ETV Bharat / state

ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಶಾಸಕ ಹೆಚ್ ಕೆ ಕುಮಾರಸ್ವಾಮಿ ಗುದ್ದಲಿ ಪೂಜೆ.. - MLA H K Kumaraswamy

ಒಂದೂವರೆ ವರ್ಷದ ಹಿಂದೆ ಸುಮಾರು 3 ಅಂಬೇಡ್ಕರ್ ವಸತಿ ಶಾಲೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಯಸಳೂರು, ಮಗ್ಗೆ ಹಾಗೂ ಅಗಲಟ್ಟಿ ಗ್ರಾಮಗಳಲ್ಲಿ ತಲಾ ₹20 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು ಯೋಜಿಸಲಾಗಿದೆ.

MLA H. K. Kumaraswamy drived construction of Ambedkar residential school
ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹೆಚ್. ಕೆ. ಕುಮಾರಸ್ವಾಮಿ
author img

By

Published : Jun 6, 2020, 10:48 PM IST

ಸಕಲೇಶಪುರ: ನಗರದ ಮಕ್ಕಳ ಜೊತೆ ಗ್ರಾಮೀಣ ಭಾಗದ ಮಕ್ಕಳು ಸರಿಸಮಾನವಾಗಿ ಪೈಪೋಟಿ ಮಾಡಲು ಸರ್ಕಾರ ಅಂಬೇಡ್ಕರ್ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹೆಚ್ ಕೆ ಕುಮಾರಸ್ವಾಮಿ ಹೇಳಿದರು.

ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

ತಾಲೂಕಿನ ಯಸಳೂರು ಹೋಬಳಿಯಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಹೆಚ್ ಕೆ ಕುಮಾರಸ್ವಾಮಿ ಗುದ್ದಲಿಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಒಂದೂವರೆ ವರ್ಷದ ಹಿಂದೆ ಸುಮಾರು 3 ಅಂಬೇಡ್ಕರ್ ವಸತಿ ಶಾಲೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಯಸಳೂರು, ಮಗ್ಗೆ ಹಾಗೂ ಅಗಲಟ್ಟಿ ಗ್ರಾಮಗಳಲ್ಲಿ ತಲಾ ₹20 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು ಯೋಜಿಸಲಾಗಿದೆ.

ಎಲ್ಲಾ ವರ್ಗದ ಬಡ ಮಕ್ಕಳಿಗೆ ಇಲ್ಲಿ ಅವಕಾಶವಿದೆ. ಕ್ರೀಡಾಂಗಣ, ಗ್ರಂಥಾಲಯ, ವಸತಿ, ಲ್ಯಾಬ್ ಸೇರಿ ಎಲ್ಲಾ ಸೌಲಭ್ಯಗಳನ್ನು ಈ ಶಾಲೆ ಹೊಂದಿರುತ್ತದೆ. ಪೋಷಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ಇದೇ ವೇಳೆ ಜಿಪಂ ಸದಸ್ಯೆ ಉಜ್ಮಾರುಜ್ವಿ ಮಾತನಾಡಿ, ಗ್ರಾಮೀಣ ಭಾಗದವರು ಮಕ್ಕಳನ್ನು ಇಂತಹ ಶಾಲೆಗಳಲ್ಲಿ ದಾಖಲು ಮಾಡಬೇಕು. ಇದೀಗ ಎಲ್ಲೆಡೆ ಕೊರೊನಾ ಕಾಡುತ್ತಿದೆ. ಮಕ್ಕಳ ಆರೋಗ್ಯದ ರಕ್ಷಣೆಗಾಗಿ ಸಹ ಇಂತಹ ಶಾಲೆಗಳಲ್ಲಿ ಸೇರ್ಪಡೆ ಮಾಡುವುದು ಒಳ್ಳೆಯದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.