ETV Bharat / state

ಹಾಸನದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ..ಡಿಸಿ ಸ್ಪಷ್ಟನೆ

author img

By

Published : May 9, 2020, 10:21 AM IST

ಹಾಸನದಲ್ಲಿ ಕೊರೊನಾ ವೈರಸ್​ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಆರ್.ಗಿರೀಶ್ ಪ್ರಕಟಣೆ ಬಿಡುಗಡೆ ಮಾಡಿದ್ದು,ಈವರೆಗೆ ಯಾವುದೇ ಕೊವೀಡ್​ 19 ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

No Covid 19 positive case detected in Hassan
ಹಾಸನದಲ್ಲಿ ಯಾವುದೇ ಕೊವೀಡ್​ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ..ಜಿಲ್ಲಾಧಿಕಾರಿ ಸ್ಪಷ್ಟನೆ

ಹಾಸನ: ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಅಂಕಿ ಅಂಶ ಬಿಡುಗಡೆ ಮಾಡಿದ್ದು,ಈವರೆಗೆ ಜಿಲ್ಲೆಯಲ್ಲಿ ಯಾವುದೇ ಕೊವೀಡ್​ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ.

ಇದುವರೆಗೆ ಕೊರೊನಾ ಶಂಕಿತರೆಂದು 2,899 ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು,ಇವರಲ್ಲಿ 933 ಜನ ಅಂತಾರರಾಷ್ಟ್ರೀಯ ಪ್ರಯಾಣಿಕರು,109 ಜನ ವಿದೇಶಿಯರು, 1,453 ಜನ ಶೀತ, ನೆಗಡಿ, ಕೆಮ್ಮು ಇರುವವರು ಹಾಗೂ 10 ದಿನದಿಂದ ಜ್ವರ, ಕೆಮ್ಮು, ನೆಗಡಿ ಕಂಡುಬಂದಿರುವ 92 ವ್ಯಕ್ತಿಗಳು. ಇವರಲ್ಲಿ 2,548 ಜನರ ಗಂಟಲ ದ್ರವವನ್ನ ಪರೀಕ್ಷೆಗೆ ಒಳಪಡಿಸಿದ್ದು,ಎಲ್ಲರ ವರದಿ ನೆಗೆಟಿವ್ ಬಂದಿದೆ.

ಸದ್ಯ, 8 ಜನರನ್ನ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಇದಲ್ಲದೇ 104 ಮಂದಿಯ ದೈನಂದಿನ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ. 467 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 3 ಜನ ಆಸ್ಪತ್ರೆಯ ಐಸೋಲೇಷನ್‍ನಲ್ಲಿದ್ದಾರೆ. 970 ಮಂದಿಯನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.