಮತ್ತು ಮಮತಾ ಎಂಬುವರು ತಮ್ಮ ಮಗಳು ರೇಖಾಳನ್ನು ಅದೇ ಗ್ರಾಮದ ನಟರಾಜ್ ಜೊತೆ ಮದುವೆ ಮಾಡಿಕೊಟ್ಟಿದ್ದರು. ತವರು ಮನೆಯೂ ಇಲ್ಲೆ ಇದ್ದಿದ್ದರಿಂದ ರೇಖಾ ತನ್ನ 54,500 ರೂ. ನಗದು ಮತ್ತು 2.34 ಲಕ್ಷ ಮೌಲ್ಯದ ಚಿನ್ನಾಭರಣವನ್ನು ತವರು ಮನೆಯಲ್ಲೇ ಇಟ್ಟಿದ್ದರು.

ಆದರೆ, ಎರಡು ದಿನಗಳ ಹಿಂದೆ ತಾಯಿ-ಮಗಳಿಗೆ ಫೋನ್ ಮಾಡಿ ತಾವು ಹೊರ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ನಿನ್ನ ಒಡವೆ, ಹಣ ಎಲ್ಲವನ್ನೂ ಖದೀಮರು ಕದ್ದಿದ್ದಾರೆ ಎಂದ್ಹೇಳಿ ಕಣ್ಣೀರಿಟ್ಟಿದ್ದಾರೆ. ಕೂಡಲೇ ಮನೆಗೆ ಬಂದ ಮಗಳು ಅಪ್ಪ-ಅಮ್ಮನಿಂದ ವಿಚಾರ ತಿಳಿದು ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ: ಬೆಂದುಹೋದ ಪ್ರೀತಿ.. ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ..

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ರೇಖಾಳ ತಂದೆ-ತಾಯಿಯ ವಿಚಾರಣೆ ನಡೆಸಿದಾಗ ಪೋಷಕರು ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ.

ಈ ವೇಳೆ ತಮ್ಮದೇ ಸ್ಟೈಲ್​​ನಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ಮಾಡಿದ್ದ ಪ್ಲಾನ್​​​​ ಬಯಲಾಗಿದೆ. ಈ ಸಂಬಂಧ ಕಲ್ಲೇಶಾಚಾರ್ ಮತ್ತು ಮಮತಾರನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.