ಹಾಸನ: ಹಾಸನದ ಸಂಸ್ಕೃತಿಗೆ ತಕ್ಕಂತೆಯೇ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಗುವುದು. ಈ ಸಂಬಂಧ ಯೋಜನಾ ನಕ್ಷೆ ತಯಾರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಸೂಕ್ತ ಯೋಜನೆ ರೂಪಿಸುವ ಸಂಬಂಧ ಸ್ಥಳ ವೀಕ್ಷಣೆ ಹಾಗೂ ಯೊಜನಾ ನಕ್ಷೆ ಪರಿಶೀಲನೆ ಮಾಡಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಚೇರಿ ನಿರ್ಮಾಣವಾಗಿ ಸುಮಾರು 50 ವರ್ಷಗಳು ಕಳೆದಿವೆ. ಹೀಗಾಗಿ ವಿವಿಧ ಕಚೇರಿಗಳನ್ನೊಳಗೊಂಡ ನೂತನ ಜಿಲ್ಲಾಧಿಕಾರಿ ಕಚೇರಿಯ ಅವಶ್ಯಕತೆ ಇದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಹಾಗೂ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮನವಿ ಮಾಡಿದ್ದರು. ಸದ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ನಕಾಶೆ ಹಾಗೂ ವಿಸ್ತೃತ ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.