ಹಾಸನ : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವಧಿಯ ವೇಳೆ ಜಿಲ್ಲೆಯ ಅವರ ಆಪ್ತ ಗುತ್ತಿಗೆದಾರರಿಗೆ ಹಾಗೂ ಬೆಂಬಲಿಗರಿಗೆ ಮಂಜೂರಾಗಿದ್ದ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನರಿಗೆ ಅನುಕೂಲವಾಗುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ. ಮಳೆ ಬರುತ್ತಿರುವ ಕಾರಣ ಕೆಲವು ಕಾಮಗಾರಿಗಳ ವೇಗ ಕಡಿಮೆ ಆಗಿದೆ. ಆದರೆ, ಮಾಜಿ ಸಚಿವ ರೇವಣ್ಣ ಅವರ ಬೆಂಬಲಿಗರಿಗೆ ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರೆಸಲು ಬಿಡುವುದಿಲ್ಲ ಎಂದರು.
ಕೇವಲ ಕಟ್ಟಡಗಳನ್ನು ಕಟ್ಟಿಸಿ ಗುತ್ತಿಗೆದಾರರಿಗೆ 400 ಕೋಟಿ ರೂ. ಪ್ಯಾಕೇಜ್ ತರುವುದು ಅಭಿವೃದ್ಧಿಯಲ್ಲ. ಜನರಿಗೆ ಬೇಕಾಗಿರುವುದು ಅಗತ್ಯ ಸೌಕರ್ಯಗಳು. ಮೊದಲು ಅವುಗಳು ಸಿಗುವಂತಾಗಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುವತ್ತ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದೆ ಎಂದು ಹೇಳಿದರು.