ETV Bharat / state

JDS ತೊರೆದು BJPಗೆ ಬಾಹ್ಯ ಬೆಂಬಲ ನೀಡಿದ ಸದಸ್ಯರು... ನಡೆಯಿತಾ ಆಪರೇಷನ್ ಕಮಲ! - Hassan BJP

ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವುದಕ್ಕೆ ಸ್ವಪಕ್ಷೀಯರೇ ಸಿದ್ಧರಾಗಿರುವುದು ಕಾಣುತ್ತಿದೆ. ಏಕೆಂದರೆ ಅರಸೀಕೆರೆ ನಗರಸಭೆಯ ಸದಸ್ಯರಾದ ಹರ್ಷವರ್ಧನ್, ಕಲೈಅರಸಿ, ಚಂದ್ರಶೇಖರಯ್ಯ, ಎನ್.ಕವಿತಾ ದೇವಿ, ದರ್ಶನ್ ಎ.ವಿ. ಬಿ.ಎನ್.ವಿದ್ಯಾಧರ್ ಮತ್ತು ಆಯಿಶಾ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ರೆ, ಪಕ್ಷೇತರವಾಗಿ ಪುಟ್ಟರಾಜು ಮತ್ತು ಮೇಲಗಿರಿಗೌಡ ಬಿಜೆಪಿಗೆ ಸಾಥ್ ನೀಡಿದ್ದಾರೆ.

hassan
ಆಪರೇಷನ್ ಕಮಲ
author img

By

Published : Jun 22, 2021, 10:44 PM IST

ಹಾಸನ: ಅಂತೂ ಇಂತೂ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವುದಕ್ಕೆ ಸ್ವಪಕ್ಷೀಯರೇ ಸಿದ್ಧರಾಗಿದ್ದಾರೆ ಎಂಬುದಕ್ಕೆ ಇಲ್ಲಿ ನಡೆದ ಬೆಳವಣಿಗೆ ಸಾಕ್ಷಿಯಾಗಿದೆ. ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ 7 ಮಂದಿ ನಗರಸಭೆ ಸದಸ್ಯರು ಪ್ರತ್ಯೇಕ ಆಸನ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅರಸೀಕೆರೆ ನಗರಸಭೆಯ ಸದಸ್ಯರಾದ ಹರ್ಷವರ್ಧನ್, ಕಲೈಅರಸಿ, ಚಂದ್ರಶೇಖರಯ್ಯ, ಎನ್.ಕವಿತಾ ದೇವಿ, ದರ್ಶನ್ ಎ.ವಿ. ಬಿ.ಎನ್.ವಿದ್ಯಾಧರ್ ಮತ್ತು ಆಯಿಶಾ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷೇತರವಾಗಿ ಪುಟ್ಟರಾಜು ಮತ್ತು ಮೇಲಗಿರಿಗೌಡ ಬಿಜೆಪಿಗೆ ಸಾಥ್ ನೀಡಿದ್ದಾರೆ.

ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ ಸದಸ್ಯರು

ಶಾಸಕ ಮತ್ತು ಮಾಜಿ ಅಧ್ಯಕ್ಷರ ವಿರುದ್ದ ಸೆಟೆದ ಸದಸ್ಯರು: ಅಭಿವೃದ್ಧಿಯ ಹರಿಕಾರ, ಬರದ ನಾಡಿನ ಭಗೀರಥ ಎಂದೆಲ್ಲಾ ಬಿಂಬಿತವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶಾಸಕ ಕೆಎಂ ಶಿವಲಿಂಗೇಗೌಡ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ವಿರುದ್ಧ ನೇರವಾಗಿ ಆರೋಪ ಮಾಡುತ್ತಿದ್ದು, ಇವರಿಬ್ಬರ ವಿರುದ್ಧ ಏಳು ಮಂದಿ ಜೆಡಿಎಸ್ ಸದಸ್ಯರು ಸೆಟೆದು ನಿಂತಿದ್ದಾರೆ.

ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಕೋಟೆಯನ್ನು ಛಿದ್ರ ಮಾಡಿದ್ದಾರೆ. ಅಲ್ಲದೇ ಪಕ್ಷೇತರವಾಗಿ ನಿಂತಿದ್ದ ಇಬ್ಬರು ಸದಸ್ಯರು ಕೂಡ ಬಿಜೆಪಿಗೆ ಬಾಹ್ಯ ಬೆಂಬಲ ಕೊಡುವ ಮೂಲಕ ಅರಸೀಕೆರೆಯಲ್ಲಿ ಕೇಸರಿ ಬಾವುಟವನ್ನು ಇಂದಿನಿಂದ ವಿರಾಜಮಾನವಾಗಿ ಹಾರಿಸಲು ಹೊರಟಿದ್ದಾರೆ.

ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ: ಜೆಡಿಎಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ನಗರಸಭೆಯ ಅಧ್ಯಕ್ಷ ಸಮೀವುಲ್ಲಾ ವಿರುದ್ಧ ಏಳು ಮಂದಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಕಾಮಗಾರಿಗಳನ್ನು ನೀಡದೇ ದಬ್ಬಾಳಿಕೆ ನಡೆಸುತ್ತಿದ್ದರು.

ಹೀಗಾಗಿ ಪಕ್ಷವನ್ನು ಜೊತೆಗಿಟ್ಟುಕೊಂಡು ಅವರ ಇಬ್ಬರ ಧೋರಣೆಗಳನ್ನು ವಿರೋಧ ಮಾಡಿ ನಾವು ಬಾಹ್ಯವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.

ನಡೆಯಿತು ಆಪರೇಷನ್ ಕಮಲ: ಇಂತಹ ಒಂದು ಬೆಳವಣಿಗೆ ನಡೆದಿದ್ದು ಕೇವಲ 9 ಗಂಟೆಯಲ್ಲಿ. ನಿನ್ನೆ ರಾತ್ರಿ ಒಂದು ದಿನ ನಡೆದ ಬೆಳವಣಿಗೆಯಲ್ಲಿ ಸುಮಾರು ಜೆಡಿಎಸ್​ನ ಏಳು ಜನ ಸದಸ್ಯರನ್ನು ಬಿಜೆಪಿಗೆ ಕರೆತರುವ ಮೂಲಕ ಇಡೀ ಅರಸೀಕೆರೆಯ ಜೆಡಿಎಸ್ ಪಾಳಯಕ್ಕೆ ಶಾಕ್ ನೀಡಿದೆ.

ಇಂದು ಬೆಳಗ್ಗೆ ಅವರು ಹಾಸನದ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಮಗೆ ನಗರಸಭೆಯಲ್ಲಿ ಪ್ರತ್ಯೇಕ ಆಸನ ನೀಡಬೇಕೆಂದು ಕೇಳಿದ್ದಾರೆ.

ಅರಸೀಕೆರೆಯ ನಗರಸಭೆ ಚುನಾವಣೆ ನಡೆದು ಸುಮಾರು ಎರಡೂವರೆ ವರ್ಷಗಳು ಕಳೆದಿದೆ. ಆದರೆ ನಾವು ನಿರೀಕ್ಷೆಯಿಟ್ಟುಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆವು. ಆದರೆ ನಿರೀಕ್ಷೆ ಎಲ್ಲವೂ ಹುಸಿಯಾಗಿದ್ದು ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಮಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು. ಈ ಕಾರಣದಿಂದ ಮತದಾರರಿಗೆ ಕೊಟ್ಟ ವಚನವನ್ನು ಪಾಲಿಸಲಾಗಲಿಲ್ಲ.

ನಮ್ಮ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ದೃಷ್ಟಿಕೋನವನ್ನು ಇಟ್ಟುಕೊಂಡು ನಾವು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನಮ್ಮ ಪ್ರತಿ ವಾರ್ಡ್​​​​ನ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎನ್ನುವುದು ಸದಸ್ಯರುಗಳ ಮಾತು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಆಗಿರುವ ಎನ್. ಆರ್. ಸಂತೋಷ್, ಅರಸೀಕೆರೆಗೆ ಸದ್ಯ ಚಾಣಾಕ್ಷನಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಯಾರಿಗೂ ತಟ್ಟದ ರೀತಿಯಲ್ಲಿಯೇ ತಮ್ಮ ಪಕ್ಷಕ್ಕೆ ಕರೆ ತರುತ್ತಿರುವುದು ಅಚ್ಚರಿಯ ಸಂಗತಿ ಎನ್ನಬಹುದು.

ಇನ್ನು ಪಕ್ಷದ ಬಲ ಬಲ ನೋಡುವುದಾದರೇ, ಜೆಡಿಎಸ್ -21, ಬಿಜೆಪಿ - 06, ಕಾಂಗ್ರೆಸ್ - 01, ಪಕ್ಷೇತರ 03 ಮಂದಿ ಇದ್ದಾರೆ. ಏಳು ಮಂದಿ 1987ನೇ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡದೇ, ಮೂರನೇ ಒಂದು ಭಾಗ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಇನ್ನು ಅಭಿವೃದ್ಧಿಯ ಮಾನದಂಡದಡಿ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗುವುದಿಲ್ಲ. ಹೀಗಾಗಿ ಮನವಿಯನ್ನು ಪರಿಶೀಲಿಸಿ ಪುರಸ್ಕರಿಸಿ ಕೋರಿಕೆಯಂತೆ ಅರಸಿಕೆರೆಯಲ್ಲಿ ಅಧಿವೇಶನಗಳಲ್ಲಿ ಪ್ರತ್ಯೇಕವಾದ ಆಸನಗಳ ವ್ಯವಸ್ಥೆಯನ್ನು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಒಟ್ಟಾರೆ ಅರಸೀಕೆರೆ ನಗರಸಭೆಯಲ್ಲಿ ಈಗ ರಾಜಕೀಯ ವಿಪ್ಲವ ನಡೆಯುತ್ತಿದೆ. ಬರದ ನಾಡಿನ ಭಗೀರಥ ಎಂದೇ ಕರೆಸಿಕೊಳ್ಳುವ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ವಿರುದ್ಧ ಈ ಏಳು ಮಂದಿ ತೊಡೆತಟ್ಟಿ ಹೊರನಡೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆ ಯಾವ ರೀತಿ ನಡೆಯುತ್ತದೆ ಕಾದುನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.