ETV Bharat / state

ಬಿಎಸ್​ವೈ ಕೊಟ್ಟ ಮಾತಿನಂತೆ ನಡೆದುಕೊಂಡ ಧೀಮಂತ ನಾಯಕ: ಸಚಿವ ಕೆ.ಗೋಪಾಲಯ್ಯ

ವಿಶ್ವನಾಥ್ ಅವರನ್ನು ಸಾಹಿತ್ಯ ಕೋಟಾದಲ್ಲಿ ಆಯ್ಕೆ ಮಾಡಿದ್ದಾರೆ. ಹಾಗೇನಾದ್ರು ಸಮಸ್ಯೆ ಇದ್ದರೆ ಅದನ್ನ ನಾಯಕರು ಬಗೆಹರಿಸುತ್ತಾರೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

Minister K. Gopalaiah
ಬಿಎಸ್​ವೈ ಕೊಟ್ಟ ಮಾತಿನಂತೆ ನಡೆದುಕೊಂಡ ಧೀಮಂತ ನಾಯಕ: ಸಚಿವ ಕೆ.ಗೋಪಾಲಯ್ಯ
author img

By

Published : Jul 27, 2020, 1:04 PM IST

ಹಾಸನ: ಸಿಎಂ ಬಿ.ಎಸ್​.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡ ಧೀಮಂತ ನಾಯಕ. ರಾಜಕಾರಣದಲ್ಲಿ ಅನೇಕ ನಾಯಕರನ್ನ ನೋಡಿದ್ದೇವೆ. ಆದ್ರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ನಮ್ಮ ಯಡಿಯೂರಪ್ಪನವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಬಿಎಸ್​​ವೈ ಗುಣಗಾನ ಮಾಡಿದರು.

ಬಿಎಸ್​ವೈ ಕೊಟ್ಟ ಮಾತಿನಂತೆ ನಡೆದುಕೊಂಡ ಧೀಮಂತ ನಾಯಕ: ಸಚಿವ ಕೆ.ಗೋಪಾಲಯ್ಯ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಏನು ಮಾತುಕೊಟ್ಟಿದ್ದಾರೋ ಆ ಮಾತಿನಂತೆ ನಡೆದುಕೊಂಡಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿ ವಿಶ್ವನಾಥ್ ಅವರನ್ನು ವಿಧಾನ ಪರಿಷತ್​ಗೆ ಆಯ್ಕೆ ವಿಚಾರವಾಗಿ ‌ಮಾತನಾಡಿ, ಜೆಡಿಎಸ್ ನಾಯಕರ ಮಾತಿಗೆ ತಿರುಗೇಟು ನೀಡಿದರು. ನಮ್ಮ ನಾಯಕರು ವಿಶ್ವನಾಥ್ ಅವರನ್ನು ಸಾಹಿತ್ಯ ಕೋಟಾದಲ್ಲಿ ಆಯ್ಕೆ ಮಾಡಿದ್ದಾರೆ. ಹಾಗೇನಾದ್ರು ಸಮಸ್ಯೆ ಇದ್ದರೆ ಅದನ್ನ ನಾಯಕರು ಬಗೆಹರಿಸುತ್ತಾರೆ ಎಂದು ಸಮರ್ಥನೆ ಮಾಡಿಕೊಂಡರು.

ಕೊರೊನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಯಾವುದೇ ಹಗರಣ ನಡೆದಿಲ್ಲ. ಎರಡು ಸಾವಿರ, ಮೂರು ಸಾವಿರ ಕೋಟಿ ಅವ್ಯವಹಾರ ಅನ್ನೋದು ಸುಳ್ಳು. ಈ ಸಂಬಂಧ ಎಲ್ಲಾ ಲೆಕ್ಕ ನೀಡಿ ಆಗಿದೆ. ಪ್ರಾರಂಭದ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಇತ್ತು. ಹಾಗಾಗಿ ಕೆಲ ವಸ್ತುಗಳನ್ನ ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗಿದೆ. ಈ ಕೋವಿಡ್ ವಿಚಾರದಲ್ಲಿ ಸರ್ಕಾರ ಎಲ್ಲೂ ಎಡವಿಲ್ಲ. ನಮ್ಮ ಸರ್ಕಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದೆ ಎಂದರು.

ಹಾಸನದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೊಂದು ಸಮಸ್ಯೆ ಎದುರಾಗಿರೋದು ಇದೇ ಮೊದಲು. ಆದರೂ ಯಾವುದೇ ಸಮಸ್ಯೆ ಆಗದಂತೆ ಸಿಎಂ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.