ETV Bharat / state

ನೂತನ ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ ಕುಮಾರಸ್ವಾಮಿ ಸಾರಥ್ಯ - ದಲಿತ ವರ್ಗಕ್ಕೆ ತುಪ್ಪ ಸವರಿದ ಮಾಜಿ ಪ್ರಧಾನಿ ದೇವೇಗೌಡ

ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರದ ಶಾಸಕ ಹೆಚ್​.ಕೆ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ.

ನೂತನ ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ ಕುಮಾರಸ್ವಾಮಿ ಸಾರಥ್ಯ
author img

By

Published : Jul 5, 2019, 2:35 AM IST

ಹಾಸನ: ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರದ ಶಾಸಕ ಹೆಚ್​.ಕೆ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಘೋಷಣೆ ಮಾಡಿದ್ದಾರೆ.

ಬೇಲೂರು ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹೆಚ್.ಕೆ. ಕುಮಾರಸ್ವಾಮಿ, ಕ್ಷೇತ್ರ ಪುನರ್ ವಿಂಗಡಣೆ ವೇಳೆ ಬಳಿಕ 2008ರಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರ ಅಣತಿಯಂತೆ ಸಕಲೇಶಪುರ-ಆಲೂರು ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ವಲಸೆ ಬಂದಿದ್ದರು..

2008, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ತಮ್ಮದಾಗಿಸಿಕೊಂಡವರು. ಅಷ್ಠೇ ಅಲ್ಲ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಅವರನ್ನು ಜಿ.ಪಂ. ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಸದ್ಯ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್​. ವಿಶ್ವನಾಥ್ ರಾಜೀನಾಮೆ ನೀಡಿದ ಬೆನ್ನಲೇ ಹೆಚ್​.ಕೆ ಕುಮಾರಸ್ವಾಮಿಗೆ ಈ ಸ್ಥಾನ ನೀಡಲಾಗಿದೆ.

ಹಾಸನ: ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರದ ಶಾಸಕ ಹೆಚ್​.ಕೆ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಘೋಷಣೆ ಮಾಡಿದ್ದಾರೆ.

ಬೇಲೂರು ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹೆಚ್.ಕೆ. ಕುಮಾರಸ್ವಾಮಿ, ಕ್ಷೇತ್ರ ಪುನರ್ ವಿಂಗಡಣೆ ವೇಳೆ ಬಳಿಕ 2008ರಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರ ಅಣತಿಯಂತೆ ಸಕಲೇಶಪುರ-ಆಲೂರು ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ವಲಸೆ ಬಂದಿದ್ದರು..

2008, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ತಮ್ಮದಾಗಿಸಿಕೊಂಡವರು. ಅಷ್ಠೇ ಅಲ್ಲ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಅವರನ್ನು ಜಿ.ಪಂ. ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಸದ್ಯ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್​. ವಿಶ್ವನಾಥ್ ರಾಜೀನಾಮೆ ನೀಡಿದ ಬೆನ್ನಲೇ ಹೆಚ್​.ಕೆ ಕುಮಾರಸ್ವಾಮಿಗೆ ಈ ಸ್ಥಾನ ನೀಡಲಾಗಿದೆ.

Intro:ಕೊನೆಗೂ ಸಿಕ್ಕಿತು ದಲಿತ ವರ್ಗದ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ:
ಹಾಸನ: ಕೇಳಿದ್ದು ಸಚಿವ ಸ್ಥಾನ...ಕೊಟ್ಟಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ. ಹೌದು ಮೈತ್ರಿ ಸರ್ಕಾರದ ಅಗ್ಗ ಜಗ್ಗಾಟ ಒಂದುಕಡೆಯಾದ್ರೆ, ಜೆಡಿಎಸ್ ಪಕ್ಷವನ್ನ ಉಳಿಸಿಕೊಳ್ಳುವುದು ಮತ್ತೊಂದು ಸಾವಲಾಗಿದೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಷ್ಟ್ರಧ್ಯಕ್ಷ ಹೆಚ್.ಡಿ.ದೇವೇಗೌಡರಿಗೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ನಾನಾ ಹೆಸರುಗಳು ಕೇಳಿಬಂದವು. ಆದ್ರೆ ಕೊನೆಗೆ ದಲಿತ ಮುಖಂಡನಿಗೆ ಪಟ್ಟ ಕಟ್ಟುವ ಮೂಲಕ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿಗೆ ತಪ್ಪ ಸವರಿದ್ದಾರೆ ದೇವೇಗೌಡ್ರು.

ಹೌದು, ಕ್ಷೇತ್ರ ಬದಲಾವಣೆ ನಂತರವೂ ಕೂಡಾ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಒಂದು ಬಾರಿ ಸಚಿವರಾಗಿದ್ದ ಹೆಚ್.ಕೆ.ಕುಮಾರಸ್ವಾಮಿಗೆ ಜೆಡಿಎಸ್ ಅಧ್ಯಕ್ಷ ಪಟ್ಟಸಿಕ್ಕಿದೆ. ಕುಮಾರಸ್ವಾಮಿ ಬಯಸಿದ್ದು, ಸಚಿವ ಸ್ಥಾನವಾದ್ರು, ಸಿಕ್ಕಿದ್ದು ಮಾತ್ರ ರಾಜ್ಯಾಧ್ಯಕ್ಷ ಸ್ಥಾನ. ಜೆಡಿಎಸ್ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ತುಡಿಕ್,ಪಿಟಿಕ್ ಎನ್ನದೆ ಶಿರಸಾವಹಿಸಿ, ಪಾಲಿಸುವ ಗುಣಗಳನ್ನು ಮೈಗೂಡಿಸಿಕೊಂಡು ಬಂದಿರುವ ಸಕಲೇಶಪುರ, ಆಲೂರು ಮೀಸಲು ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಪಾಲಿಗೆ ಬಯಸದೆ ಬಂದದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ. ಸಿಕ್ಕಿರುವ ಅವಕಾಶವೇ ಪಾಲಿಗೆ ಬಂದ ಪಂಚಾಮೃತ ಎಂದು ಸ್ವೀಕರಿಸಿರುವ ಎಚ್.ಕೆ. ಕುಮಾರಸ್ವಾಮಿಯ ಮುಂದೆ ನಾನಾ ಸವಾಲುಗಳಿವೆ. ಆದ್ರೆ ಅವೆಲ್ಲವನ್ನ ಪೂರೈಸಲು ರೇವಣ್ಣನ ಅನುಮತಿ ಬೇಕು. ಇದ್ರ ನಡುವೆ ದಲಿತ ವರ್ಗಕ್ಕೆ ರಾಜಕೀಯವಾಗಿ ಮೇಲೆತ್ತುವ ಕೆಲಸ ಮಾಡಬೇಕಾದ ಚಾಲೆಂಜ್ ಇವರ ಮುಂದಿದೆ.

ಬೇಲೂರು ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕರಾಗಿ ಸೇವೆ ಸಲ್ಲಿಸಿದ್ದ ಎಚ್.ಕೆ.ಕುಮಾರಸ್ವಾಮಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಬಳಿಕ 2008 ರಲ್ಲಿ ಜೆಡಿಎಸ್ ವರೀಷ್ಠ ಎಚ್.ಡಿ.ದೇವೇಗೌಡರ ಅಣತಿಯಂತೆ ಸಕಲೇಶಪುರ- ಆಲೂರು ಮೀಸಲು ವಿಧಾನಸಭೆ ಕ್ಷೇತ್ರ ಕ್ಕೆ ವಲಸೆ ಬಂದವರು. 2008,2013 ಹಾಗೂ 2018 ರ ವುಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ತಮ್ಮದಾಗಿಸಿಕೊಂಡವರು. ಅಷ್ಠೇ ಅಲ್ಲ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಅವರನ್ನು ಜಿಪಂ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡ ಹೆಗ್ಗಳಿಯೂ ಅವರದ್ದು.

ಸೌಮ್ಯ ಸ್ವಭಾವ, ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಹಿಂದೆ ಬಂದರೆ ಹಿಂದೆ-ಮುಂದೆ ಯಾರೆ ಬಂದ್ರು ಕೂಡಾ ಒದೆಯದ ಹಸುವಿನ ಮನೋಭಾವದಿಂದ ಕ್ಷೇತ್ರದ ಹಾಗೂ ಪಕ್ಷದ ವರಿಷ್ಠರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಬಂದಿರುವ ಎಚ್.ಕೆ.ಕುಮಾರಸ್ವಾಮಿ ತಮ್ಮಅನುಭವದ ಆಧಾರದಲ್ಲಿ ಈ ಬಾರಿಯ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಇಂದಲ್ಲ ನಾಳೆ ದೊರಕುತ್ತದೆ ಎಂದು ದೃಢವಾಗಿ ನಂಬಿದ್ದವರು. ಸಚಿವ ಸ್ಥಾನಬೇಕೆಂದು ಏರಿದ ಧ್ವನಿಯಲ್ಲಿ ಕೇಳದಿದ್ದರೂ, ಅವಕಾಶ ಸಿಕ್ಕರೆ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತ ಬಂದವರು.

ಮಿಸ್ಸಾದ ಸಚಿವ ಸ್ಥಾನ:
ಬಿಎಸ್ ಪಿ ಶಾಸಕ ಎನ್.ಮಹೇಶ್, ಶಿಕ್ಷಣ ಸಚಿವರಾಗಿ ಕೆಲ ದಿನಗಳ ಕಾಲ ಇದ್ದು, ಬಳಿಕ ರಾಜಕೀಯ ದೊಂಬರಾಟದಲ್ಲಿ ಪಕ್ಷದ ಅಣತಿಯಂತೆ ಸಚಿವ ಸ್ಥಾನ ತೊರೆದಾಗ ಆ ಸ್ಥಾನ ದಲಿತ ವರ್ಗಕ್ಕೆ ಸೇರಿದ ಎಚ್.ಕೆ.ಕುಮಾರಸ್ವಾಮಿಗೆ ಒಲಿಯುತ್ತದೆ ಎಂದು ಬಲವಾಗಿ ನಂಬಿತ್ತು ಶಾಸಕರ ಆಪ್ತವಲಯ. ಸಮ್ಮಿಶ್ರ ಸರಕಾರದ ಹಿತದೃಷ್ಟಿಯಿಂದ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹೋದರ ಹಾಸನ ಜಿಲ್ಲಾ ಉಸ್ತುವಾರಿ ಸಿಎಂ ಎಚ್.ಡಿ.ರೇವಣ್ಣ, ಸಚಿವರಾಗಿರುವ ಕಾರಣ ಹಾಸನ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡುವುದು ಉಂಟೇ ಎಂಬ ಮಾತು ಕೇಳಿ ಬಂದಂತೆಯೇ ಶಾಸಕ ಕುಮಾರಸ್ವಾಮಿಗೆ ಸಚಿವ ಸ್ಥಾನ ದೊರಕುವ ಮಹಾದಾಸೆ ಅಷ್ಟೇ ಬೇಗ ಕರಗಿ ಹೋಯಿತು.

ಇಷ್ಟೆಲ್ಲ ಬೆಳವಣಿಗೆ ಬಳಿಕ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದೇ ತಡ ಎಚ್.ಕೆ. ಕುಮಾರಸ್ವಾಮಿ ಪಾಲಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಬಂದಿದೆ.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.