ETV Bharat / state

ಕ್ಷೇತ್ರದಲ್ಲಿ ನಾಲ್ಕು ವಸತಿ ಶಾಲೆ ನಿರ್ಮಾಣ ಹಂತದಲ್ಲಿವೆ.. ಶಾಸಕ ಎ ಟಿ ರಾಮಸ್ವಾಮಿ - ಶಾಸಕ ಎ.ಟಿ. ರಾಮಸ್ವಾಮಿ

ಕಳೆದ ಹತ್ತು ವರ್ಷಗಳಿಂದ ಒತ್ತವರಿಯಾಗಿದ್ದ ಬರಗೂರು ವಸತಿ ಶಾಲೆಯ ಜಾಗ ತೆರವುಗೊಳಿಸಿ ಭೂತದ ಬಂಗಲೆಯಂತಿದ್ದ ಕಟ್ಟಡವನ್ನು ಅಭಿವೃದ್ಧಿಪಡಿಸಿ ಕಾಂಪೌಂಡ್ ಸ್ಥಾಪಿಸಿ ಅದಕ್ಕೊಂದು ಹೊಸ ರೂಪ ನೀಡಲಾಗಿದೆ..

at ramaswamy
at ramaswamy
author img

By

Published : Sep 19, 2020, 5:48 PM IST

ಅರಕಲಗೂಡು (ಹಾಸನ): ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಶಾಸಕ ಎ ಟಿ ರಾಮಸ್ವಾಮಿ ಇಂದಿರಾ ವಸತಿ ಶಾಲೆ ಸಂಕೀರ್ಣ ಕಟ್ಟಡದ ಕಾಮಗಾರಿ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಾಲ್ಕು ವಸತಿ ಶಾಲೆ ನಿರ್ಮಾಣ ಹಂತದಲ್ಲಿವೆ. ಈ ಭಾಗದಲ್ಲಿ ಕೆಶಿಪ್ ರಸ್ತೆ ಸಹ ಹಾದು ಹೋಗಲಿದೆ. ವಾಣಿಜ್ಯ ಕೇಂದ್ರವಾದ ಕೇರಳಾಪುರ ಮತ್ತು ಕಾಳೇನಹಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದರು.

ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಎ ಟಿ ರಾಮಸ್ವಾಮಿ

ಶೈಕ್ಷಣಿಕವಾಗಿ ಮಕ್ಕಳು ಅಭಿವೃದ್ಧಿ ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಶಾಸಕನಾದ ಬಳಿಕ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ವಸತಿ ಶಾಲೆ ಮಂಜೂರು ಮಾಡಿಸಿರುವೆ. ಗುಡ್ಡೇನಹಳ್ಳಿ, ಹೊನ್ನವಳ್ಳಿ ಬಳಿ ವಸತಿ ಶಾಲೆಗಳು ನಿರ್ಮಾಣ ಹಂತದಲ್ಲಿವೆ. ಮಲ್ಲಿಪಟ್ಟಣ ರಸ್ತೆಯ ಚೌರಗಲ್ ಫಾರಂ ಬಳಿ 10 ಎಕರೆ ಜಾಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿ ಕೂಡ ಆರಂಭಿಸಲಾಗಿದೆ. ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾಂಪೌಂಡ್ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಲು 4 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ಒತ್ತವರಿಯಾಗಿದ್ದ ಬರಗೂರು ವಸತಿ ಶಾಲೆಯ ಜಾಗ ತೆರವುಗೊಳಿಸಿ ಭೂತದ ಬಂಗಲೆಯಂತಿದ್ದ ಕಟ್ಟಡವನ್ನು ಅಭಿವೃದ್ಧಿಪಡಿಸಿ ಕಾಂಪೌಂಡ್ ಸ್ಥಾಪಿಸಿ ಅದಕ್ಕೊಂದು ಹೊಸ ರೂಪ ನೀಡಲಾಗಿದೆ. ಇನ್ನುಳಿದಂತೆ ದೊಡ್ಡಮಗ್ಗೆ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಬರಗೂರು ಬಳಿ ನೀರಾವರಿ ಇಲಾಖೆಗೆ ಸೇರಿದ 5 ಎಕರೆ ಜಾಗವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ 32 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ.

ಕಟ್ಟಡ ಮಂಜೂರಾತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ವಸತಿ ಶಾಲೆಗಳ ಸದುದ್ದೇಶ ಈಡೇರಬೇಕಾದ್ರೆ ಪ್ರತಿ ಹಂತದಲ್ಲೂ ಗುಣಮಟ್ಟದ ಕಾಮಗಾರಿ ಆಗಬೇಕು. ಗ್ರಾಮಸ್ಥರು ಹೆಚ್ಚು ನಿಗಾವಹಿಸಬೇಕು ಎಂದು ಹೇಳಿದರು. ಗ್ರಾಪಂ ಪಿಡಿಒ ಕುಮಾರಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಸಂತೋಷ್ ಗೌಡ, ಅಶೋಕ್‌ಗೌಡ, ವೆಂಕಟೇಶ್, ನಾಗೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.