ETV Bharat / state

ಪಿಜಿಗೆ ಬಾಡಿಗೆ ಕಟ್ಟಲು ಯುವತಿಯರು ಹಣ ಇಲ್ಲ ಎಂದಿದ್ದಕ್ಕೆ ಮಾಲೀಕ ಮಾಡಿದ್ದೇನು? - ಹಾಸನ ಲೇಟೆಸ್ಟ್​ ನ್ಯೂಸ್

ಹಾಸನದ ಪಿಜಿಯೊಂದರಲ್ಲಿ ತಂಗಿದ್ದ ಯುವತಿಯರಿಬ್ಬರು ಲಾಕ್​ಡೌನ್​ಗಿಂತ ಮೊದಲು ತಮ್ಮ ಊರುಗಳಿಗೆ ತೆರಳಿದ್ದರು. ತಮ್ಮ ಲಗೇಜ್​​ ತೆಗೆದುಕೊಂಡು ಹೋಗಲು ಇಬ್ಬರೂ ಇಂದು ಪಿಜಿಗೆ ಬಂದಿದ್ದರು. ಇವರನ್ನು ನೋಡಿದ್ದೇ ತಡ ಪಿಜಿ ಮಾಲೀಕ ಸಿಟ್ಟಾಗಿದ್ದಾನೆ. ಮೊದಲು ಬಾಡಿಗೆ ಹಣ ನೀಡಿ ಎಂದು ಯುವತಿಯರಿಗೆ ಜೋರು ಮಾಡಿ, ಇಬ್ಬರನ್ನೂ ಕೂಡಿ ಹಾಕಿದ್ದಾನೆ.

Owner locked girls in PG at Hassan
ಪಿಜಿ ಬಾಡಿಗೆ ಹಣ ನೀಡಿಲ್ಲ ಎಂದು ಯುವತಿಯರನ್ನು ಕೂಡಿ ಹಾಕಿದ ಮಾಲೀಕ
author img

By

Published : May 21, 2020, 2:58 PM IST

Updated : May 21, 2020, 8:40 PM IST

ಹಾಸನ : ಪಿಜಿ ಬಾಡಿಗೆ ನೀಡಿಲ್ಲ ಎಂದು ಇಬ್ಬರು ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

Owner locked girls in PG at Hassan
ಪಿಜಿ ಒಳಗೆ ಲಾಕ್​ ಆಗಿರುವ ಯುವತಿಯರು

ಹಾಸನದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ಯುವತಿಯರಿಬ್ಬರು ಯುಗಾದಿ ಹಬ್ಬಕ್ಕೆಂದು ಮೈಸೂರಿನಲ್ಲಿರುವ ಮನೆಗೆ ತೆರಳಿದ್ದರು.‌ ಲಾಕ್​​ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಪಿಜಿಗೆ ಬಂದಿರಲಿಲ್ಲ. ಇಂದು ಬಟ್ಟೆ, ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಬಾಡಿಗೆ ಕಾರು ಮಾಡಿಕೊಂಡು ಪಿಜಿಗೆ ಬಂದಾಗ, ಎರಡು ತಿಂಗಳ ಬಾಡಿಗೆ ಹಣ ನೀಡಲೇಬೇಕು ಎಂದು ಪಿಜಿ ಮಾಲೀಕ ಒತ್ತಾಯಿಸಿದ್ದನು.

ಪಿಜಿ ಒಳಗೆ ಲಾಕ್​ ಆಗಿರುವ ಯುವತಿಯರು

ತಮ್ಮಲ್ಲಿ ಈಗ ಹಣವಿಲ್ಲ ಎಂದು ಯುವತಿಯರು ಕಷ್ಟ ಹೇಳಿಕೊಂಡಿದ್ದರು. ಅವರ ಮಾತು ಕೇಳಿಸಿಕೊಳ್ಳದ ಪಿಜಿ ಮಾಲೀಕ ಇಬ್ಬರನ್ನೂ ಪಿಜಿಯಲ್ಲೇ ಕೂಡಿ ಹಾಕಿದ್ದಾನೆ. ಯುವತಿಯರಿಬ್ಬರು ತಿಂಡಿಯಿಲ್ಲದೆ ಪಿಜಿಯಲ್ಲಿ ಲಾಕ್ ಆಗಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು, ಇಬ್ಬರೂ ಯುವತಿಯರನ್ನು ಬಿಡುಗಡೆಗೊಳಿಸಿ ವಿಚಾರಣೆ ನಡೆಸುತ್ತಿದ್ದಾರೆ.

Last Updated : May 21, 2020, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.