ETV Bharat / state

ಏಪ್ರಿಲ್ ಅಂತ್ಯದಲ್ಲಿ ’’ಹೌಸ್ ಫಾರ್ ಆಲ್’’ ಯೋಜನೆ ಪೂರ್ಣ : ವಿ.ಸೋಮಣ್ಣ ಅಭಯ

author img

By

Published : Mar 16, 2021, 8:02 AM IST

ರಾಜ್ಯದ ವಿವಿಧೆಡೆ ಮನೆಗಳ ನಿರ್ಮಾಣ ಹಂತದ ಕಾಮಗಾರಿ ಕೆಲವೆಡೆ ಸ್ಥಗಿತವಾಗಿದೆ. ಇನ್ನು ಕೆಲವೆಡೆ ಪ್ರಗತಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಕಾಮಗಾರಿ ವಿಳಂಬಕ್ಕೆ ಪರಿಹಾರ ಕಂಡುಕೊಳ್ಳಲು ಗೃಹ ಸಚಿವರು, ಕಂದಾಯ ಸಚಿವರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ. ಕಂದಾಯ ಇಲಾಖೆಯ ಸಹಕಾರದೊಂದಿಗೆ ಗ್ರಾಮೀಣ ಭಾಗದ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

Minister V. Somanna Press Meet in Hasana
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ

ಹಾಸನ/ಅರಸೀಕೆರೆ: ನಗರದಲ್ಲಿ ಹೌಸಿಂಗ್ ಫಾರ್ ಆಲ್ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಮನೆ ನಿರ್ಮಾಣ ಕಾಮಗಾರಿ ಏಪ್ರಿಲ್ ಅಂತ್ಯದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಅರಸೀಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಹೌಸ್ ಫಾರ್ ಆಲ್ ಈ ಯೋಜನೆಯಡಿ ಸುಮಾರು 6 ಲಕ್ಷ ಕುಟುಂಬಗಳ ಅರ್ಹ ಬಡ ಫಲಾನುಭವಿಗಳಿಗೆ ಮನೆ ಮಂಜೂರಾಗಿದೆ. ಈ ಯೋಜನೆ ದುರುಪಯೋಗಪಡಿಸಿಕೊಂಡು ಅನರ್ಹರಿಗೆ ಮನೆ ಮಂಜೂರಾಗಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಎಚ್ಚರಿಕೆ ನೀಡಿದರು. ಈ ಯೋಜನೆಯಡಿ ರಾಜ್ಯದ ವಿವಿಧೆಡೆ ಮನೆಗಳ ನಿರ್ಮಾಣ ಹಂತದ ಕಾಮಗಾರಿ ಕೆಲವೆಡೆಗಳಲ್ಲಿ ಸ್ಥಗಿತವಾಗಿದೆ. ಇನ್ನು ಕೆಲವೆಡೆ ಪ್ರಗತಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ. ಕಾಮಗಾರಿ ವಿಳಂಬಕ್ಕೆ ಪರಿಹಾರ ಕಂಡುಕೊಳ್ಳಲು ಗೃಹ ಸಚಿವರು, ಕಂದಾಯ ಸಚಿವರನ್ನೊಳಗೊಂಡ ಉಪ ಸಮಿತಿ ರಚಿಸಲಾಗಿದೆ. ಕಂದಾಯ ಇಲಾಖೆಯ ಸಹಕಾರದೊಂದಿಗೆ ಗ್ರಾಮೀಣ ಭಾಗದ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ

ಈ ಯೋಜನೆಯಡಿ ಅರಸೀಕೆರೆ ನಗರದಲ್ಲಿ ಸುಮಾರು 1,200 ಮನೆಗಳನ್ನೊಳಗೊಂಡ ಸಮುಚ್ಛಯ ನಿರ್ಮಾಣ ಕಾಮಗಾರಿ ಕುಂಠಿತವಾಗಿರುವುದರ ಬಗ್ಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ನನ್ನ ಬಳಿ 2-3 ಬಾರಿ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವಸತಿ ಮನೆಗಳ ಸಮುಚ್ಚಯಕ್ಕೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಮ್ಮ ಇಲಾಖೆಯ ಇತಿ-ಮಿತಿ ಹಾಗೂ ಅನುದಾನದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ಓದಿ : ನಕಲಿ ಚಿನ್ನ ನೀಡಿ ಬರೋಬ್ಬರಿ 4 ಲಕ್ಷ ರೂ. ವಂಚನೆ: ಕೊನೆಗೂ ತಗಲಾಕಿಕೊಂಡ ಖತರ್ನಾಕ್ ಟೀಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.