ETV Bharat / state

ಹಾಸನವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದಷ್ಟೇ ನಮ್ಮ ಗುರಿ: ಸೂರಜ್ ರೇವಣ್ಣ - ಎಂಎಲ್‌ಸಿ ಸೂರಜ್ ರೇವಣ್ಣ

ನಾವು ಹಾಸನವನ್ನು ಕಳೆದುಕೊಂಡಿದ್ದೇವೆ. ಅದನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕು ಅಷ್ಟೇ ನಮ್ಮ ಗುರಿ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

ಸೂರಜ್ ರೇವಣ್ಣ
ಸೂರಜ್ ರೇವಣ್ಣ
author img

By

Published : Feb 6, 2022, 7:21 AM IST

ಹಾಸನ: ರಾಜಕೀಯವಾಗಿ ಹಾಸನ ಜಿಲ್ಲೆಯನ್ನು ನಾವು ಕಳೆದುಕೊಂಡಿದ್ದೇವೆ. ಅದನ್ನ ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದಷ್ಟೇ ನಮ್ಮ ಗುರಿ ಎಂದು ವಿಧಾನ ಪರಿಷತ್​ನ ನೂತನ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.

ಹಾಸನವನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಸನ ಜಿಲ್ಲೆಯ ಯಾವುದಾದರೂ ಒಂದು ತಾಲೂಕನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೊಳೆನರಸೀಪುರವನ್ನು ನಮ್ಮ ತಂದೆ- ತಾಯಿ ನೋಡಿಕೊಳ್ಳುತ್ತಿದ್ದಾರೆ. ಹಾಸನದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬುದು ಜೆಡಿಎಸ್​ ಪಕ್ಷದ ಹಿರಿಯರು, ಮುಖಂಡರು, ಯುವಕರ ಅಪೇಕ್ಷೆಯಾಗಿತ್ತು. ಅದಕ್ಕಾಗಿ ಹಾಸನ ತಾಲೂಕನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಹಾಸನವನ್ನು ಕಳೆದುಕೊಂಡಿದ್ದೇವೆ. ಅದನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕು, ಅಷ್ಟೇ ಗುರಿ ಎಂದು ತಿಳಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರಜ್ ರೇವಣ್ಣ

ಹಾಸನಕ್ಕೆ ರೇವಣ್ಣ, ಭವಾನಿ ರೇವಣ್ಣ ಬಂದು ಸ್ಪರ್ಧಿಸಲಿ ಎಂಬ ಶಾಸಕ ಪ್ರೀತಂಗೌಡ ಪಂಥಾಹ್ವಾನದ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ತಾಯಿ ಕೆ.ಆರ್.ಪೇಟೆ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲೂ ಅಭ್ಯರ್ಥಿ ಆಗ್ತಾರೆ ಅಂತಾ ಹೇಳಿದ್ರು. ಈಗ ಹಾಸನದಲ್ಲಿ ಸ್ಪರ್ಧಿಸ್ತಾರೆ ಅಂತಾ ಹೇಳ್ತಿದ್ದಾರೆ. ಇನ್ನೂ ಎಲ್ಲೆಲ್ಲಿ ಊಹಾಪೋಹ ಹಬ್ಬಿಸುತ್ತಾರೋ ಹಬ್ಬಿಸಲಿ ನನಗೇನು ಬೇಜಾರಿಲ್ಲ. ನಮ್ಮ ಕುಟುಂಬದವರು ಯಾರಾದ್ರು ಬರಲಿ ಎನ್ನುವ ಅಪೇಕ್ಷೆ ಅವರಿಗಿದೆ. ಆದರೆ ನಮ್ಮ ಅಪೇಕ್ಷೆಯನ್ನು ಇನ್ನೂ ತಿಳಿಸಿಲ್ಲ. ದೇವೇಗೌಡರು, ನಮ್ಮ ಪಕ್ಷದ ಆರು ಶಾಸಕರು, ರೇವಣ್ಣ, ಹಿರಿಯ ರಾಜಕಾರಣಿಗಳು ಇದ್ದಾರೆ. ಅವರೆಲ್ಲಾ ಸೇರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದರು.

ಓದಿ: ಅತಿ ದೊಡ್ಡ ಇ-ತ್ಯಾಜ್ಯ ರೋಬೋ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

ಇದೇ ವೇಳೆ ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದರ ಬಗ್ಗೆ ನನ್ನದೇ ಆದ ರೀತಿಯಲ್ಲಿ ಮಾತನಾಡಬೇಕು ಅಂದುಕೊಂಡಿದ್ದೇನೆ ಅದನ್ನು ಬಹಿರಂಗಪಡಿಸಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.