ETV Bharat / state

ಹಾಸನ ಜೆಡಿಎಸ್ ಭದ್ರಕೋಟೆಯೊಳಗೆ ಮೋದಿ ಅಬ್ಬರಿಸುವರು..- ಶಾಸಕ ಪ್ರೀತಂಗೌಡ - ಲೋಕಸಭಾ ಚುನಾವಣೆ

ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ತಿಳಿದರು.

ಶಾಸಕ ಪ್ರೀತಂ ಗೌಡ
author img

By

Published : Mar 23, 2019, 4:56 PM IST

ಹಾಸನ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದರು.

ಶಾಸಕ ಪ್ರೀತಂ ಗೌಡ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಜೆಡಿಎಸ್ ಬಗ್ಗೆ ಅಸಮಾಧಾನವಿದೆ. ನಾನೇನು ಆಕಸ್ಮಿಕವಾಗಿ, ಚೀಟಿ ಅಥವಾ ಲಾಟರಿ ಎತ್ತಿ ಶಾಸಕನಾಗಿಲ್ಲ. ಜನತೆಯ ವಿಶ್ವಾಸಗಳಿಸಿ 5 ವರ್ಷಗಳಿಂದ ಹಗಲು-ರಾತ್ರಿ ಸಮಾಜ ಸೇವೆ ಮಾಡಿ ಸ್ಥಾನ ಅಲಂಕರಿಸಿದ್ದೇನೆ ಎಂದು ಟಾಂಗ್ ನೀಡಿದರು.

ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗುವರು. ಚುನಾವಣೆ ಫಲಿತಾಂಶ ಆಶಾದಾಯಕವಾಗಿರಲಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಎಂದು ಭವಿಷ್ಯ ನುಡಿದರು‌.

ಎ.ಮಂಜು ಪಕ್ಷದ ಅಭ್ಯರ್ಥಿಯಾದ ನಂತರ ಹಲವು ವರ್ಷಗಳಿಂದ ಕಡೆಗಣಿಸಿದ್ದ ನಾಯಕರ ಮನೆ ಬಾಗಿಲಿಗೆ ಹೋಗಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ತಮ್ಮ ಮುಖಂಡರನ್ನು ಓಲೈಕೆ ಮಾಡಿದರೆ, ಕಾರ್ಯಕರ್ತರು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು. ಎಲ್ಲಾ ಪಕ್ಷಗಳಲ್ಲೂ ಟೀಕೆ, ಟಿಪ್ಪಣಿಗಳು ಸಹಜ. ಒಮ್ಮೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರೇ ಜೆಡಿಎಸ್ ಸೂಟ್​ಕೇಸ್ ಸಂಸ್ಕೃತಿ ಬಗ್ಗೆ ಬಾಯಿಬಿಟ್ಟಿದ್ದರಲ್ಲವೇಎಂದು ಪ್ರಶ್ನಿಸಿದ ಪ್ರೀತಂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಯೋಗಾ ರಮೇಶ್, ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿರುವ ಬಗ್ಗೆ ಸಮರ್ಥಿಸಿಕೊಂಡರು. ಅವರ‌ ಅಸಮಾಧಾನ ಕುರಿತು ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮುರಳೀಮನೋಹರ್, ಸಿ.ಟಿ.ರವಿ ಸೇರಿದಂತೆ ಹಲವರು ಮಾತಕತೆ ನಡೆಸಿದ್ದಾರೆ. ಚಿಕ್ಕಪುಟ್ಟ ಗೊಂದಲಗಳಿದ್ದರೆ ನಾಲ್ಕು ಗೋಡೆಗಳ ‌ಮಧ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು.

25 ರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ :

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ಮಂಜು ಅವರು 25 ರಂದು ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಸುವರು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಲಿದ್ದು, ಕಲಾಭವನದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರೆವಣಿಗೆ ಮಾಡಲಾಗುವುದು. ಯುವಕರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಶೀರ್ವದಿಸಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಆಗಮಿಸುವ ನಿರೀಕ್ಷೆಯಿದೆ. ಆದರೆ, ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಬಂದಿದ್ದ ಜನರನ್ನ ನೋಡಿದರೇ, ಅವರುಗಳ ಶಕ್ತಿಇಷ್ಟೇನಾಎಂದು ಕಾಲೆಳೆದರು.

Intro:ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮೋದಿ ಆಗಮನ: ಶಾಸಕ ಪ್ರೀತಂ ಗೌಡ

ಹಾಸನ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ದಿನಾಂಕ ನಿಗದಿಯಾಗಿಲ್ಲವೆಂದು ಶಾಸಕ ಪ್ರೀತಂ ಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಜೆಡಿಎಸ್ ಬಗ್ಗೆ ಅಸಮಾಧಾನವಿದೆ. ನಾನೇನು ಆಕಸ್ಮಿಕವಾಗಿ, ಚೀಟಿ ಅಥವಾ ಲಾಟರಿ ಎತ್ತಿ ಶಾಸಕನಾಗಿಲ್ಲ. ಜನತೆಯ ವಿಶ್ವಾಸಗಳಿಸಿ 5 ವರ್ಷಹಗಳಿಂದ ಹಗಲು,ರಾತ್ರಿ ಸಮಾಜಸೇವೆ ಮಾಡಿ ಸ್ಥಾನ ಅಲಂಕರಿಸಿದ್ದೇನೆ ಎಂದು ಟಾಂಗ್ ನೀಡಿದರು.
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗುವರು. ಚುನಾವಣೆ ಫಲಿತಾಂಶ ಆಶಾದಾಯಕವಾಗಿರಲಿದ್ದು, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಎಂದು ಭವಿಷ್ಯ ನುಡಿದರು‌.
ಎ.ಮಂಜು ಪಕ್ಷದ ಅಭ್ಯರ್ಥಿಯಾದ ನಂತರ ಹಲವು ವರ್ಷಗಳಿಂದ ಕಡೆಗಣಿಸಿದ್ದ ನಾಯಕರ ಮನೆ ಬಾಗಿಲಿಗೆ ಹೋಗಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ತಮ್ಮ ಮುಖಂಡರನ್ನು ಓಲೈಕೆ ಮಾಡಿದರೆ ಕಾರ್ಯಕರ್ತರ ಹೇಗೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಎಲ್ಲಾ ಪಕ್ಷಗಳಲ್ಲೂ ಟೀಕೆ, ಟಿಪ್ಪಣಿಗಳು ಸಹಜ.ಒಮ್ಮೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರೇ ಸೂಟ್ ಕೇಸ್ ಸಂಸ್ಕೃತಿ ಇರಲಿಲ್ಲವೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಯೋಗಾ ರಮೇಶ್ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿರುವ ಬಗ್ಗೆ ಸಮರ್ಥಿಸಿಕೊಂಡರು.
ಅವರ‌ ಅಸಮಾಧಾನ ಕುರಿತು ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ,
ಜಗದೀಶ್ ಶೆಟ್ಟರ್, ಮುರಳೀ ಮನೋಹರ್, ಸಿ.ಟಿ.ರವಿ ಸೇರಿದಂತೆ ಹಲವರು ಮಾತಕತೆ ನಡೆಸಿದ್ದಾರೆ. ಚಿಕ್ಕಪುಟ್ಟ ಗೊಂದಲಗಳಿದ್ದರೆ ನಾಲ್ಕು ಗೋಡೆಗಳ ‌ಮಧ್ಯೆ ನಾವೇ ಬಗೆಹರಿಸಿಕೊಳ್ಳುತ್ತೇವೆ  ಎಂದರು.
25 ರಂದು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ:
ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ಮಂಜು ಅವರು 25 ರಂದು ಬೆಳಿಗ್ಗೆ 10.30 ನಾಮಪತ್ರ ಸಲ್ಲಿಸುವರು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸಲಿದ್ದು, ಕಲಾಭವನದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರೆವಣಿಗೆ ಮಾಡಲಾಗುವುದು.ಯುವಕರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಶೀರ್ವದಿಸಬೇಕು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿ.ಶ್ರೀನಿವಾಸ್ ಪ್ರಸಾದ್ ಆಗಮಿಸುವ ನಿರೀಕ್ಷೆ ಇದ್ದು, ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಇಷ್ಟೇನ ಶಕ್ತಿ ಇಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ ಜೆಡಿಎಸ್ ಕುಟುಕಿದರು‌

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.