ETV Bharat / state

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ - ಹಾಲು ಉತ್ಪಾದಕರ ಸಂಘ

ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಚಿಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ. ರೈತರ ಹಾಲಿನ ಹಣ ವಾಪಸ್ ಕೊಡಿಸಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

PROTEST
ಪ್ರತಿಭಟನೆ
author img

By

Published : Jun 10, 2020, 5:03 PM IST

ಹಾಸನ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಣ ದುರುಪಯೋಗವಾಗಿದ್ದು, ರೈತರ ಹಾಲಿನ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಚಿಗಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಂಘದಲ್ಲಿ ಸುಮಾರು 10 ವರ್ಷದಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸುರೇಶ್ ಮತ್ತು ಆತನ ಪತ್ನಿ ಕೆ.ಬಿ.ಶುಭಾ, ನಿರ್ದೇಶಕ ಶಾಮಿಯಾನ ಮಂಜೇಗೌಡ, ಸಂಘದ ಅಧ್ಯಕ್ಷ ಚಿಗಹಳ್ಳಿ ಗೌಡಪ್ಪ, ಹಂಚಿಹಳ್ಳಿ ಗ್ರಾಮದ ನಿವಾಸಿ ಕಮಲಮ್ಮ, ಪ್ರದೀಪ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಇವರು ಹಾಲು ಉತ್ಪಾದಕರಲ್ಲದಿದ್ದರೂ ಸಹ ಷೇರುದಾರರು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಹಣ ಸಂದಾಯ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುರೇಶ ತನ್ನ ಪತ್ನಿ ಹೆಸರಿನಲ್ಲಿ ಕರ್ನಾಟಕ ಬ್ಯಾಂಕು (4252500100434001) ಹಾಗೂ ಹೆಚ್‌ಡಿಸಿಸಿ ಬ್ಯಾಂಕಿನಲ್ಲಿ (902021091704010) ಉಳಿತಾಯ ಖಾತೆ ತೆರೆದು ಹಣ ಪಾವತಿಸಿದ್ದಾರೆ. ಅಲ್ಲದೆ, ತನ್ನದೆ ಹೆಸರಿನಲ್ಲಿ ಹಾಸನದ ಹೆಚ್‌ಡಿಸಿಸಿ ಬ್ಯಾಂಕಿನ ಉಳಿತಾಯ ಖಾತೆಗೆ (902021081704009) ಹಣ ಹಾಕಿಕೊಂಡಿದ್ದಾರೆ. ಹಾಗೆಯೇ ಉಳಿದವರ ಖಾತೆಗಳಿಗೂ ಹಣ ಸಂದಾಯ ಮಾಡಿದ್ದಾರೆ ಎಂದು ದೂರಿದರು.

ಹಾಲಿನ ಹಣ ವಾಪಸ್​ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಕಾರ್ಯದರ್ಶಿ ನಡೆಸಿರುವ ಅವ್ಯವಹಾರ ಕುರಿತು ಹಾಸನ ಹಾಲು ಉತ್ಪಾದಕ ಸಹಕಾರ ಒಕ್ಕೂಟಕ್ಕೆ ದಾಖಲೆಗಳ ಸಮೇತ ದೂರು ನೀಡಲಾಗಿದೆ. ಒಕ್ಕೂಟದ ವ್ಯವಸ್ಥಾಪಕರು ಹಾಲು ಖರೀದಿ ಪುಸ್ತಕ, ಹಣ ಬಟವಾಡೆ, ಸಭಾ ನಡಾವಳಿ, ನಗದು, ಪ್ರೋತ್ಸಾಹ ಧನ, ಪಶು ಆಹಾರ ಖರೀದಿ ಪುಸ್ತಕಗಳ ಹಾಗೂ ಸರ್ಕಾರದ ಪ್ರೋತ್ಸಾಹ ಧನ ಯೋಜನೆಯಡಿ ಪ್ರತಿ ತಿಂಗಳು ಹಾಲು ಉತ್ಪಾದಕರಿಗೆ ಹಣ ಸಂದಾಯವಾಗಿರುವ ಮಾಹಿತಿ ಪುಸ್ತಕಗಳನ್ನು ಪರಿಶೀಲನೆಗೆ ಒದಗಿಸುವಂತೆ ತಾಕೀತು ಮಾಡಿದ್ದಾರೆ ಎಂದು ಗ್ರಾಮಸ್ಥರು ವಿವರಿಸಿದರು.

ಆದರೆ ಇಷ್ಟು ದಾಖಲೆಗಳನ್ನು ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಒದಗಿಸುತ್ತಿಲ್ಲ. ಹೀಗಾಗಿ ಒಕ್ಕೂಟದವರು 5 ತಿಂಗಳ ಹಾಲಿನ ಹಣವನ್ನು ತಡೆ ಹಿಡಿದಿದ್ದಾರೆ. ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಕೇಳಿದರೆ ಕಾರ್ಯದರ್ಶಿ ಆತ್ಮಹತ್ಮೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಂಘದಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದರೆ ದಾಖಲೆಗಳನ್ನು ಕೊಡಬಹುದಲ್ಲವೇ? ಎಂದು ಪ್ರಶ್ನಿಸಿದ ಗ್ರಾಮಸ್ಥರು, ಮುಂಗಾರು ಪ್ರವೇಶಿಸುತ್ತಿದೆ. ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯ ಇರುವುದರಿಂದ ಕೂಡಲೇ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.